ಅಣ್ಣಾವ್ರ ಹುಟ್ಟುಹಬ್ಬದಂದು 2017ನೇ ಸಾಲಿನ ರಾಜ್ಯಪ್ರಶಸ್ತಿ ಪ್ರದಾನ: ಅಣ್ಣಾವ್ರ ನೆನೆದ ಸಿಎಂ ಬಸವರಾಜ್ ಬೊಮ್ಮಾಯಿ

2017ನೇ ಸಾಲಿನ ರಾಜ್ಯಪ್ರಶಸ್ತಿ ಪ್ರದಾನ ಸಮಾರಂಭ ಇಂದು (ಏಪ್ರಿಲ್ 24) ಡಾ.ರಾಜ್‌ಕುಮಾರ್ ಜನ್ಮದಿನದಂದು ನಡೆದಿದೆ. ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಪ್ರಶಸ್ತಿ ಪ್ರದಾನ ಮಾಡಿದ್ದಾರೆ. ಐದು ವರ್ಷಗಳ ಬಳಿಕ ಕರ್ನಾಟಕದಲ್ಲಿ ಪ್ರಶಸ್ತಿ ಪ್ರಧಾನ ಸಮಾರಂಭ ನಡೆಯುತ್ತಿದ್ದು, ಮತ್ತೆ ಚಿತ್ರರಂಗದಲ್ಲಿ ಹೊಸ ಹುರುಪು ಬಂದಿದೆ.

ಡಾ.ರಾಜ್‌ಕುಮಾರ್ ಜನ್ಮದಿಂದೇ ರಾಜ್ಯ ಪ್ರಶಸ್ತಿಯನ್ನು ನೀಡಲಾಗಿದೆ. ಕಾರಣಾಂತರಗಳಿಂದ ರಾಜ್ಯ ಪ್ರಶಸ್ತಿ ಸಮಾರಂಭ ತಡವಾಗಿತ್ತು. ಅಲ್ಲದೆ ಕೊರೊನಾ, ಲಾಕ್‌ಡೌನ್ ಅಂತ ಸಮಾರಂಭವನ್ನು ಮುಂದೂಡುತ್ತಲೇ ಬರಲಾಗಿತ್ತು. ಹೀಗಾಗಿ ಕಳೆದ 5 ವರ್ಷಗಳಿಂದ ರಾಜ್ಯ ಪ್ರಶಸ್ತಿ ಸಮಾರಂಭ ನಡೆದಿರಲಿಲ್ಲ. ಈಗ 2017ನೇ ಸಾಲಿನ ಪ್ರಶಸ್ತಿಯನ್ನು ಚಿತ್ರರಂಗದ ಗಣ್ಯರಿಗೆ ನೀಡಿ ಗೌರವಿಸಲಾಗಿದೆ. ಈ ಸಂದರ್ಭದಲ್ಲಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ವರನಟ ಡಾ.ರಾಜ್‌ಕುಮಾರ್ ಅವರ ವ್ಯಕ್ತಿತ್ವವನ್ನುನೆನಪಿಸಿಕೊಂಡರು.

2017 State Film Award Presented By Basavaraj Bommai Rajakumara Won Best Entertainment Movie

ವೈಜ್ಞಾನಿಕವಾಗಿ ರಾಜ್‌ಕುಮಾರ್‌ರನ್ನು ಅಧ್ಯಾಯ ಮಾಡಬೇಕು

"ಡಾ.ರಾಜ್‌ಕುಮಾರ್ ಜನ್ಮದಿನದ ಈ ಸಂದರ್ಭದಲ್ಲಿ 2017ರ ರಾಜ್ಯ ಪ್ರಶಸ್ತಿ ಸಮಾರಂಭ ನಡೆಯುತ್ತಿರುವುದು ಖುಷಿಕೊಟ್ಟಿದೆ. ರಾಜ್‌ಕುಮಾರ್ ಅವರ ವ್ಯಕ್ತಿತ್ವವನ್ನು ಮಾತಿನಿಂದ ಹೇಳಲು ಸಾಧ್ಯವಿಲ್ಲ. ರಾಜ್‌ಕುಮಾರ್ ಅವರ ಪ್ರತಿಯೊಂದು ಚಲನಚಿತ್ರ ವಿಭಿನ್ನವಾಗಿದೆ. ತಾನು ಛಾಪನ್ನು ಬಿಟ್ಟುಹೋಗುವುದು ಸುಲಭವಲ್ಲ ಪೌರಾಣಿಕ, ಜೇಮ್ಸ್ ಬಾಂಬ್ ಯಾವುದೇ ಪಾತ್ರವಿರಲಿ ಅದ್ಭುತವಾಗಿರುತ್ತೆ. ಇದು ಮಾತಿನಿಂದ ಹೇಳಲು ಸಾಧ್ಯವಿಲ್ಲ. ಇದನ್ನು ಸೈಂಟಿಫಿಕ್ ಆಗಿ ಸ್ಟಡಿ ಮಾಡಿಬೇಕಿದೆ." ಎಂದು ಸಿಎಂ ಬಸವರಾಜ ಬೊಮ್ಮಯಿ ಹೇಳಿದ್ದಾರೆ.

