Kabzaa: ಬರೋಬ್ಬರಿ 45 ಸೆಟ್‌ಗಳು.. 'ಕಬ್ಜ' ಕೋಟೆ ಕಟ್ಟಲು ಆರ್‌ ಚಂದ್ರು ಸುರಿದಿದ್ದೆಷ್ಟು ಕೋಟಿ?

ಸ್ಯಾಂಡಲ್‌ವುಡ್‌ನ ಪ್ಯಾನ್ ಇಂಡಿಯಾ ಸಿನಿಮಾ 'ಕಬ್ಜ' ಫೀವರ್ ಹೆಚ್ಚಾಗಿತ್ತಿದೆ. ಸಿನಿಮಾ ಬಿಡುಗಡೆಗೆ ಇನ್ನೂ ಒಂದು ವಾರವಿರುವಾಗಲೇ ಸಿನಿಮಾ ತಂಡ ಮತ್ತಷ್ಟು ಚುರುಕಾಗಿದೆ. ಬೆಂಗಳೂರು, ಮುಂಬೈ, ಚೆನ್ನೈ ಅಂತ ಓಡಾಟ ಶುರು ಮಾಡಿದೆ. ಸದ್ಯ ಮುಂಬೈಗೆ ತೆರಳಿರೋ 'ಕಬ್ಜ' ಟೀಮ್ ಭರ್ಜರಿ ಪ್ರಚಾರದಲ್ಲಿ ತೊಡಗಿಕೊಂಡಿದೆ. ಕನ್ನಡದ ಮತ್ತೊಂದು ಪ್ಯಾನ್ ಇಂಡಿಯಾದ ಟ್ರೈಲರ್ ನೋಡಿ ಹಿಂದಿ ಆಡಿಯನ್ಸ್ ಥ್ರಿಲ್ ಆಗಿದ್ದಾರೆ.

ಈಗಾಗಲೇ 'ಕಬ್ಜ' ಪ್ಯಾನ್ ಇಂಡಿಯಾ ಟ್ರೈಲರ್‌ಗೆ ಭರ್ಜರಿ ರೆಸ್ಪಾನ್ಸ್ ಸಿಕ್ಕಿದೆ. ಬಿಡುಗಡೆಯಾದ ಐದೂ ಭಾಷೆಯ ಜನರು ಟ್ರೈಲರ್ ನೋಡಿ ಕಳೆದೇ ಹೋಗಿದ್ದಾರೆ. 'ಕಬ್ಜ'ದಲ್ಲಿ ಟ್ರೈಲರ್ ಮೇಜರ್ ಆಗಿ ಗಮನ ಸೆಳೆದಿದ್ದು ದುಬಾರಿ ಸೆಟ್‌ಗಳು. ಇದರಿಂದಾನೇ ಕಣ್ಣಿಗೆ ಹಬ್ಬ ಅನ್ನುವಂತಹ ಸೆಟ್‌ಗಳು ಸಿಕ್ಕಿವೆ. ಈ ಸೆಟ್ಟುಗಳನ್ನು ಹಾಕುವುದಕ್ಕೆ ಇಡೀ ತಂಡ ಸಿಕ್ಕಾಪಟ್ಟೆ ಶ್ರಮಪಟ್ಟಿದೆ. ಅಷ್ಟಕ್ಕೂ ಆ ಸೆಟ್‌ಗಳನ್ನು ಹಾಕುವುದಕ್ಕೆ ಇಡೀ ತಂಡದ ಶ್ರಮ ಏನು? ಅನ್ನೋದಕ್ಕೆ ಚಿತ್ರತಂಡ ಒಂದು ಮೇಕಿಂಗ್ ವಿಡಿಯೋ ರಿಲೀಸ್ ಮಾಡಿದೆ.

