ಯೋ.. ಬರ್ಕೊಳಯ್ಯಾ.. ಬೆಂಗ್ಳೂರು ನಂದು!

ಬಹು ನಿರೀಕ್ಷಿತ 'ಜೋಗಯ್ಯ' ಚಿತ್ರದ ಸುಮಾರು ಒಂದು ನಿಮಿಷದ ಟ್ರೈಲರ್ ಅನ್ನು ನಿರ್ದೇಶಕ ಪ್ರೇಮ್ ಬಿಡುಗಡೆ ಮಾಡಿದ್ದಾರೆ. ರಾಜಕೀಯಕ್ಕೆ ಬಿಕ್ಕಟ್ಟಿಗೆ ಸಂಬಂಧಿಸಿದಂತೆ ಇದ್ದ ಮೂರು ದೃಶ್ಯಗಳಿಗೆ ಸೆನ್ಸಾರ್ ಮಂಡಳಿ ಕತ್ತರಿ ಹಾಕಿದ ನಂತರ U/A ಸರ್ಟಿಫಿಕೇಟ್ ನೀಡಿದ್ದು ನಿಮಗೆ ಗೊತ್ತೇ ಇದೆ. [ಟ್ರೈಲರ್ ನೋಡಿರಿ]

ಚಿತ್ರದಲ್ಲಿ ಶಿವರಾಜ್ ಕುಮಾರ್ ಮಾಧ್ಯಮದವರನ್ನು ಉದ್ದೇಶಿಸಿ ಡೈಲಾಗ್ ಉದುರಿಸುತ್ತಿರುವುದು ಹೀಗೆ "ಯೋ.. ಬರ್ಕೊಳಯ್ಯಾ.. ಮೊದ್ಲನೇ ಪುಟದಲ್ಲೇ ಬರ್ಕೋ.. ಬೆಂಗ್ಳೂರು ನಂದು.. ಯಕಶ್ಚಿತ್ ಒಂದು ನಾಯಿ ಬಾರ್ಡರ್ ದಾಟಿ ಬರ್ಬೇಕಾದ್ರೂ ನನ್ನ ಕೇಳ್ಕೊಂಡು ಬರ್ಬೇಕು.. ಅದು ಬಿಟ್ಟು ಹಂಗೆ ಬಂತೋ..." ಪಕ್ಕಾ ಅಂಡರ್ ವರ್ಲ್ಡ್ ಗೆಟ್ ಅಪ್ ನಲ್ಲಿರುವ ಶಿವಣ್ಣ ಅವರ ಈ ಡೈಲಾಗ್ ಡೆಲಿವರಿ ಡೆಡ್ಲಿ. [ದಿ ಮೇಕಿಂಗ್ ಆಫ್ ಜೋಗಯ್ಯ]

ಒಂದು ಫೈಟ್ ಮತ್ತು ಹಾಡನ್ನು 3ಡಿ ತಂತ್ರಜ್ಞಾನದಲ್ಲಿ ಚಿತ್ರೀಕರಿಸಿರುವ ಪ್ರೇಮ್, ಈ ಸೌಲಭ್ಯವಿರುವ ಯಾವ ಚಿತ್ರಮಂದಿರದಲ್ಲಿ ಚಿತ್ರ ಬಿಡುಗಡೆ ಮಾಡುತ್ತಿದ್ದಾರೆಂದು ಇನ್ನೂ ತಿಳಿಸಿಲ್ಲ. ಈ ಮಧ್ಯೆ ನಗರದ ವಿಷನ್ ಸಿನೆಮಾಸ್ ಅಂತರ್ಜಾಲದಲ್ಲಿ ಟಿಕೆಟ್ ಬುಕ್ಕಿಂಗ್ ಈಗಾಗಲೇ ಆರಂಭಿಸಿದ್ದು ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗುತ್ತಿದೆ ಎನ್ನಲಾಗಿದೆ. ಉಳಿದ ಮಲ್ಟಿಪ್ಲೆಕ್ಸ್ ನಲ್ಲಿ ಬುಧವಾರದಿಂದ (ಆ. 17) ಟಿಕೆಟ್ ಲಭ್ಯವಾಗಲಿವೆ. [ಜೋಗಯ್ಯ ಗ್ಯಾಲರಿ] ಟಿಕೆಟ್ ಸಿಕ್ಕವರಿಗೆ ಸೀರುಂಡೆ!!

More from Filmibeat

English summary
Jogayya director Prem has released 1 minute trailer. The dialogues in it are already catching the imagination of film buffs. Shivarajkumar gets into the role of underworld don again after Jogi. Rakshita, Prem's wife has produced the movie.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X