"ನಾವು ಹುಟ್ಟುವಾಗ ಇರುವ ಫೋಟೊ ನೋಡಿ.. ನಮ್ಮದೇ ಫೋಟೊ ನೋಡಿದರೆ ಮುಗ್ಧತೆ ಇರುತ್ತೆ. ವಯಸ್ಸು ಆಗುತ್ತಾ ಆಗುತ್ತಾ ಆ ಮುಗ್ಧತೆ ಬದಲಾಗುತ್ತೆ. ಮನುಷ್ಯನಲ್ಲಿ ರೋಷ, ದ್ವೇಷ ಎಲ್ಲವೂ ಇರುತ್ತೆ. ಇವೆಲ್ಲವೂ ಇರದೆ, ಬದುಕಿರುವವರೆಗೂ ಮುಗ್ಧತೆಯನ್ನು ಕಾಪಾಡಿಕೊಂಡಿದ್ದರು. ನಾವು ಹಲವು ಸಂದರ್ಭಗಳಲ್ಲಿ ಎಮೋಷನ್‌ ಅನ್ನು ಹೊರ ಹಾಕುತ್ತೇವೆ. ಅಣ್ಣಾವ್ರು ಅವರ ಎಮೋಷನ್ಸ್‌ ಅನ್ನು ಹೊರಹಾಕಲೇ ಇಲ್ಲ. ಅದರಿಂದ ಇನ್ನೊಬ್ಬರಿಗೆ ತೊಂದರೆ ಆಗಬಾರದು ಅಂತ ತೋರಿಸಿಲ್ಲ. ಇದು ನನ್ನ ವೈಯಕ್ತಿಕ ಅಭಿಪ್ರಾಯ." ಎಂದು ಸಿ ಎಂ ಬೊಮ್ಮಾಯಿ ಹೇಳಿದ್ದಾರೆ.

ರಾಜ್‌ಕುಮಾರ್‌ ಕೋಪವನ್ನೇ ಹೊರಹಾಕಿಲ್ಲ

" ವೀರಪ್ಪನ್, ರಾಜ್‌ಕುಮಾರ್ ಅವರನ್ನು ಅಪಹರಣ ಮಾಡಿದಾಗ ಭೇಟಿ ಮಾಡಿದ್ದೆ. ಸುಮ್ಮನೆ ಅವರಿಗೆ ಕೇಳಿದ್ದೆ. ಎಲ್ಲಾದರೂ ವೀರಪ್ಪನ್ ಬಗ್ಗೆ ಒಂದು ಕ್ಷಣಕ್ಕಾದರೂ ಬೈತಾರಾ ಅಂತ ಭಾವಿಸಿದ್ದೆ. ಆದರೆ, ಡಾ.ರಾಜ್‌ಕುಮಾರ್ ಎಲ್ಲೂ ಬೈದಿಲ್ಲ. ಅಂತಹ ವ್ಯಕ್ತಿತ್ವ ಅವರದ್ದು."

2017 State Film Award Presented By Basavaraj Bommai Rajakumara Won Best Entertainment Movie

"ಪರೋಪಕಾರಿ ಸಿನಿಮಾ ಶೂಟಿಂಗ್ ನಡೀತಿತ್ತು. ಆಗ ನಾನು ನೋಡಲು ಹೋಗಿದ್ದೆ. ತುಂಬಾ ಹ್ಯಾಂಡ್ಸಮ್ ಇದ್ದರು. ಮನೆಯಲ್ಲಿ ಹುಡುಗರನ್ನು ಹೋಲಿಕೆ ಮಾಡಿದರೆ, ರಾಜ್‌ಕುಮಾರ್ ಇದ್ದಂಗೆ ಇದಾಗನೆ ನೋಡು ಅಂತಾರೆ. ಇಲ್ಲಿ ಎರಡು ವಿಷಯವಿದೆ. ಒಂದು ಹುಡುಗ ಸುಂದರವಾಗಿದ್ದಾನೆ ಅನ್ನೋದು. ಇನ್ನೊಂದು ಅಮ್ಮನೇ ರಾಜ್‌ಕುಮಾರ್ ಫ್ಯಾನ್ ಆಗಿರುತ್ತಾರೆ." ಎಂದು ಸಿಎಂ ಬಸವರಾಜ್ ಬೊಮ್ಮಾಯಿ ಹೊಗಳಿದ್ದಾರೆ.

2017ರ ಸಾಲಿನ ರಾಜ್ಯ ಪ್ರಶಸ್ತಿಯನ್ನು ಪಡೆದವರ ಪಟ್ಟಿ ಇಲ್ಲಿದೆ.

