ಅಪಘಾತ; ಚಿತ್ರನಿರ್ದೇಶಕ ರಾಘವ ಲೋಕಿಗೆ ಗಾಯ
ಕನ್ನಡ ಚಿತ್ರ ನಿರ್ದೇಶಕ ರಾಘವ ಲೋಕಿ ಅವರು ಕಾರು ಅಪಘಾತದಲ್ಲಿ ಗಾಯಗೊಂಡಿದ್ದು ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಮೈಸೂರಿನಿಂದ ಬೆಂಗಳೂರಿಗೆ ಹಿಂತಿರುಗುತ್ತಿರಬೇಕಾದರೆ ಈ ಅವಘಡ ಸಂಭವಿಸಿದೆ. ಶಿವರಾಜ್ ಕುಮಾರ್ ಅವರ 'ಸತ್ಯ ಇನ್ ಲವ್' ಚಿತ್ರವನ್ನು ಅವರು ನಿರ್ದೇಶಿಸಿದ್ದರು.
ಪ್ರಸ್ತುತ ಜಗ್ಗೇಶ್ ಮಗ ಗುರುರಾಜ್ ಅವರ 'ಗಿಲ್ಲಿ' ಚಿತ್ರವನ್ನು ರಾಘವ ಲೋಕಿ ನಿರ್ದೇಶಿಸುತ್ತಿದ್ದಾರೆ. ಮೈಸೂರಿನಲ್ಲಿ ಗಿಲ್ಲಿ ಚಿತ್ರದ ಕಾರ್ಯಕ್ರಮ ಮುಗಿಸಿಕೊಂಡು ಮರಸೂರಿಗೆ ಹಿಂತಿರುಗುತ್ತಿದ್ದಾಗ ನೈಸ್ ರಸ್ತೆಯಲ್ಲಿ ಅವರ ಕಾರು ಅಪಘಾತಕ್ಕೀಡಾಗಿದೆ.
ಚಿಕಿತ್ಸೆಗಾಗಿ ಅವರನ್ನು ಬನ್ನೇರುಘಟ್ಟ ರಸ್ತೆಯ ವೊಕಾರ್ಟ್ ಆಸ್ಪತ್ರೆಗೆ ದಾಖಲಿಸಲಾಗಿದೆ. ಚೇತರಿಕೊಳ್ಳುತ್ತಿರುವ ಅವರನ್ನು ವೈದ್ಯರು ವಿಶ್ರಾಂತಿ ತೆಗೆದುಕೊಳ್ಳುವಂತೆ ಸೂಚಿಸಿರುವುದಾಗಿ ಲೋಕಿ ಕುಟುಂಬ ಮೂಲಗಳು ತಿಳಿಸಿವೆ.
ಮೈಸೂರಿನಲ್ಲಿ ಗಿಲ್ಲಿ ಚಿತ್ರದ ಕಾರ್ಯಕ್ರಮವನ್ನು ಮುಗಿಸಿಕೊಂಡು ರಾತ್ರಿ ಅವರು ವಾಪಸ್ಸಾಗುತ್ತಿದ್ದರು. ಸ್ವತಃ ಅವರೇ ಕಾರು ಚಾಲನೆ ಮಾಡುತ್ತಿದ್ದು ನಿದ್ರೆಯ ಮಂಪರಿನಲ್ಲಿ ಕಾರು ಅಪಘಾತಕ್ಕೀಡಾಗಿದೆ. ಸಣ್ಣಪುಟ್ಟ ಗಾಯಗಳನ್ನು ಹೊರತುಪಡಿಸಿದರೆ ಉಳಿದಂತೆ ಅವರಿಗೆ ಯಾವುದೇ ಅಪಾಯವಾಗಿಲ್ಲ.
(ದಟ್ಸ್ ಕನ್ನಡ ಚಿತ್ರವಾರ್ತೆ)


Click it and Unblock the Notifications