150 Members Created 30 Major, 15 Sub Sets For Upendra And Sudeep Movie Kabzaa Cost 20 Crore

'ಕಬ್ಜ' ಕೋಟೆ ಕಟ್ಟಿರೋದು ಬರೋಬ್ಬರಿ 150 ಮಂದಿ

'ಕಬ್ಜ' ಸಿನಿಮಾದ ಹೈಲೈಟ್‌ಗಳೇ ಸೆಟ್‌ಗಳು. ಯಾಕಂದ್ರೆ, 40ರ ದಶಕದ ಕಥೆಗಳನ್ನು ತೆರೆಮೇಲೆ ತರುವಾಗ ಇಂತಹ ದುಬಾರಿ ಸೆಟ್‌ಗಳು ಬೇಕೇ ಬೇಕು. ಹೀಗಾಗಿ ಟ್ರೈಲರ್‌ನಲ್ಲಿ ಸೆಟ್‌ಗಳು ಗಮನ ಸೆಳೆಯುತ್ತಿವೆ. ನಿರ್ದೇಶಕ ಆರ್‌.ಚಂದ್ರು ಕಲ್ಪನೆಯಲ್ಲಿ ಮೂಡಿ ಬಂದಿರೋ ಈ ಸಿನಿಮಾದ ದೃಶ್ಯಗಳು ಶ್ರೀಮಂತವಾಗಿ ಕಾಣಿಸುವುದಕ್ಕೆ ಸೆಟ್‌ಗಳೇ ಕಾರಣ. ಈ ದುಬಾರಿ ಸೆಟ್‌ಗಳ ಹಿಂದಿನ ನಿರ್ದೇಶಕ ಶಿವಕುಮಾರ್. 'ಕೆಜಿಎಫ್' ಸೀರಿಸ್‌ಗೂ ಇವರೇ ಅದ್ಧೂರಿ ಸೆಟ್‌ಗಳನ್ನು ಹಾಕಿದ್ದರು.

ಅಂದ್ಹಾಗೆ, ಆರ್ಟ್ ಡೈರೆಕ್ಟರ್ ಶಿವಕುಮಾರ್ 'ಕಬ್ಜ' ಕೋಟೆ ಕಟ್ಟುವುದಕ್ಕೆ ಸುಮಾರು 150 ಮಂದಿ ಹಗಲ ರಾತ್ರಿ ಕೆಲಸ ಮಾಡಿದ್ದಾರೆ. 1945 ರಿಂದ 1987ರ ಕಾಲಘಟ್ಟದವರೆಗೂ ನಡೆಯುವ ಕಥೆಯಾಗಿರುವುದರಿಂದ ಮೇಜರ್ ಪೋಷನ್‌ ಅನ್ನು ಸೆಟ್‌ಗಳಲ್ಲಿಯೇ ಚಿತ್ರೀಕರಣ ಮಾಡಲಾಗಿದೆ.

150 Members Created 30 Major, 15 Sub Sets For Upendra And Sudeep Movie Kabzaa Cost 20 Crore

30 ಮೇಜರ್ ಸೆಟ್.. 15 ಸಬ್ ಸೆಟ್‌ಗಳು

150 ಜನರ ರಿಯಲ್ ಎನಿಸುವಂತಹ ದುಬಾರಿಗಳನ್ನು ನಿರ್ಮಾಣ ಮಾಡಿದ್ದಾರೆ. ಈ ಸಿನಿಮಾದಲ್ಲಿ ಸುಮಾರು 30 ಮೇಜರ್ ಸೆಟ್‌ಗಳಿವೆ. ಹಾಗೇ 15 ಸಬ್‌ ಸೆಟ್‌ಗಳನ್ನು ಹಾಕಲಾಗಿದೆಯಂತೆ. ಇಲ್ಲಿ ಮಾರ್ಕೆಟ್ ಸೆಟ್‌ನಿಂದ ಹಿಡಿದು, ಪ್ಯಾಲೆಸ್ , ಆಗಿನ ಕಾಲದ ರಸ್ತೆಗಳನ್ನು ನಿರ್ಮಾಣ ಮಾಡಲಾಗಿದೆ. ಜೊತೆಗೆ ಬೃಹತ್ ಜೈಲ ಅನ್ನು ಸೆಟ್‌ನಲ್ಲಿ ನಿರ್ಮಾಣ ಮಾಡಲಾಗಿದೆ.