ಡಾ.ರಾಜ್‌ಕುಮಾರ್ ಪ್ರಶಸ್ತಿ- ಹಿರಿಯ ನಟಿ ಲಕ್ಷ್ಮಿ
ಪುಟ್ಟಣ್ಣ ಕಣಗಾಲ್ ಪ್ರಶ್ತಿ- ಎಸ್‌.ನಾರಾಯಣ್
ವಿಷ್ಣುವರ್ಧನ್ ಪ್ರಶಸ್ತಿ- ಜಿ ಎನ್‌ ಲಕ್ಷ್ಮಿಪತಿ (ನಿರ್ಮಾಪಕ)
ಅತ್ಯುತ್ತಮ ನಟಿ- ತಾರಾ ಅನುರಾಧ ( ಸಿನಿಮಾ: ಹೆಬ್ಬೆಟ್ ರಾಮಕ್ಕ)
ಅತ್ಯುತ್ತಮ ನಟ- ವಿಶ್ರುತ್ ನಾಯ್ಕ( ಮಂಜರಿ)
ಪ್ರಥಮ ಅತ್ಯುತ್ತಮ ಚಿತ್ರ- ಶುದ್ಧಿ
ದ್ವಿತೀಯ ಅತ್ಯುತ್ತಮ ಚಿತ್ರ- ಮಾರ್ಚ್ 22
ತೃತೀಯ ಅತ್ಯುತ್ತಮ ಚಿತ್ರ- ಪಡ್ಡಾಯಿ
ವಿಶೇಷ ಸಾಮಾಜಿಕ ಕಳಕಳಿ ಚಿತ್ರ- ಹೆಬ್ಬೆಟ್ ರಾಮಕ್ಕ
ಅತ್ಯುತ್ತಮ ಜನಪ್ರಿಯ ಮನರಂಜನಾ ಚಿತ್ರ- ರಾಜಕುಮಾರ
ಅತ್ಯುತ್ತಮ ಮಕ್ಕಳ ಚಿತ್ರ- ಎಳೆಯರು ನಾವು ಗೆಳೆಯರು
ಅತ್ಯುತ್ತಮ ಪ್ರಾದೇಶಿಕ ಭಾಷಾ ಚಿತ್ರ- ಸೋಫಿಯಾ
ಅತ್ಯುತ್ತಮ ಪೋಷಕ ನಟ-ಮಂಜುನಾಥ ಹೆಗಡೆ
ಅತ್ಯುತ್ತಮ ಪೋಷಕ ನಟಿ- ರೇಖಾ
ಅತ್ಯುತ್ತಮ ಕಥೆ- ಹನುಮಂತ ಬಿ ಹಾಲಿಗೇರಿ ಹಾಗೂ ನುಗಡೋಣಿ
ಅತ್ಯುತ್ತಮ ಚಿತ್ರಕಥೆ- ವೆಂಕಟ್ ಭಾರದ್ವಾಜ್
ಅತ್ಯುತ್ತಮ ಸಂಭಾಷಣೆ- ಪ್ರೋ.ಜಿ ಎಸ್ ಸಿದ್ಧರಾಮಯ್ಯ
ಅತ್ಯುತ್ತಮ ಛಾಯಾಗ್ರಹಣ- ಸಂತೋಷ್ ರೈ ಪಾತಾಜೆ
ಅತ್ಯುತ್ತಮ ಸಂಗೀತ ನಿರ್ದೇಶಕ- ವಿ.ಹರಿಕೃಷ್ಣ
ಅತ್ಯುತ್ತಮ ಸಂಕಲನ- ಹರೀಶ್ ಕೊಮ್ಮೆ
ಅತ್ಯುತ್ತಮ ಬಾಲ ನಟ- ಮಾಸ್ಟರ್ ಕಾರ್ತಿಕ್
ಅತ್ಯುತ್ತಮ ಬಾಲ ನಟಿ- ಶಾಘ್ಲ ಸಾಲಿಗ್ರಾಮ
ಅತ್ಯುತ್ತಮ ಕಲಾ ನಿರ್ದೇಶಕ-ರವಿ ಎಸ್. ಎ
ಅತ್ಯುತ್ತಮ ಗೀತರಚನೆ- ಜೆ.ಎಂ ಪ್ರಹ್ಲಾದ್
ಅತ್ಯುತ್ತಮ ಹಿನ್ನೆಲೆ ಗಾಯಕ- ತೇಜಸ್ವಿ ಹರಿದಾಸ್
ಅತ್ಯುತ್ತಮ ಹಿನ್ನೆಲೆ ಗಾಯಕಿ- ಅಪೂರ್ವ ಶ್ರೀಧರ್
ತೀರ್ಪುಗಾರರ ವಿಶೇಷ ಪ್ರಶಸ್ತಿ- ಶ್ರೀದರ್ಶನ್ ( ಚಿತ್ರ: ಮಹಾಕಾವ್ಯ)
ಮಿತ್ರ (ಚಿತ್ರ: ರಾಗ)
ಸುರೇಶ್ ಕೆ ( ಅತ್ಯುತ್ತಮ ನಿರ್ಮಾಣ ನಿರ್ವಾಹಕ)
ಚಲನಚಿತ್ರ ಸಾಹಿತ್ಯ ಪ್ರಶಸ್ತಿ- ಗಂಗಾಧರ್ ಮೊದಲಿಯಾರ್

More from Filmibeat

English summary
2017 State Film Award Presented By Basavaraj Bommai Rajakumara Won Best Entertainment Movie. Know More.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X