ಕಮಲ್ ಹಾಸನ್, ಅನಿಲ್ ಕಪೂರ್ 'ಕ್ರೇಜಿ ಲೋಕ'
ಕವಿತಾ ಲಂಕೇಶ್ ನಿರ್ದೇಶನ, ರವಿಚಂದ್ರನ್ ನಾಯಕತ್ವದ 'ಕ್ರೇಜಿ ಲೋಕ' ಚಿತ್ರದಲ್ಲಿ ಅನಿಲ್ ಕಪೂರ್ ಮತ್ತು ಕಮಲಹಾಸನ್ ನಟಿಸುತ್ತಿದ್ದಾರೆಯೇ? ಹೀಗೊಂದು ಪ್ರಶ್ನೆ ಗಾಂಧಿನಗರದ ಸುತ್ತ ಗಿರಕಿ ಹೊಡೆಯುತ್ತಿದೆ. ಕಾರಣ ಕ್ರೇಜಿ ಲೋಕ ಚಿತ್ರದ ನಿರ್ದೇಶಕಿ ಕವಿತಾ ಲಂಕೇಶ್ ಮಾತು. ಸಾಧ್ಯತೆ ಇದೆ, ಆದರೆ ಕನ್ನಡದಲ್ಲಲ್ಲ.
ಕನ್ನಡದ ಕ್ರೇಜಿ ಲೋಕವನ್ನು ಹಿಂದಿ ಮತ್ತು ತಮಿಳಿಗೆ ರೀಮೇಕ್ ಮಾಡಲು ಕವಿತಾ ಲಂಕೇಶ್ ನಿರ್ಧರಿಸಿದ್ದಾರೆ. ಅದಕ್ಕೆ, ಹಿಂದಿಯಲ್ಲಿ ಅನಿಲ್ ಕಪೂರ್ ಹಾಗೂ ತಮಿಳಿನಲ್ಲಿ ಕಮಲಹಾಸನ್ ಸೂಕ್ತ ಆಯ್ಕೆ ಎಂಬುದು ಕವಿತಾ ಅಭಿಪ್ರಾಯ. ಕವಿತಾ, ಅವರಿಬ್ಬರನ್ನೂ ಸಂಪರ್ಕಿಸಿ ತಮ್ಮ ಆಸೆ ತಿಳಿಸಲಿದ್ದಾರಂತೆ. ಅವರು ಏನನ್ನುತ್ತಾರೋ? ಆದರೆ ಆ ಕಡೆಯಿಂದ ಗ್ರೀನ್ ಸಿಗ್ನಲ್ ಸಿಕ್ಕರೆ ಕವಿತಾ ಲಕ್ಕಿ.
ಇನ್ನೊಂದು ಮುಖ್ಯ ವಿಷಯವೆಂದರೆ ಈ ಚಿತ್ರದಲ್ಲಿ ಜಾಕಿಶ್ರಾಫ್ ನಟಿಸಲಿದ್ದಾರಂತೆ. ಅದಕ್ಕೊಪ್ಪಿರುವ ಜಾಕಿ ಆಗಾಗ, ಯಾವಾಗ ಪ್ರಾರಂಭ ಎಂದು ಕವಿತಾರನ್ನು ಕೇಳುತ್ತಿದ್ದಾರಂತೆ. ಆದರೆ ಅನಿಲ್ ಕಪೂರ್ ಮತ್ತು ಕಮಲಹಾಸನ್ ಒಪ್ಪಬಹುದೇ ಎಂಬುದು ಈಗ ಎಲ್ಲರೂ ಕೇಳುತ್ತಿರುವ ಪ್ರಶ್ನೆ. ಒಟ್ಟಿನಲ್ಲಿ ಕನ್ನಡದ ಕ್ರೇಜಿ ಲೋಕ 'ಆಡಿಯೋ ಬಿಡುಗಡೆ' ಮುಗಿಸಿ ಬಿಡುಗಡೆ ಹಂತಕ್ಕೆ ಕಾಲಿಟ್ಟಿದೆ. (ಒನ್ ಇಂಡಿಯಾ ಕನ್ನಡ)


Click it and Unblock the Notifications











