ಕನ್ನಡ ಚಿತ್ರರಂಗ 2011 : ಮರಣೋತ್ತರ ಪರೀಕ್ಷೆ

ಆದರೆ ಬಹಳಷ್ಟು ನಿರೀಕ್ಷೆ ಇಟ್ಟುಕೊಂಡು ಬಿಡುಗಡೆ ಹೊಂದಿದ್ದ ಚಿತ್ರಗಳು ನಿರೀಕ್ಷೆಗೂ ಮೀರಿ ನೆಲ ಕಚ್ಚಿದ್ದು 2011 ರಲ್ಲಿ ಸಾಕಷ್ಟಿವೆ. ಜನವರಿಯಲ್ಲಿ 7, ಫೆಬ್ರವರಿಯಲ್ಲಿ 14, ಮಾರ್ಚ್ ನಲ್ಲಿ 6, ಎಪ್ರಿಲ್ ನಲ್ಲಿ 11, ಮೇನಲ್ಲಿ 7, ಜೂನ್ ನಲ್ಲಿ 10, ಜುಲೈ ನಲ್ಲಿ 12, ಆಗಸ್ಟ್ ನಲ್ಲಿ 5, ಸೆಪ್ಟಂಬರ್ ನಲ್ಲಿ 10, ಅಕ್ಟೋಬರ್ ನಲ್ಲಿ 7, ನವೆಂಬರ್ ನಲ್ಲಿ 6 ಮತ್ತು ಡಿಸೆಂಬರ್ ( as on 16.12.11) ನಲ್ಲಿ ಇದುವರೆಗೆ 6 ಚಿತ್ರಗಳು ಬಿಡುಗಡೆಗೊಂಡಿವೆ. ಅಂದರೆ ಒಟ್ಟು ಈ ವರ್ಷದಲ್ಲಿ ಬಿಡುಗಡೆಗೊಂಡ ಚಿತ್ರಗಳ ಸಂಖ್ಯೆ - 101 .
ದುನಿಯಾ ವಿಜಯ್ ಅಭಿನಯದ ಕಂಠೀರವ ಮತ್ತು ವೀರಬಾಹು ಚಿತ್ರಗಳು ಪ್ರೇಕ್ಷಕರ ಮನಸೆಳೆಯಲಿಲ್ಲ. ರಮೇಶ್ ಅರವಿಂದ್ ಅಭಿನಯದ ರಂಗಪ್ಪ ಹೋಗ್ಬಿಟ್ಟ ಚಿತ್ರ ಬಹುಬೇಗ ಚಿತ್ರಮಂದಿರದಿಂದ ಹೋಗ್ಬಿಡ್ತು. ಚಿತ್ರರಂಗದ ಮರ್ಯಾದೆಯನ್ನು ಅನಾವಶ್ಯಕವಾಗಿ ಸಂತೋಷ್ ಚಿತ್ರಮಂದಿರದ ಮೇಲೆ ತಂದಿಟ್ಟು ಮರ್ಯಾದೆ ಕಳೆದುಕೊಂಡ ಸಿನಿಮಾ ಅಂದರೆ ಹರೀಶ್ ರಾಜ್ ಅಭಿನಯದ ಗನ್ ಚಿತ್ರ. ಇವರ ಅಭಿನಯದ ಇನ್ನೊಂದು ಚಿತ್ರ ನಾನು ನನ್ನ ಹೆಂಡ್ತೀರು ಚಿತ್ರ ನೋಡುಲು ಯಾರೂ ಹೋಗಲೇ ಇಲ್ಲ.
