ಬೆಂಗಳೂರು ಅಂತರಾಷ್ಟ್ರೀಯ ಚಲನಚಿತ್ರೋತ್ಸವ; ಫೆ.1ರಂದು ನೋಡಬಹುದಾದ 10 ಇಂಟ್ರೆಸ್ಟಿಂಗ್ ಸಿನಿಮಾಗಳಿವು

ಜನವರಿ 29 ರಿಂದ ಬೆಂಗಳೂರು ಅಂತರಾಷ್ಟ್ರೀಯ ಚಲನಚಿತ್ರೋತ್ಸವಕ್ಕೆ ಅದ್ಧೂರಿ ಚಾಲನೆ ಸಿಕ್ಕಿದೆ. ದೇಶ-ವಿದೇಶದಿಂದ ಸುಮಾರು 250ಕ್ಕೂ ಅಧಿಕ ಸಿನಿಮಾಗಳು ಒಂದು ವಾರಗಳ ಕಾಲ ಪ್ರದರ್ಶನವಾಗುತ್ತಿವೆ. ಪ್ರತಿ ದಿನ ಅತ್ಯುದ್ಭುತ ಸಿನಿಮಾಗಳು ಸಿನಿಪ್ರೇಮಿಗಳಿಗೆ ನೋಡುವುದಕ್ಕೆ ಸಿಗುತ್ತಿವೆ. ಈಗಾಗಲೇ ಎರಡು ದಿನಗಳು ಮುಗಿದಿದ್ದು, 3ನೇ ದಿನ ಅಂದರೆ ನಾಳೆ (ಫೆಬ್ರವರಿ 1) ಅದ್ಭುತ ಸಿನಿಮಾಗಳು ಪ್ರಸಾರವಾಗಲಿವೆ.

3ನೇ ದಿನವಾದ ಫೆಬ್ರವರಿ 1ರಂದು ಕನ್ನಡ ಸೇರಿದಂತೆ ಭಾರತ ಹಾಗೂ ವಿದೇಶದ ನೋಡಬಹುದಾದ ಅತ್ಯುತ್ತಮ 10 ಚಲನಚಿತ್ರಗಳ ಪಟ್ಟಿ ಇಲ್ಲಿದೆ. ಈ ಸಿನಿಮಾಗಳು ಈಗಾಗಲೇ ಜನಮನ್ನಣೆ ಪಡೆದಿವೆ. ಇನ್ನು ಕೆಲವು ಸಿನಿಮಾಗಳು ಬೇರೆ ಬೇರೆ ಚಿತ್ರೋತ್ಸವದಲ್ಲಿ ಪ್ರದರ್ಶನ ಕಂಡಿದೆ. ಲುಲು ಮಾಲ್‌ನಲ್ಲಿ ಬೆಂಗಳೂರು ಚಲನ ಚಿತ್ರೋತ್ಸವ ನಡೆಯುತ್ತಿದ್ದಯ, ಈ ಹತ್ತು ಸಿನಿಮಾಗಳ ಬಗ್ಗೆ ಮಾಹಿತಿ ಇಲ್ಲಿದೆ.

17th Bengaluru International film festival 10 movies can watch on Feb 1st

1. ಆಶಸ್ ಅಂಡ್ ಡೈಮಂಡ್ಸ್

ಸ್ಕ್ರೀನ್ 1 - ಬೆಳಗ್ಗೆ 11:50
ನಿರ್ದೇಶಕ: ಆಂಡ್ರೆ ವಾಜ್ದಾ (ಪೋಲೆಂಡ್)
ಕಥೆಯ ಸಾರಾಂಶ: ಇದು 1958ರಲ್ಲಿ ತೆರೆಕಂಡಿದ್ದ ಪೋಲೆಂಡ್ ಸಿನಿಮಾ. ಆಂಡ್ರೆ ವಾಜ್ದಾ ಅವರ ಜನ್ಮಶತಮಾನೋತ್ಸವದ ಅಂಗವಾಗಿ ಈ ಸಿನಿಮಾವನ್ನು ಪ್ರದರ್ಶಿಸಲಾಗುತ್ತಿದೆ. 1945 2ನೇ ವಿಶ್ವ ಯುದ್ಧದ ಬಳಿಕ ಪೋಲೆಂಡ್‌ನ ಕಮ್ಯೂನಿಸ್ಟ್ ಸಿಸ್ಟಂ ಹೇಗಿತ್ತು ಅನ್ನೋದನ್ನು ಆಧರಿಸಿದೆ. ಇದು ವಿಶ್ವದ ಅತ್ಯುತ್ತಮ ಸಿನಿಮಾಗಳಲ್ಲೊಂದು ಎಂದು ಪರಿಗಣಿಸಲಾಗಿದೆ.

