For Quick Alerts
  ALLOW NOTIFICATIONS  
  For Daily Alerts

  ಅಣ್ಣಾಬಾಂಡ್ ನಲ್ಲಿ ಪ್ರಿಯಾಮಣಿ ಲುಕ್ ಸೂಪರೋ ಸೂಪರ್

  |

  ಬಹುನಿರೀಕ್ಷಿತ ಪುನೀತ್, ಪ್ರಿಯಾಮಣಿ, ನಿಧಿ ಸುಬ್ಬಯ್ಯ ಪ್ರಮುಖ ಭೂಮಿಕೆಯ ಅಣ್ಣಾಬಾಂಡ್ ಚಿತ್ರದಲ್ಲಿ ಬಹುಭಾಷಾ ತಾರೆ ಪ್ರಿಯಾಮಣಿ ಅತ್ಯಂತ ಗ್ಲಾಮರಸ್ ಆಗಿ ಕಾಣಿಸಿಕೊಂಡಿದ್ದಾರೆ. ಚಿತ್ರದ ಈಗಾಗಲೇ ಜನಪ್ರಿಯಗೊಂಡಿರುವ 'ಬೋಣಿ ಆಗದ ಹೃದಯಾನಾ' ಹಾಡಿನಲ್ಲಿ ಪ್ರಿಯಾಮಣಿಯವರನ್ನು ಇನ್ನಷ್ಟು ಸುಂದರವಾಗಿ ಚಿತ್ರೀಕರಿಸಲಾಗಿದೆ ಎಂದು ಚಿತ್ರತಂಡದ ಮೂಲದಿಂದ ತಿಳಿದುಬಂದಿದೆ.

  ಎಲ್ಲರಿಗೂ ತಿಳಿದಿರುವಂತೆ ಪ್ರಿಯಾಮಣಿ ಅತ್ಯುತ್ತಮವಾಗಿ ಡ್ಯಾನ್ಸ್ ಮಾಡಬಲ್ಲ ನಟಿ. ರಾಮ್ ಚಿತ್ರದಲ್ಲಿ ಪುನೀತ್ ಜೊತೆ 'ಹೊಸ ಗಾನಬಜಾನ' ಹಾಡಿಗೆ ಸ್ಟೆಪ್ ಹಾಕಿದ ನಾಯಕನಟರೂ ನಾಚಿಸುವಂತದ್ದು. ಅಣ್ಣಾಬಾಂಡ್ ಚಿತ್ರದ ನೃತ್ಯ ಸಂಯೋಜಕ ಇಮ್ರಾನ್ ಸರ್ದಾರಿಯಾ ಪ್ರಕಾರ 'ಬೋಣಿ ಆಗದ ಹೃದಯಾನಾ' ಹಾಡಿಗೆ ಪ್ರಿಯಾಮಣಿ ಹಾಕಿದ ಸ್ಟೆಪ್ one of the best.

  ಈ ಹಾಡಿನ ಸ್ಟಿಲ್ಸ್ ಗಮನಿಸಿದರೆ ಪ್ರಿಯಾಮಣಿಯ ಪರಿಶ್ರಮ ಗಮನಾರ್ಹ. ಪುನೀತ್ ರಾಜಕುಮಾರ್ ಒಬ್ಬ ಅತ್ಯುತ್ತಮ ಡ್ಯಾನ್ಸರ್ ಆಗಿರುವುದರಿಂದ ಪ್ರಿಯಾಮಣಿ ಕೂಡಾ ಅಷ್ಟೇ ಉತ್ತಮವಾಗಿ ಹಾಡಿಗೆ ಸ್ಟೆಪ್ಸ್ ಹಾಕಿದ್ದಾರೆ ಎನ್ನಲಾಗಿದೆ.

  ಪ್ರಿಯಾಮಣಿ ಪ್ರಕಾರ 'ಬೋಣಿ ಆಗದ ಹೃದಯಾನಾ' ಹಾಡಿಗೆ ನಾನು ಹಾಕಿದ ಸ್ಟೆಪ್ಸ್ ಇತ್ತೀಚಿನ ದಿನಗಳಲ್ಲಿ ಬೆಸ್ಟ್. ಅಷ್ಟೇ ಅಲ್ಲದೆ ಹಾಡಿನ picturisation, ತಾಂತ್ರಿಕ ಅದ್ದೂರಿತನ, ಸಾಹಿತ್ಯದ ಬಗ್ಗೆ ಅಲ್ಲದೆ ಚಿತ್ರದ ಬಗ್ಗೆ ಬಹಳ ವಿಶ್ವಾಸವಿದೆ ಎಂದಿದ್ದಾರೆ.

  image courtesy: chitraloka

  English summary
  Multilingual actress Priyamani has reached the peak in the song Boni Aagadha Hrudayana in terms of styling, steps and expressions. Priyamani is at her glamorous best in Power Star Puneet Rajkumar's much awaited movie Anna Bond.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X