ಹಾಸ್ಯ ನಟರ ದೊಡ್ಡ ದಂಡೇ ಇದ್ದ ರಾಮ ರಾಮ ರಘು ರಾಮ ಚಿತ್ರ ಹೋದ ಪಟ್ಟ ಬಂದ ಪುಟ್ಟ ಎನ್ನುವ ಹಾಗೆ ಚಿತ್ರಮಂದಿರದಿಂದ ಕಾಲ್ಕಿತ್ತಿತು. ಈ ವರ್ಷದ ಮೊದಲ ಡಿಸಾಸ್ಟರ್ ಅಂದರೆ ದರ್ಶನ್ ಅಭಿನಯದ ಪ್ರಿನ್ಸ್ ಚಿತ್ರ, ಉತ್ತಮ ಪ್ರಚಾರ ಪಡೆದು ಕೊಂಡಿದ್ದ ಈ ಚಿತ್ರ ಪ್ರೇಕ್ಷಕರಿಗೆ ಇಷ್ಟವಾಗಲಿಲ್ಲ ಎಂದರೆ ದರ್ಶನ್ ಅಭಿಮಾನಿಗಳು ಬೇಜಾರು ಮಾಡಿಕೊಳ್ಳಬಾರದು.
ಅನಂತ್ ನಾಗ್, ಸುಹಾಸಿನಿ ಅಭಿನಯದ ಮತ್ತೊಂದು ಮದುವೆಯ ಊಟಕ್ಕೆ ಯಾರೂ ಬರಲಿಲ್ಲ. ಚಿತ್ರರಂಗ ಇನ್ನೇನು ಇಬ್ಭಾಗವಾಯಿತು ಎನ್ನುವ ಮಟ್ಟಿಗೆ ಕಲಹ ಸೃಷ್ಟಿಯಾಗಿ ಕನ್ನಡ ಚಿತ್ರರಂಗ ಕಂಡು ಮುಸಿಮುಸಿ ನಗುವಂತಾಗಿ ಬಿಡುಗಡೆಗೊಂಡ ಚಿತ್ರವೆಂದರೆ ರಮ್ಯಾ, ಚಿರಂಜೀವಿ ಸರ್ಜಾ ಅಭಿನಯದ , ಗಣೇಶ್ ನಿರ್ಮಾಣದ ದಂಡಂ ದಶಗುಣಂ ಚಿತ್ರ. ಈ ಚಿತ್ರಕ್ಕೆ ದುಡ್ಡು ಹಾಕುವುದು ದಂಡ ಎಂದು ಪ್ರೇಕ್ಷಕರು ನಿರ್ಧರಿಸಿ ಬಿಟ್ಟರು.
ಪ್ರಜ್ವಲ್ ದೇವಾರಾಜ್ ಅಭಿನಯದ ಮುರಳಿ ಮೀಟ್ಸ್ ಮೀರಾ ಗಲ್ಲಾಪೆಟ್ಟಿಗೆಯಲ್ಲಿ ಸೋತಿದ್ದು ಆಶ್ಚರ್ಯ, ಏಕೆಂದರೆ ಚಿತ್ರವೊಂದಕ್ಕೆ ಏನೇನು ಬೇಕು ಎಲ್ಲಾ ಇದ್ದರೂ ಚಿತ್ರ ಸೋತಿದ್ದು. ಲೂಸ್ ಮಾದ, ಪ್ರಕಾಶ್ ರೈ ಅಭಿನಯದ ಧೂಳ್ ಚಿತ್ರ ಗೆಲ್ಲಲಿಲ್ಲ. ಹಾಗೆ ಯೋಗೀಶ್ ಅಭಿನಯದ ದೇವದಾಸ್ ಚಿತ್ರದ ಕಥೆ ಕೂಡ ಅಷ್ಟೇ.
ಇನ್ನು ಇನ್ನೊಂದು ಸಿಕ್ಕಾಪಟ್ಟೆ ಹೈಪ್ ಹುಟ್ಟಿಸಿದ್ದ ಜೋಗಯ್ಯ ಚಿತ್ರದ ಕಥೆ ಏನು... ಮುಂದಿನ ಪುಟ ಕ್ಲಿಕ್ಕಿಸಿ..


Click it and Unblock the Notifications