For Quick Alerts
  ALLOW NOTIFICATIONS  
  For Daily Alerts

  ದಟ್ಸ್ ಕನ್ನಡಕ್ಕೆ ರವಿಚಂದ್ರನ್ ನೀಡಿದ ಸಂದರ್ಶನ

  |

  ನಮ್ಮ ಸಿನಿಪತ್ರಕರ್ತರಿಗೆ ಕ್ರೇಜಿಸ್ಟಾರ್ ರವಿಚಂದ್ರನ್ ನೀಡಿದ ಸಂದರ್ಶನದ ಆಯ್ದ ಭಾಗ ಇಲ್ಲಿದೆ.

  ಪ್ರ : ಸಿನಿಮಾ ಮಂದಿ ದಿನಕ್ಕೊಬ್ಬರಂತೆ ರಾಜಕೀಯ ಪ್ರವೇಶ ಮಾಡುತ್ತಿದ್ದಾರೆ. ನೀವು ಯಾಕೆ ಒಂದು ಕೈ ನೋಡಬಾರದು?
  ರವಿ: ಇಲ್ಲಿ ಇರುವ ಅಸೋಷಿಯೇಶನ್ ಬಿಕ್ಕಟ್ಟು ಬಗೆಹರಿಸಲು ಆಗದವರು ಅಲ್ಲಿ ಹೋಗಿ ಹೋಗಿ ಏನು ಮಾಡಲು ಸಾಧ್ಯ. ಇಲ್ಲೇ ಬೆಟ್ಟದಷ್ಟು ಕೆಲಸವಿದೆ. ಇನ್ನು ರಾಜಕೀಯಕ್ಕೆ ಹೋಗಿ ಏನು ಮಾಡಲಿ. ಇಲ್ಲಿದ್ದು ಜಯಿಸಲಾಗದವನು ಅಲ್ಲೆಲ್ಲೋ ಹೋಗಿ ಏನು ಮಾಡಲು ಸಾಧ್ಯ.

  ಪ್ರ : ಹಾಗಾದರೆ ಈಗ ಹೋಗಿ 'ಕೈ' ಜೋಡಿಸಿದವರಿಗೆ ಏನು ಹೇಳಲು ಬಯಸುತ್ತೀರಿ?
  ರವಿ: ಕೈ ಬೇಕಾದರೂ ಜೋಡಿಸಲಿ, ಹೊರೆ ಬೇಕಾದರೂ ಹೊರಲಿ. ಆದರೆ ಹೆಸರು ತಂದುಕೊಟ್ಟ ಚಿತ್ರೋದ್ಯಮವನ್ನು ಮೆರೆಯದಿದ್ದರೆ ಸಾಕು.

  ಪ್ರ : ಯಾವ ಪಕ್ಷವಾದರೂ ನಿಮಗೆ ಆಫರ್ ಕೊಟ್ಟಿದ್ದಾರಾ?
  ರವಿ: ಆಫರ್ ಕೊಡೋಕೆ ಅವರ್ಯಾರು? ರಾಜಕೀಯ ಮಾಡುವುದಿದ್ದರೆ ಇಂದಲ್ಲ ಎಂದೋ ಮಾಡುತ್ತಿದ್ದೆ. ರವಿಚಂದ್ರನ್ ಅಂದರೆ ಸಿನಿಮಾ, ಸಿನಿಮಾ ಅಂದ್ರೆ ರವಿಚಂದ್ರನ್.

  ಪ್ರ : ನಿಮ್ಮ ಸಿನಿಮಾಯಾನದ ಬಗ್ಗೆ?
  ರವಿ: ದಶಮುಖ ರೆಡಿಯಾಗುತ್ತಿದೆ. ನರಸಿಂಹ ಇದೇ ತಿಂಗಳು 23ಕ್ಕೆ ಬಿಡುಗಡೆಯಾಗುತ್ತಿದೆ. ಕ್ರೇಜಿಲೋಕ ಮುಂದಿನ ತಿಂಗಳು. ಪರಮಶಿವ ಶೂಟಿಂಗ್ ಬ್ಯಾಲನ್ಸ್ ಇದೆ. ಅವನೊಬ್ಬ ಅಣಜಿ ನಾಗಾರಾಜ್ 3 -4 ತಿಂಗಳಿಗೊಮ್ಮೆ ಭೀಮಾತೀರದಿಂದ ನಮ್ಮ ತೀರಕ್ಕೆ ಬರುತ್ತಾನೆ. ಶೂಟಿಂಗ್ ಮಾಡಿಸುತ್ತಾನೆ. ಮತ್ತೆ ಕಣ್ಮರೆಯಾಗುತ್ತಾನೆ.

  ಪ್ರ : ನಿಮ್ಮ ಮಹತ್ವಾಕಾಂಕ್ಷೆಯ ಮಂಜಿನಹನಿ ಬಗ್ಗೆ?
  ರವಿ: ಇನ್ನು ಆರು ತಿಂಗಳಲ್ಲಿ ರೆಡಿಯಾಗುತ್ತೆ. ಚಿತ್ರದ ಮೊದಲ 20 ನಿಮಿಷ ಗ್ರಾಫಿಕ್ ಇರುವುದರಿಂದ ಆದರೆ ಕೆಲಸ ಭರದಿಂದ ಸಾಗುತ್ತಿದೆ. ಆ ಸಿನಿಮಾ ಖಂಡಿತ ಮ್ಯಾಜಿಕ್ ಮಾಡುತ್ತೆ.

  ಪ್ರ : ನಿಮ್ಮ ಮಗನನ್ನು ಚಿತ್ರರಂಗಕ್ಕೆ ಪರಿಚಯಿಸುವ ವಿಚಾರ?
  ರವಿ: ಇನ್ನು ನಾಲ್ಕು ತಿಂಗಳೊಳಗಾಗಿ ಬರ್ತಾನೆ. ಡೈಲಾಗ್ ಡೆಲಿವರಿ ಹೇಗೆ ಮಾಡಬೇಕು ಅನ್ನೋದನ್ನಾ ಕಲೀತಾ ಇದ್ದಾನೆ. ಎಲ್ಲಾ ರಂಗದಲ್ಲೂ ಪರ್ಫೆಕ್ಟ್ ಆಗಿರಲಿ ಎನ್ನೋದು ನನ್ನ ಉದ್ದೇಶ.

  ಪ್ರ : ತಮ್ಮ ಬಾಲಾಜಿ ಕಥೆಯ ಏನಾಯಿತು?
  ರವಿ: ಅವನಿಗೆ ಸಿನಿಮಾ ಬಗ್ಗೆ ಇಂಟರೆಸ್ಟ್ ಕಮ್ಮಿ ಆದಂತಿದೆ. ನನಗೆ ನನ್ನ ಮಗನ, ಮಂಜಿನ ಹನಿ, ನಿರ್ಮಾಪಕರ ಸಿನಿಮಾಗಳ ಬಗ್ಗೆ ತಲೆ ಕೆಡಿಸಿಕೊಳ್ಳುವಷ್ಟು ಟೈಮ್ ಇಲ್ಲದಿರುವಾಗ... ಪ್ಲೀಸ್ ಬೇರೆ ವಿಷಯ ಮಾತಾಡಿ..

  English summary
  Crazy star V Ravichandran exclusive interview to our cine correspondent.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X