ಕಮಲ್ ಹಾಸನ್ ಪುಷ್ಪಕ ವಿಮಾನ ಚಿತ್ರ ಪ್ರದರ್ಶನ
ಮೂಕಿ ಕಾಮಿಡಿ ಸಿನಿಮಾ ಪುಷ್ಪಕ ವಿಮಾನ. 1987, ಸೆಪ್ಟೆಂಬರ್ 10ರಂದು ತೆರೆಕಂಡ ಈ ಚಿತ್ರ ಭಾರತೀಯ ಚಿತ್ರರಂಗದಲ್ಲೇ ಹೊಸ ಪ್ರಯೋಗ. ಈ ಚಿತ್ರದ ಪ್ರದರ್ಶನವನ್ನು ಕೆವಿ ಸುಬ್ಬಣ್ಣ ಆಪ್ತ ಸಮೂಹ ಮತ್ತು ಕನ್ನಡ ವಾರ್ತಾ ಇಲಾಖೆ ಭಾನುವಾರ (ಮಾ.4) ಏರ್ಪಡಿಸಿದೆ.
ಒಟ್ಟು 131 ನಿಮಿಷಗಳ ಈ ಚಿತ್ರದಲ್ಲಿ ಒಂದೇ ಒಂದು ಸಂಭಾಷಣೆ ಕೂಡ ಇರಲಿಲ್ಲ. ಆಂಗಿಕ ಅಭಿನಯ, ಕೇವಲ ಸದ್ದು, ದೇಹ ಭಾಷೆಯ ಮೂಲಕ ಪ್ರೇಕ್ಷಕರನ್ನು ಸೆಳೆದಿದ್ದು. ತುಟಿ ಚಲನೆಯ ಮೂಲಕ ಸನ್ನಿವೇಶಗಳನ್ನು ಸಂಭಾಳಿಸಿದ್ದವು. ಛಾಯಾಗ್ರಹಣವೇ ಚಿತ್ರದ ಜೀವಾಳ.
ಸಿಂಗೀತಂ ಶ್ರೀನಿವಾಸ್ ರಾವ್ ನಿರ್ದೇಶಿಸಿದ್ದ ಈ ಚಿತ್ರದಲ್ಲಿ ಖ್ಯಾತ ನಟ ಕಮಲ್ ಹಾಸನ್, ಅಮಲಾ, ಮನದೀಪ್ ರಾಯ್, ಟಿನು ಆನಂದ್, ಫರೀದಾ ಜಲಾಲ್, ಪಿ ಎಲ್ ನಾರಾಯಣ, ಕೆ ಎಸ್ ರಮೇಶ್, ಪ್ರತಾಪ್, ಲೋಕ್‌ನಾಥ್ ತಾರಾಗಣದಲ್ಲಿದ್ದರು. ಚಿತ್ರದಲ್ಲಿ ವೈದ್ಯನಾಥನ್ ಅವರ ಸಂಗೀತವಿತ್ತು. ಕನ್ನಡಿಗ ಶ್ರೀನಗರ ಶ್ರೀನಿವಾಸ್ ಚಿತ್ರದ ನಿರ್ಮಾಪಕರು.
ಚಿತ್ರ ಪ್ರದರ್ಶನ ಸ್ಥಳ: ನಂ.151, 7ನೇ ಕ್ರಾಸ್, ಟೀಚರ್ಸ್ ಕಾಲೋನಿ, 1ನೇ ಹಂತ, ಕುಮಾರಸ್ವಾಮಿ ಲೇಔಟ್. ಸಮಯ ಮಧ್ಯಾಹ್ನ 3.30. ಹೆಚ್ಚಿನ ಮಾಹಿತಿಗೆ ಸಂಪರ್ಕಿಸಿ: 99641 52999. (ಒನ್‌ಇಂಡಿಯಾ ಕನ್ನಡ)


Click it and Unblock the Notifications











