ಸಾರಥಿ,ಪರಮಾತ್ಮನಾಟಕ್ಕೆ ಬಾಕ್ಸ್ಆಫೀಸ್ ಧೂಳಿಪಟ!!

130ಕ್ಕೂ ಹೆಚ್ಚು ಚಿತ್ರಮಂದಿರದಲ್ಲಿ ಪ್ರದರ್ಶನ ಕಾಣುತ್ತಿರುವ 'ಸಾರಥಿ' ಚಿತ್ರ ವಾರ ವಾರ ತನ್ನ ಥಿಯೇಟರ್ ಸಂಖ್ಯೆಗಳನ್ನು ಹೆಚ್ಚುಸುತ್ತಾ ನಿರ್ಮಾಪಕರಿಗೆ, ಹಂಚಿಕೆದಾರರಿಗೆ ಮತ್ತು ಚಿತ್ರಮಂದಿರದ ಮಾಲೀಕರಿಗೆ ಜೇಬು ತುಂಬಾ ಹಣದ ಹೊಳೆ ಹರಿಸುತ್ತಿದೆ.
'ಪರಮಾತ್ಮ' ಆಟ 95ಕ್ಕೂ ಹೆಚ್ಚು ಚಿತ್ರಮಂದಿರದಲ್ಲಿ ಜೋರಾಗಿಯೇ ನಡೆಯುತ್ತಿದೆ. ಬೆಂಗಳೂರಿನಲ್ಲಿರುವ ಎಲ್ಲಾ ಮಲ್ಟಿಪ್ಲೆಕ್ಸ್‌ಗಳಲ್ಲಿ ಚಿತ್ರ ಪ್ರದರ್ಶನ ಕಾಣುತ್ತಿರುವುದು ಗಮನಾರ್ಹ. ಪಿವಿಆರ್‌ನಲ್ಲಿ ಚಿತ್ರ 7 ಪ್ರದರ್ಶನ ಕಾಣುತ್ತಿದ್ದರೆ, ಐನಾಕ್ಸ್‌ನಲ್ಲಿ ಐದು ಪ್ರದರ್ಶನ ಕಾಣುತ್ತಿದೆ.
ಕನ್ನಡ ಚಿತ್ರ ಪ್ರದರ್ಶಿಸದ ಚಿತ್ರಮಂದಿರಗಳು ಈ ಎರಡು ಚಿತ್ರಗಳ ಕಲೆಕ್ಷನ್ ನೋಡಿ ಬೆರಗಾಗಿವೆ. ಬೆಂಗಳೂರಿನ ಪ್ರಮುಖ ಚಿತ್ರಮಂದಿರಗಳಾದ ನರ್ತಕಿ ಮತ್ತು ಸಂತೋಷ್ ಚಿತ್ರ ಮಂದಿರದಲ್ಲಿ ಪುನೀತ್ ಮತ್ತು ದರ್ಶನ್ ಅಭಿಮಾನಿಗಳ ಜೈಕಾರ ಮುಗಿಲು ಮುಟ್ಟುತ್ತಿದೆ.
ಎರಡು ಚಿತ್ರಗಳ ದರ್ಬಾರ್ ಯಾವ ರೀತಿ ಇದೆಯೆಂದರೆ ಬ್ಲ್ಯಾಕ್ ಟಿಕೆಟ್ ಮಾರುವವರು "ಬೇಕಾದ್ರೆ ತಗೊಳ್ರೀ.. ನೋಡ್ತಾ ಇರಿ ಹತ್ತೇ ನಿಮಿಷದಲ್ಲಿ ಟಿಕೆಟ್ ಎಲ್ಲಾ ಸೋಲ್ಡ್ ಔಟ್ ಆಗುತ್ತೆ ನೋಡಿ" ಎಂದು ಪ್ರೇಕ್ಷಕರಿಗೆ ಪುಸಲಾಯಿಸುತ್ತಿರುವುದು ಚಿತ್ರಮಂದಿರಗಳ ಮುಂದೆ ಕಾಣಬಹುದು. (ಒನ್‌ಇಂಡಿಯಾ ಕನ್ನಡ)


Click it and Unblock the Notifications











