'ಆಪರೇಷನ್ ಸಿಂಧೂರ್' ಟೈಟಲ್ ರಿಜಿಸ್ಟರ್ ಮಾಡಲು ಮುಗಿಬಿದ್ದ 15 ನಿರ್ಮಾಣ ಸಂಸ್ಥೆ; ಲಿಸ್ಟ್‌ನಲ್ಲಿ ಯಾರೆಲ್ಲ ಇದ್ದಾರೆ?

ಪಹಲ್ಗಾಮ್‌ನಲ್ಲಿ ಪ್ರವಾಸಿಗರ ಮೇಲೆ ಅಟ್ಟಹಾಸ ಮೆರೆದಿದ್ದ ಭಯೋತ್ಪಾದಕರ ಹೇಯ ಕೃತ್ಯಕ್ಕೆ ಪ್ರತಿಕಾರ ತೀರಿಸಿಕೊಂಡಿದೆ. ಪಾಕಿಸ್ತಾನದಲ್ಲಿದ್ದ ಉಗ್ರರ ಕ್ಯಾಂಪ್‌ ಮೇಲೆ ಬಾಂಬ್ ಹಾಕಿ, ನೆಲೆಗಳನ್ನು ಸರ್ವನಾಶ ಮಾಡಿ ಬಂದಿದೆ. ಅದಕ್ಕೆ ಭಾರತ ಇಟ್ಟಿದ್ದ ಹೆಸರು 'ಆಪರೇಷನ್ ಸಿಂಧೂರ'. ಕಳೆದ ಎರಡು ದಿನಗಳಿಂದ ವಿಶ್ವದ ಮೂಲೆ ಮೂಲೆಯಲ್ಲಿ ಭಾರತದ 'ಆಪರೇಷನ್ ಸಿಂಧೂರ'ದ ಬಗ್ಗೆನೇ ಚರ್ಚೆಯಾಗುತ್ತಿದೆ.

'ಆಪರೇಷನ್ ಸಿಂಧೂರ' ಅಥವಾ 'ಆಪರೇಷನ್ ಸಿಂಧೂರ್' ಎಂದು ಕರೆಯಲಾದ ಭಾರತದ ಕಾರ್ಯಚರಣೆ ಬಗ್ಗೆ ಸಿನಿಮಾ ತಾರೆಯರು ಮೆಚ್ಚುಗೆ ಸೂಚಿಸಿದ್ದರು. ಭಾರತೀಯ ಸೇನೆಯ ದಿಟ್ಟತನಕ್ಕೆ ಸಲಾಂ ಹೇಳಿದ್ದರು. ಇದೇ ಬೆನ್ನಲ್ಲೇ ಬಾಲಿವುಡ್ ಫಿಲ್ಮ್‌ಮೇಕರ್ಸ್ ಹಾಗೂ ಪ್ರತಿಷ್ಠಿತ ಸ್ಟುಡಿಯೋಗಳು 'ಆಪರೇಷನ್ ಸಿಂಧೂರ್' ಟೈಟಲ್‌ ಅನ್ನು ರಿಜಿಸ್ಟರ್ ಮಾಡಿಸುವುದಕ್ಕೆ ಮುಗಿಬಿದ್ದಿವೆಯಂತೆ.

15 Bollywood filmmakers and studios are rushing to register Operation Sindoor movie title

ಈಗಾಗಲೇ ಭಾರತೀಯ ಸೇನೆ ಮಾಡಿದ ಇಂತಹ ಆಪರೇಷನ್‌ಗಳನ್ನು ಇಟ್ಟುಕೊಂಡು ಬಾಲಿವುಡ್ ಮಂದಿ ಸಿನಿಮಾ ಮಾಡಿದ್ದಾರೆ. ಅವು ಬಾಕ್ಸಾಫೀಸ್‌ನಲ್ಲಿ ದೊಡ್ಡ ಮಟ್ಟಕ್ಕೆ ಸದ್ದು ಮಾಡಿವೆ. ಹೀಗಾಗಿ ಅವುಗಳಿಗಿಂತಲೂ ದೊಡ್ಡ ಆಪರೇಷನ್ ಇದಾಗಿದ್ದರಿಂದ ಬಾಲಿವುಡ್‌ ಮಂದಿ ಈ ಟೈಟಲ್‌ ಅನ್ನು ರಿಜಿಸ್ಟರ್ ಮಾಡಿಸುವುದಕ್ಕೆ ದೌಡಾಯಿಸಿದ್ದಾರೆಂದು ರಾಷ್ಟ್ರೀಯ ಮಾಧ್ಯಮಗಳಲ್ಲಿ ವರದಿಯಾಗಿದೆ. ಹಾಗಿದ್ದರೆ, ಯಾರೆಲ್ಲ 'ಆಪರೇಷನ್ ಸಿಂಧೂರ್' ಟೈಟಲ್ ಹಿಂದೆ ಬಿದ್ದಿದ್ದಾರೆ? ಎನ್ನುವುದನ್ನು ತಿಳಿಯುವುದಕ್ಕೆ ಮುಂದೆ ಓದಿ.

