ದಿಗಂತ್, ಐಂದ್ರಿತಾ ಲಿಪ್ ಟು ಲಿಪ್ 'ಪಾರಿಜಾತ' ಚುಂಬನ

ಯಾರಿಗೆ ಹೇಳಲಿ ನನ್ನ ಈ ಪ್ರಾಬ್ಲಂ ಎನ್ನುತ್ತಿದ್ದ ದಿಗಂತ್ ಗೆ ಸದ್ಯ ಇರುವ ಇನ್ನೊಂದು ಆಶಾವಾದವೆಂದರೆ ಪಾರಿಜಾತ ಚಿತ್ರ. ಮನೋಮೂರ್ತಿ ಸಂಗೀತ ನಿರ್ದೇಶನದ ಈ ಚಿತ್ರ ಈಗಾಗಲೇ ಮ್ಯೂಸಿಕಲ್ ಹಿಟ್ ಆಗ್ಬಿಟ್ಟಿದೆ. ಇದಕ್ಕಿಂತ ದೊಡ್ಡ ಸುದ್ದಿಯೆಂದರೆ ಈ ಚಿತ್ರದಲ್ಲಿ ದಿಗಂತ್ - ಐಂದ್ರಿತಾ ಲಿಪ್ ಟು ಲಿಪ್ ಕಿಸ್ಸಿಂಗ್.
ಜಯಂತ್ ಕಾಯ್ಕಿಣಿ ಬರೆದಿರುವ 'ನೀ ಮೋಹಿಸು' ಹಾಡಿನಲ್ಲಿ ದಿಗಂತ್ ಐಂದ್ರಿತಾ ತುಟಿಗೆ ತುಟಿ ಗುದ್ದಿ ಕಿಸ್ ಮಾಡಿದ್ದಾರೆ. ಈಗಾಗಲೇ ಪ್ರೀಮಿಯರ್ ನೋಡಿರುವ ಕೆಲವರು ಈ ಬಗ್ಗೆ ಕಾಮೆಂಟ್ ಕೂಡಾ ಮಾಡಿದ್ದಾರೆ. ಮತ್ತೆ ಐಂದ್ರಿತಾಗೆ ಇರುವ ಧೈರ್ಯವನ್ನು ಮೆಚ್ಚಿ ಲೊಚಗುಟ್ಟಿದ್ದಾರೆ. ದಿಗಂತ್ ಗಂತೂ ರೋಗಿ ಬಯಸಿದ್ದು ಹಾಲು ಅನ್ನ, ವೈದ್ಯ ಹೇಳಿದ್ದೂ ಹಾಲು ಅನ್ನ ಎನ್ನುವ ಹಾಗೆ ಸಿಕ್ಕಿದ್ದೇ ಸೀರುಂಡೆ ಎಂದು ಐಂದ್ರಿತಾ ತುಟಿಗೆ ಲಿಪ್ಸೀಲ್ ಗುದ್ದಿ ಬಿಟ್ಟಿದ್ದಾರೆ.
ಮನಸಾರೆ ಚಿತ್ರದಲ್ಲಿ ಕೆನ್ನೆ ಕೆಚ್ಚಿಕೊಂಡು ಸುದ್ದಿಯಾಗಿದ್ದ ಐಂದ್ರಿತಾ - ದಿಗಂತ್ ಪಾರಿಜಾತ ಚಿತ್ರದಲ್ಲೂ ಚಮ್ಮಕಚೆಲ್ಲೋ ಎಂದು ಚುಂಬನ ದೃಶ್ಯದಲ್ಲಿ ಕಾಣಿಸಿಕೊಂಡಿರುವುದು ಈ ವರೆಗೂ ಯಾಕೋ ಹಾಟ್ ನ್ಯೂಸ್ ಆಗಿ ಹೊರಹೊಮ್ಮದೇ ಇರುವುದು ಗಾಂಧಿನಗರದ ಮತ್ತೊಂದು ಅಚ್ಚರಿ.


Click it and Unblock the Notifications











