ಮಹೂರ್ತಕ್ಕೆ ಮುನ್ನವೇ ಅಣ್ಣಾಬಾಂಡ್ ಸೋಲ್ಡ್ ಔಟ್ !!

Anna Bond still
ಪುನೀತ್ ಅವರ ಚಿತ್ರವೆಂದರೆ ಹೀಗೆಯೇ.. ಇದು ಅವರು ಅಣ್ಣಾವ್ರು ಮಗನೆಂದೋ, ಅವರ ಚಿತ್ರ ಕುಟುಂಬ ಸಮೇತ ನೋಡಬಹುದಾದ ಚಿತ್ರವೆಂದೋ, ಅಥವಾ ಅವರ ಗ್ರಹಗತಿಯೋ ತಿಳಿಯದು. ಒಟ್ಟಿನಲ್ಲಿ ಪುನೀತ್ ಕಾಲ್ ಶೀಟ್ ಸಿಕ್ಕಿದರೆ ನಿರ್ಮಾಪಕ ತಮ್ಮ ಆಸ್ತಿಪಾಸ್ತಿಗಳನ್ನು ಅಡವಿಟ್ಟಾದ್ರೂ ಚಿತ್ರ ನಿರ್ಮಿಸುತ್ತಾರೆ. ಯಾಕೆಂದರೆ ಪುನೀತ್ ಸದ್ಯ ಸ್ಯಾಂಡವ್‌ವುಡ್‌ನ ಬಾಕ್ಸ್ ಆಫೀಸ್ ಕಿಂಗ್. ಚಿತ್ರದಲ್ಲಿ ಕಥೆ ಇರಲಿ ಬಿಡಲಿ ಚಿತ್ರ ಸೋತಿರುವ ಉದಾಹರಣೆ ಬೆರಳಣಿಕೆಯಷ್ಟು.

ವಿಷಯ ಏನಪ್ಪಾಂದ್ರೆ, ರಾಜ್ ಕುಮಾರ್ ಕುಟುಂಬದ ಬ್ಯಾನರ್ ನಲ್ಲಿ ಮೂಡಿ ಬರುತ್ತಿರುವ 80ನೇ ಚಿತ್ರ, ಸೂರಿ ನಿರ್ದೇಶನದ ಪುನೀತ್ ಮುಖ್ಯ ಭೂಮಿಕೆಯಲ್ಲಿರುವ ಅಣ್ಣಾಬಾಂಡ್. ಚಿತ್ರದ ಮಹೂರ್ತ ಇತ್ತೀಚಿಗೆ ನಡೆಯಿತು, ಕನಸುಗಾರ ರವಿಮಾಮ ಕ್ಲಾಪ್ ಮಾಡಿದ್ರು. ಚಿತ್ರದ ಮಹೂರ್ತಕ್ಕೆ ಮುನ್ನವೇ ಭಾರೀ ಮೊತ್ತಕ್ಕೆ ಚಿತ್ರದ ಟಿವಿ ರೈಟ್ಸ್ ಮಾರಾಟವಾಗಿದೆ ಎನ್ನುವ ಸುದ್ದಿ ಗಾಂಧಿನಗರದ ಗಲ್ಲಿಗಲ್ಲಿಯಲ್ಲಿ ಗಿರಿಗಿಟ್ಲೆ ಹೊಡೆಯುತ್ತಿದೆ.

ಯಾವ ಟಿವಿ ವಾಹಿನಿ ಚಿತ್ರದ ಹಕ್ಕನ್ನು ಪಡೆದು ಕೊಂಡಿದೆ, ಎಷ್ಟು ಮೊತ್ತಕ್ಕೆ ಚಿತ್ರ ಮಾರಾಟವಾಗಿದೆ ಎನ್ನುವ ಸುದ್ದಿ ಬಗ್ಗೆ ಇನ್ನೂ ಎಲ್ಲೂ ವರದಿಯಾಗಿಲ್ಲ. ಅಥವಾ ಇದು ಬರೀ ಗಾಳಿಸುದ್ದಿಯೋ ಎನ್ನುವ ವಿಷಯ ಕೂಡ ಇನ್ನೂ ಕನ್ಫರ್ಮ್ ಆಗಿಲ್ಲ. ಈ ಚಿತ್ರದದಲ್ಲಿ ಪುನೀತ್ ಗೆ ನಾಯಕಿಯಾಗಿ ಪ್ರಿಯಾಮಣಿ ಮತ್ತು ನಿಧಿ ಸುಬ್ಬಯ್ಯ. ಮತ್ತು ಸೂರಿ ಜಾಕಿ ಚಿತ್ರದ ತಂತ್ರಜ್ನರಲ್ಲೇ ಹೆಚ್ಚಾಗಿ ಇಲ್ಲಿ ಬಳಸಿಕೊಂಡಿದ್ದಾರೆ. ಅಂದರೆ ಹರಿಕೃಷ್ಣ ಅವರ ಸಂಗೀತ, ಸತ್ಯ ಹೆಗಡೆ ಕ್ಯಾಮೆರ, ಯೋಗರಾಜ್ ಭಟ್ ಮತ್ತು ಸೂರಿ ಸ್ಕ್ರೀನ್ ಪ್ಲೇ, ಭಟ್ರ ಮತ್ತು ಜಯಂತ್ ಕಾಯ್ಕಿಣಿ ಅವರ ಸಾಹಿತ್ಯ.

ನಿರ್ದೇಶಕ ಸೂರಿ ಹೇಳುವಂತೆ, ಇದು ಬಾಂಡ್ ಚಿತ್ರವಂತೂ ಅಲ್ಲವೇ ಅಲ್ಲ. ಲೋಕಲ್ ಭಾಷೆಯಲ್ಲಿ ಯಾರನ್ನಾದರೂ ಹೊಗಳಿ ಅಟ್ಟಕ್ಕೆರಿಸಬೇಕಾದ್ರೆ ಅಣ್ಣಾಬಾಂಡ್ ಎನ್ನುವುದು ವಾಡಿಕೆ. ಚಿತ್ರಕ್ಕೆ ಅದ್ಭುತ ಕಥೆಯಿಲ್ಲ, ಆದರೆ ಅದ್ಭುತ ಚಿತ್ರಕಥೆ ಇದೆ. ಎರಡೂವರೆ ಗಂಟೆ ಮೈಮೆರೆತು ಹೋಗುವಂತೆ ಚಿತ್ರ ನೀಡುತ್ತೇವೆ ಎನ್ನುವುದು ನಿರ್ದೇಶಕರ ಆತ್ಮವಿಶ್ವಾಸದ ಮಾತು. ಒಟ್ಟಿನಲ್ಲಿ ಮಹೂರ್ತಕ್ಕೆ ಮುನ್ನವೇ ಈ ಪಾಟಿ ಪಬ್ಲಿಸಿಟಿ ಪಡೆದು ಕೊಂಡಿರುವ ಈ ಚಿತ್ರಕ್ಕೆ ಇನ್ನು ಬಿಡುಗಡೆ ಸಮಯದಲ್ಲಿ ಯಾವ ರೀತಿ ಹೈಪ್ ಇರುತ್ತೋ...yavanigottu. (ಒನ್‌ಇಂಡಿಯಾ ಕನ್ನಡ)

More from Filmibeat

English summary
Puneet Rajkumar-starer Anna Bond launched recently but the movie has already recovered close to 60 per cent of its production cost by way of satellite rights. Sources have confirmed that the movie has been sold to a television channel for a whopping price (The figures are unknown) 
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X