ಈಗಾಗಲೇ ಇಂಡಿಯಾ ಟುಡೇ ವರದಿ ಮಾಡಿರುವ ಪ್ರಕಾರ, 'ಆಪರೇಷನ್ ಸಿಂಧೂರ್' ಟೈಟಲ್‌ಗಾಗಿ ಸುಮಾರು 15 ಮಂದಿ ಫಿಲ್ಮ್‌ಮೇಕರ್ಸ್ ಹಾಗೂ ಬಾಲಿವುಡ್ ಸ್ಟುಡಿಯೋಗಳು ಪೈಪೋಟಿಗೆ ಬಿದ್ದಿವೆ. ಫೆಡರೇಷನ್ ಆಫ್ ವೆಸ್ಟರ್ನ್ ಇಂಡಿಯಾ ಸಿನಿ ಎಂಪ್ಲಾಯಿ ಅಧ್ಯಕ್ಷ ಬಿಎನ್ ತಿವಾರಿ ಈ ಸುದ್ದಿಯನ್ನು ಒಪ್ಪಿಕೊಂಡಿದ್ದಾಗಿಯೂ ವರದಿಯಲ್ಲಿ ಹೇಳಲಾಗಿದೆ. ಇವರ ಪ್ರಕಾರ, ಇಂಡಿಯನ್ ಮೋಷನ್ ಪಿಕ್ಚರ್ ಪ್ರಡ್ಯೂಸರ್ಸ್ ಅಸೋಸಿಯೇಷನ್‌ನಲ್ಲಿ ಈ ಟೈಟಲ್‌ಗಾಗಿ ನೊಂದಣಿಯನ್ನು ಮಾಡಿಸಿವೆ. ಆದರೆ, ಟೈಟಲ್ ಯಾರ ಪಾಲಾಗುತ್ತೆ ಅನ್ನೋದು ಮುಂದಿನ ದಿನಗಳಲ್ಲಿ ಗೊತ್ತಾಗಲಿದೆ.

ಹಾಗಂತ ಚಿತ್ರರಂಗದಕ್ಕೆ ಇದೇನು ಹೊಸದೇನು ಅಲ್ಲ. ಈ ಹಿಂದೆ ಕೂಡ ಇಂತಹ ಪ್ರಯತ್ನಗಳು ನಡೆದಿವೆ. ಭಾರತ ಹಾಗೂ ಪಾಕಿಸ್ತಾನ ಯುದ್ಧಕ್ಕೆ ಸಂಬಂಧಿಸಿದ ಸಾಕಷ್ಟು ಸಿನಿಮಾಗಳು ಈಗಾಗಲೇ ಬಂದಿವೆ. ದೇಶಭಕ್ತಿ ಸಾರುವ ಸನ್ನಿವೇಶಗಳು ಇದ್ದಲ್ಲಿ ಸಿನಿಮಾ ಮಾಡುವುದಕ್ಕೆ ಬಾಲಿವುಡ್ ಅಷ್ಟೇ ಅಲ್ಲ, ಬೇರೆ ಬೇರೆ ಚಿತ್ರರಂಗಗಳು ಕೂಡ ಮುಗಿಬೀಳುತ್ತವೆ. ಹಾಗೇ ಈಗ ವಿಶ್ವದ ಗಮನವನ್ನೇ ಸೆಳೆದಿರುವ 'ಆಪರೇಷನ್ ಸಿಂಧೂರ್' ಕಾರ್ಯಚಾರಣೆಯನ್ನು ತೆರೆಮೇಲೆ ತರುವುದಕ್ಕೆ ಬಾಲಿವುಡ್ ಮಂದಿ ತುದಿಗಾಲಲ್ಲಿ ನಿಂತಿದ್ದಾರೆ.