2. ಕೂರ್ಮಾವತಾರ

ಸ್ಕ್ರೀನ್ ವಿಐಪಿ 2 - ಸಂಜೆ 5:10
ನಿರ್ದೇಶಕ: ಗಿರೀಶ್ ಕಾಸರವಳ್ಳಿ
ಕಥೆಯ ಸಾರಾಂಶ: ಕನ್ನಡದ ಎವರ್‌ಗ್ರೀನ್ ಸಿನಿಮಾ. ಕನ್ನಡ ಚಿತ್ರರಂಗದ ಹಿರಿಯ ನಿರ್ದೇಶಕ ಗಿರೀಶ್ ಕಾಸರವಳ್ಳಿ ನಿರ್ದೇಶಿಸಿದ ಈ ಸಿನಿಮಾ, ನೈತಿಕತೆ ಮತ್ತು ಗಾಂಧಿವಾದದ ಸಂಘರ್ಷವನ್ನು ಅದ್ಭುತವಾಗಿ ತೆರೆಮೇಲೆ ತರಲಾಗಿದೆ.

3. ಇಟ್ ವಾಸ್ ಜಸ್ಟ್ ಆನ್ ಆಕ್ಸಿಡೆಂಟ್

ಸ್ಕ್ರೀನ್ 5 - ಸಂಜೆ 5:10
ನಿರ್ದೇಶಕ: ಜಾಫರ್ ಪನಾಹಿ (ಇರಾನ್)
ಕಥೆಯ ಸಾರಾಂಶ: ಇರಾನಿನ ಜನಪ್ರಿಯ ನಿರ್ದೇಶಕ ಜಾಫರ್ ಪನಾಹಿ ಆಕ್ಷನ್ ಕಟ್ ಹೇಳಿದ ಸಿನಿಮಾವಿದು. ತಮ್ಮನ್ನು ಸದಾ ಪೀಡಿಸುತ್ತಿರುವ ವ್ಯಕ್ತಿಯ ವಿರುದ್ಧ ಸೇಡು ತೀರಿಸಿಕೊಳ್ಳಲು ಹೊರಟ ಇರಾನಿನ ರಾಜಕೀಯ ಕೈದಿಗಳ ಕಥೆಯನ್ನು ಹೇಳುತ್ತಿದೆ. ಇದೊಂದು ಥ್ರಿಲ್ಲರ್ ಸಿನಿಮಾ ಆಗಿದ್ದು, ಸಿನಿಪ್ರಿಯರಿಗೆ ಮನರಂಜನೆ ನೀಡಲಿದೆ.

17th Bengaluru International film festival 10 movies can watch on Feb 1st

4. ಅಮರಶಿಲ್ಪಿ ಜಕಣಾಚಾರಿ

ಸ್ಕ್ರೀನ್ ವಿಐಪಿ 3 - ಸಂಜೆ 7:00
ನಿರ್ದೇಶಕ: ಬಿ.ಎಸ್. ರಂಗ
ಕಥೆಯ ಸಾರಾಂಶ: 1964ರಲ್ಲಿ ಕಲ್ಯಾಣ್ ಕುಮಾರ್, ಬಿ. ಸರೋಜಾ ದೇವಿ ಹಾಗೂ ಉದಯ್ ಕುಮಾರ್ ನಟಿಸಿದ ಐತಿಹಾಸಿಕ ಸಿನಿಮಾ. ರಿಸ್ಟೋರ್ಡ್‌ ಕ್ಲಾಸಿಕ್ (Restored Classic) ವಿಭಾಗದಲ್ಲಿ ಈ ಸಿನಿಮಾವನ್ನು ನೋಡಬಹುದಾಗಿದೆ. ಹಳೆ ಸಿನಿಮಾಗೆ ಹೊಸ ಮೆರುಗು ನೀಡಿ ಈ ಸಿನಿಮಾವನ್ನು ಪ್ರದರ್ಶನ ಮಾಡಲಾಗುತ್ತಿದೆ.

5. ಸೌಂಡ್ ಆಫ್ ಫಾಲಿಂಗ್

ಸ್ಕ್ರೀನ್ 5 - ರಾತ್ರಿ 7:30
ನಿರ್ದೇಶಕ: ಮಾಶಾ ಸ್ಕಿಲಿನ್ಸ್ಕಿ (ಜರ್ಮನಿ)
ಕಥೆಯ ಸಾರಾಂಶ: ಇದು ನಾನ್‌ ಲೀನಿರ್ ಶೈಲಿಯ ಸಿನಿಮಾ. ನಾಲ್ಕು ವಿಭಿನ್ನ ಕಾಲಘಟ್ಟದಲ್ಲಿ ಈ ಸಿನಿಮಾ ಸಾಗುತ್ತೆ. ಆದರೆ, ಆಲ್ಟ್‌ಮಾರ್ಕ್ ಎನ್ನುವ ಒಂದೇ ಪ್ರಾಂತ್ಯದಲ್ಲಿ ಈ ಎಲ್ಲಾ ಸಿನಿಮಾಗಳು ಸಾಗುತ್ತವೆ. ಪಾತ್ರಗಳ ನಡುವಿನ ಸಂಭಾಷಣೆಗಳು ಹಾಗೂ ಸನ್ನಿವೇಶಗಳು ಅಲ್ಲೇ ನಡೆಯುತ್ತವೆ. ಹೀಗಾಗಿ ಇದೊಂದು ವಿಶಿಷ್ಟ ಅನುಭವ ನೀಡುತ್ತವೆ.

