ಮತ್ತೆ ಮುಂಗಾರುಮಳೆಯಲ್ಲಿ ನೆಂದ ಗಣೇಶ್
'ಮುಂಗಾರು ಮಳೆ' ಹುಡುಗ ಗಣೇಶ್ ಪತ್ನಿ ಶಿಲ್ಪಾ ಅವರು ಆರಂಭಿಸಿರುವ ಸಂಸ್ಥೆ ಗೋಲ್ಡನ್ ಮೂವೀಸ್ ಸಂಸ್ಥೆಯ ಚೊಚ್ಚಲ ಕಾಣಿಕೆ 'ಮಳೆಯಲಿ ಜೊತೆಯಲಿ'.ನಿಸರ್ಗದ ತವರಿನಂತಿರುವ ಸಕಲೇಶಪುರವನ್ನು ಮಳೆಗಾಲದಲ್ಲಿ ನೋಡಬೇಕು. ಮಳೆಯಲ್ಲಿ ಮಿಂದ ಆ ಊರಿನ ಸೌಂದರ್ಯ ಬಣ್ಣಿಸಲು ಅಸಾಧ್ಯ. ಅಂತಹ ರಮಣೀಯ ಸ್ಥಳದಲ್ಲಿ 'ಮಳೆಯಲಿ ಜೊತೆಯಲಿ' ಚಿತ್ರದ ಚಿತ್ರೀಕರಣ ನಡೆಸುತ್ತಿದ್ದಾರೆ.
ನಿರ್ದೇಶಕ ಪ್ರೀತಂ ಗುಬ್ಬಿ. ನಾಯಕ ಗಣೇಶ್ ಹಾಗೂ ನಾಯಕಿಯರಾದ ಅಂಜನಾ ಸುಖಾನಿ, ಯುವಿಕಾ ಚೌಧರಿ ಅವರ ಅಭಿನಯದಲ್ಲಿ ಚಿತ್ರದ ಕೆಲವು ಸನ್ನಿವೇಶ ಹಾಗೂ ಹಲವು ಹಾಡುಗಳು ಈ ಊರಿನಲ್ಲಿ ಚಿತ್ರೀಕರಣಗೊಂಡಿದೆ. ನಿರ್ದೇಶಕರೇ ಕಥೆ, ಚಿತ್ರಕಥೆ ಬರೆದಿರುವ ಈ ಚಿತ್ರಕ್ಕೆ ಕೃಷ್ಣ ಛಾಯಾಗ್ರಾಹಕರಾಗಿದ್ದಾರೆ.
ವಿ.ಹರಿಕೃಷ್ಣ ಸಂಗೀತ, ದೀಪು ಎಸ್ ಕುಮಾರ್ ಸಂಕಲನ, ದೇವಶೆಟ್ಟಿ ಮಹೇಶ್ ಮತ್ತು ವಿನಾಯಕರಾಮ್ ಕಲಗಾರು ಸಂಭಾಷಣೆ, ಕವಿರಾಜ್, ಜಯಂತ್ ಕಾಯ್ಕಿಣಿ ಗೀತರಚನೆ ಹಾಗೂ ಮೋಹನ್ ಕಲಾ ನಿರ್ದೇಶನವಿರುವ ಚಿತ್ರದ ತಾರಾಬಳಗದಲ್ಲಿ ಗಣೇಶ್, ಅಂಜನಾ ಸುಖಾನಿ, ಯುವಿಕಾ ಚೌಧರಿ, ಸಿಹಿಕಹಿಚಂದ್ರು, ಸಿಹಿಕಹಿಗೀತಾ, ರಂಗಾಯಣ ರಘು, ಶರಣ್, ದತ್ತಣ್ಣ ಮುಂತಾದವರಿದ್ದಾರೆ.
(ದಟ್ಸ್ ಕನ್ನಡ ಚಿತ್ರವಾರ್ತೆ)


Click it and Unblock the Notifications