15 Bollywood filmmakers and studios are rushing to register Operation Sindoor movie title

ಭಾರತೀಯ ಚಿತ್ರರಂಗಗಳ ಪೈಕಿ ಬಾಲಿವುಡ್‌ನಲ್ಲಿ ವಾರ್ ಸಿನಿಮಾಗಳಿಗೆ ಹೆಚ್ಚು ಸಕ್ಸಸ್ ಸಿಕ್ಕಿದೆ. ಭಾರತ ಪಾಕಿಸ್ತಾನ ಯುದ್ಧ, ಭಯೋತ್ಪಾದಕರ ನಡುವಿನ ಸಮರ, ಸರ್ಜಿಕಲ್ ಸ್ಟ್ರೈಕ್ ಸೇರಿದಂತೆ ಭಾರತೀಯ ಸೇನೆಯ ಹೋರಾಟವನ್ನು ತೆರೆಮೇಲೆ ತರಲಾಗಿದೆ. ಅವುಗಳಿಗೆ ಯಶಸ್ಸು ಕೂಡ ಸಿಕ್ಕಿದೆ. ಹೀಗಾಗಿ ಸಿನಿಮಾ ಮಂದಿಗೆ ವಾರ್ ಸಬ್ಜೆಕ್ಟ್ ಫೇವರಿಟ್ ಆಗಿದೆ. ದೇಶ ಭಕ್ತಿ ಸಾರುವ ಕಥೆಗಳನ್ನು ತೆರೆಮೇಲೆ ಹೇಳುವುದಕ್ಕೆ ತುದಿಗಾಲಲ್ಲಿ ನಿಲ್ಲುತ್ತಾರೆ.

Take a Poll

ಅಂದ್ಹಾಗೆ, 'ಆಪರೇಷನ್ ಸಿಂಧೂರ' ಟೈಟಲ್‌ಗಾಗಿ ಬಾಲಿವುಡ್‌ನ ಪ್ರತಿಷ್ಠಿತ ನಿರ್ಮಾಣ ಸಂಸ್ಥೆಗಳು ಹಾಗೂ ಫಿಲ್ಮ್‌ಮೇಕರ್ಸ್ ಕ್ಯೂನಲ್ಲಿ ಇದ್ದಾರೆ. ಅದರಲ್ಲಿ ಜಾನ್‌ ಅಬ್ರಾಹಂ ಪ್ರೊಡಕ್ಷನ್ ಹೌಸ್, ಉರಿ ನಿರ್ದೇಶಕ ಆದಿತ್ಯ ಧರ್ ಬ್ಯಾನರ್, ಮಹಾವೀರ್ ಜೈನ್ ಸ್ಟುಡಿಯೋ, ಬಾಲಿವುಡ್ ನಿರ್ಮಾಪಕ ಅಶೋಕ್ ಪಂಡಿತ್, ನಿರ್ದೇಶಕ ಮಧುರ್ ಭಂಡಾರ್ಕರ್ ಇದ್ದಾರೆ. ಹಾಗೇ ಜೀ ಸ್ಟುಡಿಯೋ, ಜೆಪಿ ಸ್ಟುಡಿಯೋ, ಬಾಂಬೆ ಶೋ ಸ್ಟುಡಿಯೋ, ಅಲ್ಮೈಟಿ ಮೋಷನ್ ಪಿಕ್ಚರ್ಸ್ ಟೈಟಲ್‌ಗಾಗಿ ಪೈಪೋಟಿಗೆ ಬಿದ್ದಿದೆ ಎಂದು ಟೈಮ್ಸ್ ಆಫ್ ಇಂಡಿಯಾ ವರದಿಯಲ್ಲಿ ಹೇಳಿದೆ.

More from Filmibeat

English summary
15 Bollywood filmmakers and studios are rushing to register Operation Sindoor movie title;
Read more about: bollywood title indian army
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X