1945 ರಿಂದ 1987 ರ ಕಾಲಘಟ್ಟದಲ್ಲಿ ನಡೆಯೋ ಕಥೆಯಾಗಿರೋದ್ರಿಂದ ಸ್ವಾತಂತ್ರ್ಯ ಪೂರ್ವ ಹಾಗೂ ಸ್ವಾತಂತ್ರ್ಯ ನಂತರ ಎರಡೂ ಕಾಲಘಟಕ್ಕೆ ತಕ್ಕಂತೆ ಸೆಟ್ ಹಾಕಲಾಗಿತ್ತು. ಹೀಗಾಗಿ ಕಲಾ ನಿರ್ದೇಶಕ ಶಿವಕುಮಾರ್ ಎರಡೂ ಪ್ರಕಾರದ ವಿಭಿನ್ನ ಸೆಟ್‌ಗಳನ್ನು ಈ ಸಿನಿಮಾಗೆ ಹಾಕಿದ್ದು, ಅದೇ ಮೇಜರ್ ಹೈಲೈಟ್ ಎನ್ನಲಾಗುತ್ತಿದೆ.

ಕೇವಲ ಸೆಟ್ಟಿಗಾಗಿ ಖರ್ಚು ಮಾಡಿದ್ದೆಷ್ಟು?

ಕನ್ನಡ ಪ್ಯಾನ್ ಇಂಡಿಯಾ ಸಿನಿಮಾಗಳು ಕ್ವಾಲಿಟಿಯಲ್ಲಿ ಕಾಂಪ್ರಮೈಸ್ ಆಗೋ ಮಾತೇ ಇಲ್ಲ. ಈಗಾಗಲೇ ಇದನ್ನು ಬ್ಲಾಕ್‌ಬಸ್ಟರ್ ಲಿಸ್ಟ್ ಸೇರಿದ ಸಿನಿಮಾಗಳು ಪ್ರೂವ್ ಮಾಡಿವೆ. 'ಕಬ್ಜ'ದ ಬಹುತೇಕ ದೃಶ್ಯಗಳನ್ನು ಈ ಸೆಟ್‌ಗಳಲ್ಲಿಯೇ ನಿರ್ಮಾಣ ಮಾಡಲಾಗಿದೆ. ಕೆಲವು ಸೀನ್‌ಗಳಲ್ಲಿ ಮಾತ್ರ ವಿಎಫ್‌ಎಕ್ಸ್ ಅನ್ನು ಬಳಸಿಕೊಳ್ಳಲಾಗಿದೆ. ಹೀಗಾಗಿ ನೋಡುಗರ ಕಣ್ಣುಗಳಿಗೆ ಹಬ್ಬ ಅನ್ನೋ ಮಾತು ಕೇಳಿಬರುತ್ತಿವೆ.

'ಕಬ್ಜ' ತಂಡ ನೀಡಿರುವ ಮಾಹಿತಿ ಪ್ರಕಾರ, ಸೆಟ್‌ಗಾಗಿ ಖರ್ಚು ಮಾಡಿರೋ ಹಣದಲ್ಲಿ ಒಂದು ಕನ್ನಡ ಸಿನಿಮಾವನ್ನು ನಿರ್ಮಾಣ ಮಾಡಬಹುದಿತ್ತು. ಅಂದ್ಹಾಗೆ 'ಕಬ್ಜ' ಸಿನಿಮಾದ ಸೆಟ್‌ಗಳಿಗಾಗಿ ಅಂದಾಜು 20 ಕೋಟಿ ರೂ. ಖರ್ಚು ಆಗಿದೆ ಎನ್ನುತ್ತಿದೆ.

More from Filmibeat

English summary
150 Members Created 30 Major, 15 Sub Sets For Upendra And Sudeep Movie Kabzaa Cost 20 Crore, Know More.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X