6. ನಮ್ ಸಾಲಿ

ಸ್ಕ್ರೀನ್ 7 - ಮಧ್ಯಾಹ್ನ 3:30
ನಿರ್ದೇಶಕ: ಅನಿಲ್ ಕುಮಾರ್
ಕಥೆಯ ಸಾರಾಂಶ: ಇದೊಂದು ಕನ್ನಡ ಸಿನಿಮಾ. ಕಲ್ಯಾಣ ಕರ್ನಾಟಕ ಭಾಗದ ಗ್ರಾಮೀಣ ಶಿಕ್ಷಣ ವ್ಯವಸ್ಥೆಯ ಸುತ್ತ ನಡೆಯುವ ಕಥೆಯಾಗಿದೆ.

7. ಅಮ್ರಮ್

ಸ್ಕ್ರೀನ್ 6 - ರಾತ್ರಿ 8:00
ನಿರ್ದೇಶಕ: ಫಾತಿಹ್ ಅಕಿನ್ (ಜರ್ಮನಿ)
ಕಥೆಯ ಸಾರಾಂಶ: ವರ್ಲ್ಡ್ ಸಿನಿಮಾದ ಜನಪ್ರಿಯ ನಿರ್ದೇಶಕಿ ಫಾತಿಹ್ ಅಕಿನ್ ಅವರ ಸಿನಿಮಾವಿದು. ಜರ್ಮನಿಯ ಅಮ್ರಮ್ ದ್ವೀಪದಲ್ಲಿರುವ ನಾನ್ನಿಂಗ್ ಬೋಮ್ ಎಂಬುವ 12 ವರ್ಷದ ಹುಡುಗನ ಕಥೆಯಾಗಿದೆ. ಇದು ಕೌಟುಂಬಿಕ ಸಂಬಂಧಗಳ ಹಿನ್ನಲೆಯನ್ನು ಇಟ್ಟುಕೊಂಡು ಸಿನಿಮಾ ಮಾಡಲಾಗಿದೆ.

8. ದಿ ಇಯರಿಂಗ್ಸ್ ಆಫ್ ಮೇಡಂ ಡಿ

ಸ್ಕ್ರೀನ್ 1 - ಮಧ್ಯಾಹ್ನ 2:30
ನಿರ್ದೇಶಕ: ಮ್ಯಾಕ್ಸ್ ಓಫಲ್ಸ್ (ಫ್ರಾನ್ಸ್)
ಕಥೆಯ ಸಾರಾಂಶ: ಫ್ರೆಂಚ್ ಸಿನಿಮಾದ ಅತ್ಯದ್ಭುತ ಸಿನಿಮಾಗಳಲ್ಲೊಂದಾಗಿದೆ. 1953ರ ಈ ಕಪ್ಪು-ಬಿಳುಪು ಸಿನಿಮಾ ಛಾಯಾಗ್ರಹಣ ಹಾಗೂ ಸ್ಕ್ರೀನ್ ಪ್ಲೇಯ ಗಟ್ಟಿತನಕ್ಕೆ ಸಾಕ್ಷಿಯಾಗಿದೆ.

9. ಕ್ಯಾರವಾನ್

ಸ್ಕ್ರೀನ್ 2 - ರಾತ್ರಿ 8:10
ನಿರ್ದೇಶಕ: ಜುಜಾನಾ ಕಿರ್ಚ್‌ನರೋವಾ (ಜೆಕ್ ಗಣರಾಜ್ಯ)
ಕಥೆಯ ಸಾರಾಂಶ: ಕಂಟೆಂಪರರಿ ವರ್ಲ್ಡ್ ಸಿನಿಮಾ ವಿಭಾಗದಲ್ಲಿ ಈ ಸಿನಿಮಾ ಪ್ರಸಾರವಾಗುತ್ತಿದೆ. 2015ರಲ್ಲಿ ತೆರೆಕಂಡ ಜೆಕ್ ಗಣರಾಜ್ಯ ದೇಶದ ಯುರೋಪ್‌ ಪ್ರಯಾಣವನ್ನು ಆಧರಿಸಿದ ಸಿನಿಮಾ

10. ಮೈ ಫಾದರ್ಸ್ ಶಾಡೋ

ಸ್ಕ್ರೀನ್ 5 - ಮಧ್ಯಾಹ್ನ 12:00
ನಿರ್ದೇಶಕ: ಅಕಿನೋಲಾ ಡೇವಿಸ್ ಜೂನಿಯರ್ (ಯುಕೆ/ ನೈಜೀರಿಯಾ)
ವಿಶೇಷತೆ: ನೈಜೀರಿಯಾದ ಸಂಸ್ಕೃತಿ ಮತ್ತು ಅಸ್ಮಿತೆಯ ಬಗ್ಗೆ ಈ ಸಿನಿಮಾವು ಪ್ರೇಕ್ಷಕರಲ್ಲಿ ಚರ್ಚೆಯನ್ನು ಹುಟ್ಟಾಕಲಿದೆ.

More from Filmibeat

English summary
17th Bengaluru International film festival 10 movies can watch on Feb 1st.
Read more about: biffes movies film festival
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X