ಎರಡು ಸೂಪರ್, ಆರು ಹಿಟ್, ಉಳಿದದ್ದು ಅಕ್ಕಿಹಿಟ್ಟು

Kannada movies box officer performance
ಗಲ್ಲಾಪೆಟ್ಟಿಗೆ ವಿಷಯಕ್ಕೆ ಬಂದಾಗ ಕನ್ನಡ ಚಿತ್ರರಂಗ ಕಳೆದ ವರ್ಷಕ್ಕೆ ಹೋಲಿಸಿದರೆ 2011ರಲ್ಲಿ ಖಂಡಿತ ಸುಧಾರಿಸಿದೆ. ಆಗಸ್ಟ್ 12ರವರೆಗೆ ಒಟ್ಟು 71 ಚಿತ್ರ ಬಿಡುಗಡೆಗೊಂಡಿವೆ. ಇದರಲ್ಲಿ ಎರಡು ಸೂಪರ್ ಹಿಟ್ ಚಿತ್ರಗಳು, ಆರು ಹಿಟ್ ಚಿತ್ರಗಳು ಮತ್ತು ನಿರ್ಮಾಪಕರಿಗೆ ಕೊಂಚ ಲಾಭ ತಂದು ಕೊಟ್ಟ ಚಿತ್ರಗಳು ಐದು. ರಾಷ್ಟ್ರ ಮಟ್ಟದಲ್ಲಿ ಹೆಸರು ಮಾಡಿದ ಚಿತ್ರ ಒಂದು.

'ದಂಡಂ ದಶಗುಣಂ' ಚಿತ್ರದಲ್ಲಿ ಸಂಭಾವನೆ ವಿಷಯದಲ್ಲಿ ನಿರ್ಮಾಪಕ ಮತ್ತು ನಾಯಕಿಯ ಜಟಾಪಟಿ ಚಿತ್ರರಂಗ ಇಬ್ಭಾಗದ ಹಂತಕ್ಕೆ ಹೋಗಿದ್ದು, ಉತ್ತಮ ವಿಮರ್ಶೆ ಇದ್ದರೂ 'ಐ ಯಾಮ್ ಸಾರಿ ಮತ್ತೆ ಬನ್ನಿ ಪ್ರೀತ್ಸೋಣ' ಚಿತ್ರ ಒಂದು ವಾರದ ಮುಂಚೆಯೇ ಚಿತ್ರಮಂದಿರದಿಂದ ಎತ್ತಂಗಡಿಯಾಗಿದ್ದು ಚಿತ್ರರಂಗದ ಮಟ್ಟಿಗೆ ಕಪ್ಪು ಚುಕ್ಕೆ.

ಇದೇ ವಾರ ಬಿಡುಗಡೆಗೆ ಸಿದ್ದವಾಗಿರುವ 'ಜೋಗಯ್ಯ' ಚಿತ್ರ ಕರ್ನಾಟಕದಲ್ಲಿ ಮಾತ್ರವಲ್ಲದೆ ಪಕ್ಕದ ತಮಿಳು, ತೆಲುಗು ಚಿತ್ರರಂಗದಲ್ಲೂ ಹುಟ್ಟಿಸಿರುವ ಆಸಕ್ತಿ ಮತ್ತು ಈ ಮಟ್ಟಿಗೆ ಹೈಪ್ ಸೃಷ್ಟಿಸಿದ ಪ್ರೇಮ್ ಅಭಿನಂದನಾರ್ಹರು. 12 ಗಂಟೆಯಲ್ಲಿ ಚಿತ್ರೀಕರಣ ಮುಗಿಸಿ ದಾಖಲೆ ಬರದ 'ಪೋಲಿಸ್ ಸ್ಟೋರಿ' ಚಿತ್ರ ಕೂಡಾ ಒಂದು ಹೈಲೈಟ್.

ಇದುವರೆಗಿನ ಎರಡು ಸೂಪರ್ ಹಿಟ್ ಚಿತ್ರಗಳು:
ಕೆಂಪೇಗೌಡ - ಸುದೀಪ್, ರಾಗಿಣಿ, ರವಿಶಂಕರ್
ಹುಡುಗರು - ಪುನೀತ್, ಶ್ರೀನಗರ ಕಿಟ್ಟಿ, ಯೋಗೀಶ್, ರಾಧಿಕಾ ಪಂಡಿತ್

ಹಿಟ್ ಚಿತ್ರಗಳು:
ಸಂಜು ವೆಡ್ಸ್ ಗೀತಾ : ಶ್ರೀನಗರ ಕಿಟ್ಟಿ, ರಮ್ಯಾ
ಜಾನಿ ಮೇರಾ ನಾಮ್, ಪ್ರೀತಿ ಮೇರಾ ಕಾಮ್ : ವಿಜಯ್, ರಮ್ಯಾ
ಕಿರಾತಕ : ಯಶ್, ಒವಿಯಾ ಹೆಲನ್, ತಾರಾ
ಒಲವೇ ಮಂದಾರ : ಶ್ರೀಕಾಂತ್, ಆಕಾಂಕ್ಷ, ಶರಣ್
ಕೃಷ್ಣನ್ ಮ್ಯಾರೇಜ್ ಸ್ಟೋರಿ : ಅಜಯ್ ರಾವ್, ನಿಧಿ ಸುಬ್ಬಯ್ಯ, ಜೈ ಜಗದೀಶ್
ವಿನಾಯಕ ಗೆಳೆಯರ ಬಳಗ : ವಿಜಯ್ ರಾಘವೇಂದ್ರ, ನವೀನ ಕೃಷ್ಣ

ಎವರೇಜ್ ಚಿತ್ರಗಳು:
ಬಾಸ್ : ದರ್ಶನ್ ತೂಗುದೀಪ್, ನವ್ಯಾ ನಾಯರ್, ರೇಖಾ
ಕಳ್ ಮಂಜ : ಕೋಮಲ್ ಕುಮಾರ್, ಉದಯತಾರಾ
ಕೋಟೆ : ಪ್ರಜ್ವಲ್ ದೇವರಾಜ್, ಡಿಂಪಲ್
ಚನ್ನಮ್ಮ ಐಪಿಎಸ್ : ಆಯೆಷಾ, ಪಿ ಎನ್ ಸತ್ಯಾ.
ಶ್ರೀಮತಿ : ಉಪೇಂದ್ರ, ಪ್ರಿಯಾಂಕ, ಸೆಲಿನಾ ಜೆಟ್ಲೆ

ರಾಷ್ಟ್ರ ಮಟ್ಟದಲ್ಲಿ ಹೆಸರು ಮಾಡಿದ ಚಿತ್ರ :
ಪುಟ್ಟಕ್ಕನ ಹೈವೇ

More from Filmibeat

English summary
Kannada movies box officer performance : Film industry is on the path of recovery after initial jitters. Hudugaru and Kempegowda are super hit movies so far. Six movies have filled producers' purse and one has won national award.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X