ಮಲ್ಲಿಕಾರನ್ನು ಮದುವೆಯಾಗಲು ಈಗಲೆ ಅರ್ಜಿ ಸಲ್ಲಿಸಿ
ಕಳೆದ ವರ್ಷ ಬಿಡುಗಡೆಗೊಂಡ ಈಕೆಯ ಇಂಗ್ಲಿಷ್ ಚಿತ್ರ 'ಹಿಸ್' ಠುಸ್ ಆದ ಮೇಲೆ ಇವಳ ಯಾವ ಚಿತ್ರ ಕೂಡ ಸೆಟ್ಟೇರಿಲ್ಲ ಅನ್ನುವುದು ಬೇರೆ ಮಾತು. ಆದರೂ ಪ್ರೀತಿ, ಪ್ರೇಮ, ಪ್ರಣಯಕ್ಕೆ ಬಿಲ್ ಕುಲ್ ಟೈಮ್ ಇಲ್ಲವಂತೆ. ದುಡ್ಡು ಬರುತ್ತೆ ಎಂದು ಸಿಕ್ಕ ಸಿಕ್ಕ ಚಿತ್ರಗಳನ್ನು ಈಕೆ ಈಗ ಒಪ್ಪಿಕೊಳ್ಳುವುದಿಲ್ಲವಂತೆ. ಮುಂದ...
ಈಕೆಗೆ ಲವ್ ಮಾಡಲೂ ಟೈಮ್ ಯಾಕೆ ಇಲ್ಲಾಂದ್ರೆ ಈಗ ಅವಳ ಕಣ್ಣು ಬರೀ ಹಾಲಿವುಡ್ ಮೇಲೆ. ಬಿಡುಗಡೆಗೆ ಸಿದ್ಧವಾಗಿರುವ ಈಕೆಯ ಎರಡನೇ ಇಂಗ್ಲಿಷ್ ಚಿತ್ರ 'ಪಾಲಿಟಿಕ್ಸ್ ಆಫ್ ಲವ್' ಮೇಲೆ ಬಹಳಷ್ಟು ಭರವಸೆ ಇಟ್ಟು ಕೊಂಡಿದ್ದಾಳೆ. ಇಷ್ಟು ಹೇಳಿದ ಮೇಲೂ ಹುಡುಗ್ರು ಸುಮ್ನಿರಬಾರದಾ, ಆದ್ರೂ ಆಕೆಯ ಬೆನ್ನು ಬಿದ್ದಿದ್ದಾರಂತೆ.
ಸದ್ಯ ಒಂಟಿಯಾಗಿರುವ ನನ್ನ ಹಿಂದೆ ಹುಡುಗರು ಬಿದ್ದಿರುವುದು ತಪ್ಪಲ್ಲ ಎಂದು ಅನುಕಂಪ ಸೂಚಿಸುವ ಮಲ್ಲಿಕಾ ನನಗೆ ಸರಿಯಾದ ಸಂಗಾತಿಯನ್ನು ಆರಿಸಲು ಈಗ ಸಮಯವಿಲ್ಲ ಎಂದು ಹುಡುಗರಿಗೆ ಸಂದೇಶ ರವಾನಿಸಿದ್ದಾಳೆ. 'ಪಾಲಿಟಿಕ್ಸ್ ಆಫ್ ಲವ್' ಚಿತ್ರದಲ್ಲಿ ಅಮೇರಿಕಾ ಅಧ್ಯಕ್ಷೀಯ ಚುನಾವಣೆಯಲ್ಲಿ ಒಬಾಮ ಸ್ಪರ್ಧಿಸಿದಾಗ ಡೆಮೊಕ್ರಟಿಕ್ ಪಕ್ಷದ ಕಾರ್ಯಕರ್ತೆಯಾಗಿ ಅವರಿಗೆ ನೆರವಾದ ಭಾರತೀಯ ಯುವತಿಯ ಪಾತ್ರದಲ್ಲಿ ಮಲ್ಲಿಕಾ ಕಾಣಿಸಿಕೊಳ್ಳಲಿದ್ದಾರೆ.
ಈ ಅರ್ಹತೆಗಳು ನಿಮ್ಮಲ್ಲಿದ್ದಲ್ಲಿ ನೀವೂ ಕೂಡಾ ಮಲ್ಲಿಕಾ ಶೆರಾವತ್‌ರನ್ನು ವರಿಸಲು ಅರ್ಜಿ ಸಲ್ಲಿಸಬಹುದು. ಯಾರಿಗೆ ಗೊತ್ತು ಇಪ್ಪತ್ತು ಇಪ್ಪತ್ತೈದು ವರ್ಷಗಳ ಬಳಿಕ ಸಿಗಲೂ ಬಹುದು!? ಅಂದಹಾಗೆ ಹುಡುಗನ ಕ್ಯಾರೆಕ್ಟರ್ಸ್ ಹೀಗಿರಬೇಕು. ಹುಡುಗ ಗುಣವಂತನಾಗಿರಬೇಕು. ಜೊತೆಗೆ ಉತ್ತಮ ಮೈಕಟ್ಟು ಹೊಂದಿರಬೇಕು. ಸಸ್ಯಾಹಾರಿ ಆಗಿರಬೇಕು. ಹುಡುಗನಿಗೆ ಯೋಗದ ಬಗ್ಗೆ ಜ್ಞಾನವಿರಬೇಕು. ಆದರೆ ಹುಡುಗನಿಗೆ ಈಗಾಗಲೆ ಮದುವೆಯಾಗಿರಬೇಕೆ ಇಲ್ಲವೆ ಎಂಬುದನ್ನು ತಿಳಿಸಿಲ್ಲ. (ಒನ್‍ಇಂಡಿಯಾ ಕನ್ನಡ)


Click it and Unblock the Notifications











