ಚಾಲೆಂಜಿಂಗ್ ಸ್ಟಾರ್ ದರ್ಶನ್ ಸಿಡಿಸಿದ ಹೊಸ ಬಾಂಬ್

Darshan
ನನಗೆ ಬರುವ ಜನವರಿ 20ರ ವರೆಗೆ ಸಮಯಾವಕಾಶ ಕೊಡಿ. ನನ್ನ ಜೈಲು ಪ್ರಕರಣದ ಹಿಂದಿನ ಬೆಚ್ಚಿ ಬೀಳುವ ಸತ್ಯವನ್ನು ತಿಳಿಸುತ್ತೇನೆ. ನನಗೆ ಚಿತ್ರರಂಗದವರೇ ವಿರೋಧಿಗಳು ಹೊರತು ನನಗೆ ಬೇರೆ ಯಾರೂ ಶತ್ರುಗಳಿಲ್ಲ ಎನ್ನುವುದು ಸಾರಥಿ ದರ್ಶನ್ ನೋವಿನ ಮಾತು.

ಮಾಧ್ಯಮದಲ್ಲಿ ಬಂದಂತೆ ನಾನು ಹೆಂಡತಿ, ಮಗನಿಗೆ ಸಿಗರೇಟ್ ನಿಂದ ಸುಟ್ಟಿರುವುದಾಗಲಿ ಅಥವಾ ಯಾವುದೇ ಚಿತ್ರಹಿಂಸೆ ನೀಡಿಲ್ಲ. ಇದು ಸತ್ಯ. ನಾನೇನೂ ಅಷ್ಟು ಕಟುಕನಲ್ಲ. ಇನ್ನು ಒಂದು ತಿಂಗಳಲ್ಲಿ ಎಲ್ಲಾ ವಿಷಯವನ್ನು ಜಗತ್ತಿಗೆ ಸಾರುವಂತೆ ಬಹಿರಂಗ ಪಡಿಸುತ್ತೇನೆ ಚಾಲೆಂಜಿಂಗ್ ಸ್ಟಾರ್ "ಚಾಲೆಂಜ್' ಮಾಡಿದ್ದಾರೆ.

ನಾನು ಮತ್ತು ನನ್ನ ಪತ್ನಿ ವಿಜಯಲಕ್ಷ್ಮಿ ಹಿಂದಿಗೂ ಇಂದಿಗೂ ಅನ್ಯೋನ್ಯವಾಗಿಯೇ ಇದ್ದೇವೆ. ನಮ್ಮ ನಡುವೆ ಹುಳಿ ಹಿಂಡುವ ಕೆಲಸ ಮಾಡಿದ್ದಾರಲ್ಲಾ ಅವರ ಜಾತಕವನ್ನು ಅಭಿಮಾನಿಗಳ ಮುಂದೆ ಬಹಿರಂಗ ಪಡಿಸುತ್ತೇನೆ. ಖಳ ನಟನ ಮಗನೊಬ್ಬ ನಾಯಕನಾಗುವುದು ನಮ್ಮ ಚಿತ್ರರಂಗದಲ್ಲಿ ಕೆಲವರಿಗೆ ಇಷ್ಟವಿಲ್ಲ.

ನಾಯಕನ ಮಕ್ಕಳು ಮಾತ್ರ ನಾಯಕನಾಗಬೇಕೆಂದು ರೂಲ್ಸ್ ಏನಾದರೂ ಇದೆಯಾ? ಚಿತ್ರೋದ್ಯಮದಲ್ಲಿ ನನ್ನನ್ನು ಎದುರಾಳಿ ಎಂದು ಭಾವಿಸಿರುವ ಕೆಲವರು ನನ್ನ ವಿರುದ್ದ ನಡೆಸಿದ ಸಂಚನ್ನು ಹೊರ ಹಾಕುತ್ತೇನೆ ಎಂದು ದರ್ಶನ್ ತೂಗುದೀಪ್ ನೀಡಿರುವ ಹೇಳಿಕೆ ಗಾಂಧಿನಗರದಲ್ಲಿ ಹೊಸ ಸಂಚಲನ ಮೂಡಿಸಿದೆ.

ದಾಂಪತ್ಯ ಜೀವನ ಎಂದ ಮೇಲೆ ಸಣ್ಣಪುಟ್ಟ ಸಮಸ್ಯೆಗಳು ಸಾಮಾನ್ಯ. ಅದನ್ನು ಯಾರು ಹೇಗೆ ದುರುಪಯೋಗ ಪಡಿಸಿಕೊಂಡರು, ನನ್ನ ಹೆಂಡತಿಗೆ ಬೇಡವಾದ ಕಿವಿಮಾತು ಹೇಳಿಕೊಟ್ಟರು ಎಲ್ಲವನ್ನೂ ಸವಿವರವಾಗಿ ತಿಳಿಸುತ್ತೇನೆ. ಇಷ್ಟು ದೊಡ್ಡ ಪರಿಣಾಮ ಎದುರಿಸ ಬೇಕಾಗಬಹುದು ಎಂದು ಅರಿಯದ ನನ್ನ ಹೆಂಡತಿ ಅವರು ಹೇಳಿದಂತೆ ನಡೆದು ಕೊಂಡಳು ಎಂದು ಹೇಳಿಕೆ ನೀಡಿದ್ದಾರೆ.

ದರ್ಶನ್ ನೀಡಿರುವ ಈ ಹೇಳಿಕೆ ಭಾರೀ ಕುತೂಹಲಕ್ಕೆ ಎಡೆ ಮಾಡಿಕೊಟ್ಟಿದೆ.

More from Filmibeat

English summary
Challenging star Darshan said, within one month I will come out with all the details behind my arrest incident.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X