ಬಾಕ್ಸಾಫೀಸಲ್ಲಿ ಪರಮಾತ್ಮ ಕಲೆಕ್ಷನ್ಸ್ ರು.9 ಕೋಟಿ

ಚಿತ್ರದ ನಿರ್ಮಾಪಕ ಮತ್ತು ಹಂಚಿಕೆದಾರ ಜಯಣ್ಣ ಈ ಅಂಕಿಅಂಶವನ್ನು ಬಿಡುಗಡೆಗೊಳಿಸಿದ್ದು ರಾಜ್ಯದ ಎಲ್ಲಾ ಭಾಗಗಳಲ್ಲಿ ಚಿತ್ರಕ್ಕೆ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗುತ್ತಿದೆ. ಮುಖ್ಯವಾಗಿ ಉತ್ತರ ಕರ್ನಾಟಕ ಮತ್ತು ಕರಾವಳಿ ಪ್ರದೇಶದಲ್ಲಿ ಚಿತ್ರ ಪ್ರಚಂಡ ಯಶಸ್ಸಿನತ್ತ ಸಾಗುತ್ತಿದೆ ಎಂದು ಸಂತಸ ವ್ಯಕ್ತಪಡಿಸಿದ್ದಾರೆ.
ಚಿತ್ರಕ್ಕೆ ಮಿಶ್ರ ಪ್ರತಿಕ್ರಿಯೆ ವ್ಯಕ್ತವಾದರೂ ಎಲ್ಲಡೆ ಹೌಸ್‌ಫುಲ್ ಪ್ರದರ್ಶನ ಕಾಣುತ್ತಿದೆ. ಚಿತ್ರದ ಹಾಡುಗಳು ಸೂಪರ್ ಹಿಟ್ ಆಗಿದ್ದು ಗಲ್ಲಾಪೆಟ್ಟಿಗೆಯಲ್ಲಿ ಮುನ್ನುಗ್ಗಲು ಪ್ರಮುಖ ಕಾರಣ. ಅಲ್ಲದೆ ಮಾಧ್ಯಮಗಳ ವಿಮರ್ಶೆ ಏನೇ ಇದ್ದರೂ ಪುನೀತ್ ಚಿತ್ರವನ್ನು ಒಂದು ಕಿತ ನೋಡೇ ಬಿಡುವ ಎನ್ನುವ ಫ್ಯಾಮಿಲಿ ಕ್ರೌಡ್ ಇರುವುದರಿಂದ ಪುನೀತ್ ಚಿತ್ರಗಳು ಎಂದೂ ನಿರ್ಮಾಪಕರಿಗೆ ನಷ್ಟ ತಂದಿಲ್ಲ.
ಸಾಲು ಸಾಲು ದಸರಾ ರಜೆಯ ನಂತರ ಚಿತ್ರದ ಕಲೆಕ್ಷನ್ ಹಿನ್ನಡೆ ಅನುಭವಿಸಬಹುದು ಎಂಬ ಅಂದಾಜು ಹುಸಿಯಾಗಿದೆ. ರಜೆಯ ನಂತರ ಕೂಡಾ ಚಿತ್ರ ನಿರ್ಮಾಪಕರ ಪಾಲಿಗೆ 'ಪರಮಾತ್ಮ' ನಾಗುವತ್ತ ಸಾಗುತ್ತಿದೆ. ದರ್ಶನ್ ಅಭಿನಯದ 'ಸಾರಥಿ' ಚಿತ್ರ ಕೂಡಾ ಗಲ್ಲಾಪೆಟ್ಟಿಗೆ ಲೂಟಿ ಹೊಡೆಯುತ್ತಿದೆ. (ಒನ್‍ಇಂಡಿಯಾ ಕನ್ನಡ)


Click it and Unblock the Notifications











