ಕನ್ನಡ ಚಲನಚಿತ್ರ ಸಿದ್ಲಿಂಗುಗೆ ಉಗ್ರರ ಬೆದರಿಕೆ !!

Sidlingu Movie still
ಕನ್ನಡನಾಡಿನಲ್ಲಿ ಬೇರೆ ಭಾಷೆಯ ಚಿತ್ರಗಳು ಬಿಡುಗಡೆಗೊಂಡು ಕನ್ನಡ ಚಿತ್ರಗಳಿಗೆ ಸಡ್ಡು ಹೊಡೆಯುವ ಸುದ್ದಿ ಹೊಸತೇನಲ್ಲ. ಇಂಥ ಪರಿಸ್ಥಿತಿಯನ್ನು ಕನ್ನಡ ಚಿತ್ರರಂಗ ಬಹಳಷ್ಟು ಕಂಡಿದೆ. ಕನ್ನಡದ ಬಿಗ್ ಬಜೆಟ್ ಚಿತ್ರಗಳು ಇತರ ಭಾಷೆಗಳ ದೊಡ್ಡ ಬಜೆಟ್ ಚಿತ್ರಗಳು ಬಿಡುಗಡೆಗೊಳ್ಳುವುದನ್ನು ಗಮನದಲ್ಲಿ ಇಟ್ಟುಕೊಂಡು ತಮ್ಮ ಚಿತ್ರಗಳ ಬಿಡುಗಡೆಯನ್ನು ತಡೆಹಿಡಿಯುವುದು ಒಂದು ವಿಪರ್ಯಾಸ.

ಮೂರು ಬಿಗ್ ಬಜೆಟ್ ಮತ್ತು ಹೈಪ್ ಇರುವ ಚಿತ್ರಗಳು ಕನ್ನಡದಲ್ಲಿ ಬಿಡುಗಡೆಗೆ ಸಿದ್ದವಾಗಿದೆ. ಯೋಗೀಶ್, ರಮ್ಯಾ ಅಭಿನಯದ 'ಸಿದ್ಲಿಂಗು', ಶ್ರೀನಗರ ಕಿಟ್ಟಿ, ಪ್ರಿಯಾಮಣಿ ಅಭಿನಯದ 'ಕೋ.ಕೋ.' ಮತ್ತು ಉಪೇಂದ್ರ ಅಭಿನಯದ 'ಆರಕ್ಷಕ'. ಇದರಲ್ಲಿ ಸಿದ್ಲಿಂಗು ಚಿತ್ರ ಮಾತ್ರ ಈವರೆಗಿನ ಮಾಹಿತಿಗಳ ಪ್ರಕಾರ ಈವಾರ ( 13 ಜನವರಿ ) ಬಿಡುಗಡೆಗೊಳ್ಳುತ್ತಿದೆ. ಇತರ ಭಾಷೆಗಳ ಚಿತ್ರಗಳು ಬಿಡುಗಡೆಗೊಳ್ಳುತ್ತಿರುವ ಹಿನ್ನಲೆಯಲ್ಲಿ 'ಆರಕ್ಷಕ' ಚಿತ್ರ ಬಿಡುಗಡೆ ದಿನಾಂಕವನ್ನು ಮುಂದಕ್ಕೆ ಹಾಕಿದೆ ಎನ್ನುತ್ತವೆ ಮೂಲಗಳು.

ಈ ವಾರ ತೆಲುಗಿನಲ್ಲಿ ಎರಡು ಚಿತ್ರಗಳು ಬಿಡುಗಡೆಗೊಳ್ಳುತ್ತಿವೆ. ಒಂದು ಬೆಂಗಳೂರಿನಲ್ಲಿ ಉತ್ತಮ ಮಾರುಕಟ್ಟೆ ಇರುವ ಮಹೇಶ್ ಬಾಬು ಅಭಿನಯದ 'ಬ್ಯುಸಿನೆಸ್ ಮ್ಯಾನ್' ಇನ್ನೊಂದು ವೆಂಕಟೇಶ್ ಅಭಿನಯದ 'ಬಾಡಿಗಾರ್ಡ್'. ಮಹೇಶ್ ಬಾಬು ಅಭಿನಯದ ಚಿತ್ರವನ್ನು ಪುರಿ ಜಗನ್ನಾಥ್ ನಿರ್ದೇಶಿಸುತ್ತಿದ್ದಾರೆ. ಹಾಗಾಗಿ ತೆಲುಗು ಪ್ರೇಕ್ಷಕರ ಜೊತೆ ನಮ್ಮ ಕನ್ನಡಿಗರಿಗೂ ಎಲ್ಲಿಲ್ಲದ ಆಸಕ್ತಿ !

ಇನ್ನೊಂದು ಕಡೆ ಶಂಕರ್ ನಿರ್ದೇಶನದ '3ಈಡಿಯೆಟ್' ಚಿತ್ರದ ತಮಿಳು ರಿಮೇಕ್ 'ನನ್ಬನ್' ಬಿಡುಗಡೆಗೊಳ್ಳುತ್ತಿವೆ. ಇದರಲ್ಲಿ ವಿಜಯ್ ಮುಖ್ಯ ಭೂಮಿಕೆಯಲ್ಲಿದ್ದಾರೆ. ನೆನಪಿರಲಿ, ತಮಿಳಿನ ಈ ನಟನಿಗೆ ಬೆಂಗಳೂರು ಒಳ್ಳೆ ಲಾಭ ತರುವ ಮಾರುಕಟ್ಟೆ. ಅದಕ್ಕಾಗಿ ಅಲ್ವೇ ನಮ್ಮ ಕನ್ನಡದ ಕೋಟಿ ನಿರ್ಮಾಪಕರು ಇತ್ತೀಚಿಗೆ ವಿಜಯ್ ಅಭಿನಯದ 'ವೇಲಾಯುಧಂ' ಚಿತ್ರದ ವಿತರಣೆ ಹಕ್ಕನ್ನು ಪಡೆದಿದ್ದು. ಕನ್ನಡ ಚಲನಚಿತ್ರಮಂಡಳಿಯ 'so called rules and regulation' ಗಾಳಿಗೆ ತೋರಿದ್ದು.

ಹಾಗೆಯೇ ತಮಿಳಿನಲ್ಲಿ ಸ್ಟಾರ್ ನಿರ್ದೇಶಕ ಲಿಂಗುಸ್ವಾಮಿ ನಿರ್ದೇಶನದ 'ವೆಟ್ಟೈ' ಚಿತ್ರ ಬಿಡುಗಡೆಗೊಳ್ಳುತ್ತಿದೆ. ಇದರಲ್ಲಿ ಮಾಧವನ್ ಮತ್ತು ಆರ್ಯ ಮುಖ್ಯ ಭೂಮಿಕೆಯಲ್ಲಿದ್ದಾರೆ. ಒಟ್ಟಿನಲ್ಲಿ ನಾಲ್ಕು ಪರಭಾಷೆ ಚಿತ್ರಗಳ ಜೊತೆ ಪೈಪೋಟಿ ನಡೆಸುವ ದುರ್ಗತಿ ಈ ವಾರ ನಮ್ಮ ಕನ್ನಡ ಚಿತ್ರಗಳಿಗಿವೆ.

More from Filmibeat

English summary
The coming week would be challenging for kannada movies as four big budjet movies set to release in Karnataka. Two movies each from Telugu and Tamil pose threat to Kannada flick " Siddlingu" starring Lose Mada and Ramya.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X