18 ಎಕರೆಯಲ್ಲಿ ಕೆಡಿ ಸೆಟ್ಟು.. 70 ದಶಕದ ಬೆಂಗಳೂರಿನ ಟೌನ್ ಹಾಲ್, ಕೆಆರ್ ಮಾರ್ಕೆಟ್ ಸೃಷ್ಟಿ!

ಜೋಗಿ ಪ್ರೇಮ್ ನಿರ್ದೇಶಿಸಿದ ಸಿನಿಮಾ 'ಕೆಡಿ-ದಿ ಡೆವಿಲ್' ಪ್ರಚಾರ ಆರಂಭಿಸಿದೆ. ಈ ವರ್ಷದ ಕೊನೆಯಲ್ಲಿ ಕುಣಿದು ಕುಪ್ಪಳಿಸುವ ಒಂದೊಳ್ಳೆ ಸಾಂಗ್ ಕೊಟ್ಟಿದ್ದಾರೆ. "ಶಿವ ಶಿವ" ಅನ್ನೋ ಹಾಡಿನಿಂದಲೇ ಸಿನಿಮಾದ ಪ್ರಚಾರಕ್ಕೆ ಇಳಿದಿದ್ದಾಗಿದೆ. ಈ ಸಿನಿಮಾ ಧ್ರುವ ಸರ್ಜಾ ಹಾಗೂ ಜೋಗಿ ಪ್ರೇಮ್ ಜೋಡಿಯ ಮೊದಲ ಕಾಂಬಿನೇಷನ್.

70 ದಶಕದ ನೈಜ ಘಟನೆಯನ್ನು ಆಧಾರವಾಗಿಟ್ಟುಕೊಂಡು 'ಕೆಡಿ' ಸಿನಿಮಾಗೆ ಕಥೆಯನ್ನು ಹೆಣೆಯಲಾಗಿದೆ. ಹೀಗಾಗಿ ಇಡೀ ಸಿನಿಮಾ 70ರ ದಶಕದ ಸೆಟ್ಟಿನಲ್ಲಿಯೇ ಸಾಗಲಿದೆ. ಈ ಕಾರಣಕ್ಕೆ ಅದ್ಧೂರಿ ವೆಚ್ಚದಲ್ಲಿ ಸೆಟ್ ಅನ್ನು ನಿರ್ಮಾಣ ಮಾಡಲಾಗಿದೆ. ಕನ್ನಡದ ಜನಪ್ರಿಯ ಕಲಾ ನಿರ್ದೇಶಕ ಮೋಹನ್ ಬಿ ಕೆರೆ 'ಕೆಡಿ'ಗಾಗಿ ಈ ಸೆಟ್‌ ಅನ್ನು ಹಾಕಿದ್ದಾರೆ. ಸದ್ಯ ಈ ಸೆಟ್ಟಿನ ಬಗ್ಗೆ ಅವರೇ ಕೆಲವು ಇಂಟ್ರೆಸ್ಟಿಂಗ್ ವಿಷಯವನ್ನು ಹಂಚಿಕೊಂಡಿದ್ದಾರೆ.

1970s Bangalore Town Hall KR Market created in 18 acres of land for Jogi Prem Dhruva Sarja movie KD

ಜೋಗಿ ಪ್ರೇಮ್ ಸಿನಿಮಾದಲ್ಲಿ ಅದ್ಧೂರಿ ಸೆಟ್ಟು, ಮತ್ತೆ ಮತ್ತೆ ಗುನುಗುವ ಹಾಡುಗಳಂತೂ ಇದ್ದೇ ಇರುತ್ತವೆ. 'ಕೆಡಿ'ಯಲ್ಲೂ ಅದು ಮುಂದುವರೆದಿದೆ. ಸುಮಾರು 18 ಎಕರೆ ಜಾಗದಲ್ಲಿ ಈ ಸೆಟ್ ಅನ್ನು ಹಾಕಿದ್ದು, ಅಲ್ಲಿ 70 ದಶಕದಲ್ಲಿದ್ದ ಬೆಂಗಳೂರಿನ ಪ್ರಮುಖ ಸ್ಥಳಗಳು ಹಾಗೂ ಕಟ್ಟಡವನ್ನು ನಿರ್ಮಾಣ ಮಾಡಲಾಗಿದೆ. ಅಷ್ಟಕ್ಕೂ 70 ದಶಕದ ಯಾವೆಲ್ಲ ಸ್ಥಳಗಳನ್ನು ಸೃಷ್ಟಿ ಮಾಡಲಾಗಿದೆ ಅನ್ನೋದನ್ನು ತಿಳಿಯಲು ಮುಂದೆ ಓದಿ.

