ಪವರ್ ಸ್ಟಾರ್‌ ಪುನೀತ್‌ಗೆ ರತ್ನವೇಲು ಆಕ್ಷನ್ ಕಟ್

ಪುನೀತ್ ಅಭಿನಯದ ಪರಮಾತ್ಮ ಚಿತ್ರ ತೆರೆಗೆ ಅಪ್ಪಳಿಸಲು ಸಿದ್ಧವಾಗಿದೆ. ಅದಾದ ನಂತರ ಸೂರಿ ಜೊತೆ 'ಅಣ್ಣಾ ಬಾಂಡ್' ಚಿತ್ರ. ಆ ಬಳಿಕ ಪವರ್ ಸ್ಟಾರ್ ಪುನೀತ್ ಚಿತ್ರವನ್ನು ಖ್ಯಾತ ಕ್ಯಾಮರಾಮನ್ ರತ್ನವೇಲು ನಿರ್ದೇಶಿಸಲಿದ್ದಾರೆ. ಆದರೆ ಚಿತ್ರ ಸೆಟ್ಟೇರುವುದು ಬಹುಶಃ ಬರುವ ವರುಷ ಫೆಬ್ರವರಿ ತಿಂಗಳಲ್ಲಿ.

ಕನ್ನಡದ ನಂಬರ್ ಒನ್ ಪಟ್ಟವನ್ನು ಜೋಪಾನವಾಗಿ ಕಾಪಾಡಿಕೊಂಡು ಬಂದಿರುವ ಪುನೀತ್, ಒಂದು ಚಿತ್ರದ ಚಿತ್ರೀಕರಣ ಸಂಪೂರ್ಣ ಮುಗಿದ ನಂತರವೇ ಇನ್ನೊಂದು ಚಿತ್ರವನ್ನು ಶುರು ಮಾಡುವುದು. ತಮ್ಮ ಅಭಿನಯದ ಚಿತ್ರಗಳ ಪ್ರಚಾರಕ್ಕೆ ತಮ್ಮನ್ನು ಸಂಪೂರ್ಣ ತೊಡಗಿಸಿಕೊಳ್ಳುತ್ತಾರೆ.

ಗಾಳಿಪಟ ಚಿತ್ರಕ್ಕೆ ಕ್ಯಾಮರಾ ಹಿಡಿದಿದ್ದ ರತ್ನವೇಲು ಪುನೀತ್ ಚಿತ್ರವನ್ನು ನಿರ್ದೇಶಿಸಬೇಕೆಂದು ಬಹಳ ದಿನಗಳ ಹಿಂದೆಯ ಆಶಯ ವ್ಯಕ್ತಪಡಿಸಿದ್ದರು. ಅದರಂತೆ ಇನ್ನೂ ಹೆಸರಿಡದ ಈ ಚಿತ್ರ ಹೆಚ್ಚುಕಮ್ಮಿ ಬರುವ ಫೆಬ್ರವರಿಯಲ್ಲಿ ಮಹೂರ್ತ ಭಾಗ್ಯ ಕಾಣಲಿದೆ.

ರತ್ನವೇಲು ಕ್ಯಾಮೆರಾದಲ್ಲಿ ಈಗಾಗಲೇ ಮೋಡಿ ಮಾಡಿದ್ದಾರೆ. ಅವರು ನಿರ್ದೇಶಿಸಲು ಹೊರಟಿರುವ ಈ ಚಿತ್ರ ಕೂಡ ಹೊಸ ಬಗೆಯ ಮತ್ತು ಹೊಸತನದಿಂದ ಕೂಡಿರುತ್ತದೆ ಎಂಬ ಮಾತುಗಳು ಅವರ ಆಪ್ತರ ವಲಯದಲ್ಲಿ ಕೇಳಿ ಬರುತ್ತಿರುವೆ. (ದಟ್ಸ್‌ಕನ್ನಡ ಸಿನಿವಾರ್ತೆ)

More from Filmibeat

English summary
Kannada films cinematographer Rathnavelu to direct Power Star Puneet Rajkumar. More details of the movie is awaited. Earlier Rathnavelu said that, There is a director in every cameraman. I also aspire to become a director one day.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X