ಬೆಂಗಳೂರಿಗೆ ಖ್ಯಾತ ಹಿನ್ನೆಲೆ ಗಾಯಕಿ ಎಸ್ ಜಾನಕಿ

ಶೀಘ್ರದಲ್ಲೇ ಎಸ್ ಜಾನಕಿ ಅವರನ್ನು ಬೆಂಗಳೂರಿನ ಮನೆಗೆ ಕರೆದುಕೊಂಡು ಬರುತ್ತಿರುವುದಾಗಿ ಮುರಳಿ ಹೇಳಿದ್ದಾರೆ. ತಿರುಪತಿಗೆ ಭೇಟಿ ನೀಡಿದ್ದ ಅವರು ಖಾಸಗಿ ಹೋಟೆಲ್‌ನಲ್ಲಿ ಉಳಿದುಕೊಂಡಿದ್ದ ಸಂದರ್ಭದಲ್ಲಿ ಈ ಘಟನೆ ನಡೆದಿತ್ತು. ಬಿದ್ದ ರಭಸಕ್ಕೆ ಅವರ ತಲೆಗೆ ಬಲವಾಗಿ ಪೆಟ್ಟುಬಿದ್ದು ರಕ್ತಸ್ರಾವವಾಗಿ ಹೆಪ್ಪುಗಟ್ಟಿತ್ತು.
ತಲೆಯಲ್ಲಿ ಹೆಪ್ಪುಗಟ್ಟಿದ್ದ ರಕ್ತವನ್ನು ವೈದ್ಯರು ತೊಲಗಿಸಿದ್ದು ಜಾನಕಿ ಅವರು ಈಗ ಗುಣಮುಖರಾಗಿದ್ದಾರೆ. ವಿಶ್ರಾಂತಿ ಪಡೆಯಲು ಅವರನ್ನು ಬೆಂಗಳೂರಿನ ಮನೆಗೆ ಕರೆದುಕೊಂಡು ಬರಲಾಗುತ್ತದೆ ಎಂದಿದ್ದಾರೆ ಮುರಳಿ. ಜಾನಕಿ ಅವರು ಕೋಮಾ ಹಂತದಲ್ಲಿದ್ದಾರೆ ಎಂಬ ಸುದ್ದಿಯನ್ನು ಮುರಳಿ ಅಲ್ಲಗಳೆದಿದ್ದಾರೆ. (ಏಜೆನ್ಸೀಸ್)
More from Filmibeat
English summary
Well known playback singer S Janaki is recovered and is now out of danger. She had a fall and sustained some serious injuries while at Tirupati. The singer’s son, Murali Krishna said that he will be taking her to their home in Bangalore


Click it and Unblock the Notifications