'ಕೆಡಿ' ಸಿನಿಮಾಗಾಗಿ ಸೆಟ್ ಅನ್ನು ನಿರ್ಮಾಣ ಮಾಡುವುದಕ್ಕೆ 'ಮಾರ್ಟಿನ್' ಸಿನಿಮಾದ ನಿರ್ಮಾಪಕ ಉದಯ್ ಮೆಹ್ತಾ ಸಹಾಯ ಮಾಡಿದ್ದರು. ಅವರ ಪರಿಚಯದವರ ಬಳಿ ಸುಮಾರು 18 ಎಕರೆ ಜಾಗವನ್ನು ಕೊಡಿಸಿದ್ದರು. ಇಲ್ಲಿ ಬೆಂಗಳೂರಿನ ಟೌನ್ ಹಾಲ್ ಹಾಗೂ ಅದರ ಸುತ್ತಮುತ್ತಲಿನ ಸ್ಥಳಗಳು ನಿರ್ಮಾಣ ಆಗಿವೆ. ಈ ಬಗ್ಗೆ ಮೋಹನ್ ಬಿ ಕೆರೆ ಮಾಹಿತಿ ಹಂಚಿಕೊಂಡಿದ್ದಾರೆ.

"ಈ ಸೆಟ್ ಹಾಕುವುದಕ್ಕೆ 18 ಎಕ್ಕರೆ ಜಾಗ ಬೇಕಿತ್ತು. ಉದಯ್ ಮೆಹ್ತಾ ಅವರಿಗೆ ಪರಿಚಯವಿರುವವರ ಜಾಗದಲ್ಲಿ ಸೆಟ್ ಅನ್ನು ಶುರು ಮಾಡಿದ್ವಿ. ಇದನ್ನು ಶುರು ಮಾಡುವುದಕ್ಕಿಂತ ಟೌನ್ ಹಾಲ್ ಶಾಟ್‌ಗಳನ್ನು ಸಾಕಷ್ಟು ಇದೆ. ಇಡೀ ಸಿಟಿ ಮಾರ್ಕೆಟ್‌ನಲ್ಲಿ ನಡೆಯುವ ಸನ್ನಿವೇಶವಿದೆ. ಅಲ್ಲಿ ಒಂದು ತಿಗಳರ ಪಾಳ್ಯ ಅಂತಿದೆ. ಅಲ್ಲಿ ಧರ್ಮರಾಯ ಟೆಂಪಲ್ ಇದೆ. ಗರಡಿ ಮನೆಯಿದೆ. ಟೌನ್ ಹಾಲ್ ಇದೆ. ಸಿಟಿ ಮಾರ್ಕೆಟ್ ಇದೆ. ಇಷ್ಟನ್ನೂ ನಾನು 18 ಎಕ್ಕರೆಯಲ್ಲಿ ಕ್ರಿಯೇಟ್ ಮಾಡಬೇಕಾಗಿ ಬಂತು." ಎಂದು ಹೇಳಿದ್ದಾರೆ.

1970s Bangalore Town Hall KR Market created in 18 acres of land for Jogi Prem Dhruva Sarja movie KD

ಬೆಂಗಳೂರಿನಲ್ಲಿ ಇರುವ ಟೌನ್ ಹಾಲ್ ಎಲ್ಲರಿಗೂ ಚಿರಪರಿಚಿತವಾದ ಕಟ್ಟಡ. ಹೀಗಾಗಿ ಈ ಕಟ್ಟಡ ಇದ್ದಂತೆ ಸೇಮ್ ಟು ಸೇಮ್ ನಿರ್ಮಾಣ ಮಾಡಬೇಕಿತ್ತು. ಹೀಗಾಗಿ ಇಡೀ ತಂಡ ಟೌನ್ ಹಾಲ್‌ಗೆ ಹೀಗಿ ಅಲ್ಲಿ ಪರ್ಮಿಷನ್ ತೆಗೆದುಕೊಂಡು ಕಾರ್ನರ್ ಟು ಕಾಲ್ ಸ್ಕೇಲ್ ಟು ಸ್ಕೇಲ್ ಅಳತೆ ತೆಗೆದುಕೊಂಡು ಈ ಸೆಟ್‌ಗಳನ್ನು ನಿರ್ಮಾಣ ಮಾಡಲಾಗಿದೆ.

"ಟೌನ್ ಹಾಲ್ ಸರ್ಕಲ್, ಮೈಸೂರು ಶುಗರ್ ಬಿಲ್ಡಿಂಗ್, ಶಿವಾಜಿ ಟಾಕೀಸ್, ಮೈಸೂರು ಬ್ಯಾಂಕ್ ಒಂದು ಸೈಡ್ ಇಷ್ಟೂ ಕ್ರಿಯೇಟ್ ಆಗುತ್ತೆ. ಇನ್ನೊಂದು ಕಡೆ ಸೇಮ್ ಕೃಷ್ಣ ರಾಜೇಂದ್ರ ಮಾರ್ಕೆಟ್ 70 ದಶಕದಲ್ಲಿ ಹೇಗಿತ್ತೋ ಹಾಗೆ ಕ್ರಿಯೇಟ್ ಆಗುತ್ತೆ. ಕೊನೆಗೆ ಅದು ಹೇಗೆ ಶುರುವಾಯ್ತು ಅಂದರೆ, ಒಂದೇ ಕಾಸ್ಟ್ಯೂಮ್‌ನಲ್ಲಿ ಟೌನ್ ಹಾಲ್ ಹತ್ತಿರ ಫೋಟೊ ತೆಗೆಸಿಕೊಂಡು ಬಂದು, ನಾನು ಹಾಕಿರುವ ಸೆಟ್‌ನಲ್ಲಿ ಫೋಟೊ ತೆಗೆಸಿಕೊಂಡು ಬಂದು ಎರಡು ಸೇರಿಸಿದರೆ, ನಿಮಗೆ ಒರಿಜಿನಲ್ ಯಾವುದು ಅಂತ ಗೊತ್ತಾಗುತ್ತಿರಲಿಲ್ಲ." ಎಂದು ಹೇಳಿದ್ದಾರೆ.

ಇದರೊಂದಿಗೆ ಕಬ್ಬನ್ ಪೇಟೆ ರಸ್ತೆ, ಚಿಕ್ಕಪೇಟೆ ರಸ್ತೆ, ಧರ್ಮರಾಯ ದೇವಸ್ಥಾನ, ತಿಗಳರ ಪೇಟೆಯ ಗರಡಿ ರೂಮ್‌ಗಳನ್ನು ಈ ಸಿನಿಮಾದಲ್ಲಿ ನೋಡಬಹುದು. ಹೀಗಾಗಿ 70 ರ ದಶಕದಲ್ಲಿ ಬೆಂಗಳೂರು ಹೇಗಿತ್ತು ಅನ್ನೋದನ್ನು ಜೋಗಿ ಪ್ರೇಮ್ ಸಿನಿಮಾ 'ಕೆಡಿ' ಯಲ್ಲಿ ನೋಡಬಹುದಾಗಿದೆ.

More from Filmibeat

English summary
1970s Bangalore Town Hall, KR Market created in 18 acres of land for Jogi Prem, Dhruva Sarja KD The Devil;
Read more about: jogi prem dhruva sarja
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X