ರಮೇಶ್ ಅರವಿಂದ್ ಈಗ ಕ್ಯಾನ್ಸರ್ ಪೇಷಂಟ್

By Rajendra

ನಟ, ನಿರ್ದೇಶಕ ರಮೇಶ್ ಅರವಿಂದ್ ಈಗ ಕ್ಯಾನ್ಸರ್ ರೋಗಿ! ಇದೇನಪ್ಪಾ ಇದು ಎಂದು ವಿಷಯ ಕೇಳಿ ಶಾಕ್ ಆಗಬೇಡಿ! ಆದರೆ ಅವರು ಕ್ಯಾನ್ಸರ್ ಪೇಷಂಟ್ ಆಗಿರುವುದು ನೂರಕ್ಕೆ ನೂರರಷ್ಟು ಸತ್ಯ! ಆದರೆ ನಿಜವಾಗಿ ಅಲ್ಲ ತೆರೆಯ ಮೇಲೆ ಎಂಬುದು ನಿಮ್ಮ ಗಮನಕ್ಕಿರಲಿ!

ಕೆ ಎಸ್ ರವಿಕುಮಾರ್ ನಿರ್ದೇಶನದಲ್ಲಿ ಮೂಡಿಬರುತ್ತಿರುವ ಕಮಲಹಾಸನ್ ಮುಖ್ಯಭೂಮಿಕೆಯಲ್ಲಿರುವ 'ಮನ್‌ಮದನ್ ಅಂಬು' ಚಿತ್ರದಲ್ಲಿ ರಮೇಶ್ ಕೂಡ ಅಭಿನಯಿಸಿದ್ದಾರೆ. ಅತಿಥಿ ಪಾತ್ರದಲ್ಲಿ ನಟಿಸಿರುವ ರಮೇಶ್ ಈ ಚಿತ್ರದಲ್ಲಿ ಕ್ಯಾನ್ಸರ್ ರೋಗಿಯಾಗಿ ಕಾಣಿಸಲಿದ್ದಾರೆ.

"ಚಿತ್ರದಲ್ಲಿ ತಮ್ಮ ಪಾತ್ರ ಸಣ್ಣದಾದರೂ ಪ್ರಭಾವಶಾಲಿಯಾಗಿದೆ. ಈ ಚಿತ್ರದಲ್ಲಿ ನಾನು ವಿಶೇಷ ಗೆಟಪ್‌ನಲ್ಲಿ ಕಾಣಿಸುತ್ತೇನೆ. ಕೇವಲ ಎರಡು ಮೂರು ಸನ್ನಿವೇಶಗಳಲ್ಲಷ್ಟೇ ಕಾಣಿಸಿದರೂ ಪ್ರೇಕ್ಷಕನ ಮೇಲೆ ಈ ಚಿತ್ರ ದಟ್ಟ ಪ್ರಭಾವ ಬೀರುತ್ತದೆ" ಎಂದು ರಮೇಶ್ ಹೇಳಿದ್ದಾರೆ. ಕಮಲ್ ಜೊತೆ ರಮೇಶ್ ಅಭಿನಯಿಸುತ್ತಿರುವ ಒಂಭತ್ತನೇ ಚಿತ್ರವಿದು.

ಕನ್ನಡ ಚಿತ್ರಗಳು : ಆರಿಸಿನೋಡು ಬೀಳಿಸಿನೋಡು

'ಮನ್‌‍ಮದನ್ ಅಂಬು' ಚಿತ್ರದಲ್ಲಿ ರಮೇಶ್ ಅವರನ್ನು ಗುರುತು ಹಿಡಿಯುವುದೇ ಕಷ್ಟವಂತೆ. ರಮೇಶ್ ವಿಶೇಷ ಗೆಟಪ್‌ನಲ್ಲಿ ಇರುವುದೇ ಇದಕ್ಕೆ ಕಾರಣ. ಪೂರ್ವಭಾವಿ ಪ್ರದರ್ಶನ ನೋಡಿರುವವರು ಚಿತ್ರದಲ್ಲಿ ರಮೇಶ್ ಎಲ್ಲಿದ್ದಾರೆ ಎಂದು ಕೇಳಿದರಂತೆ. ಚಿತ್ರದಲ್ಲಿ ಬರುವ ಕ್ಯಾನ್ಸರ್ ಪೇಷಂಟ್ ತಾವೇ ಎಂದಾಗ ಅವಾಕ್ಕಾದರಂತೆ.

ಅಂದಹಾಗೆ ಈ ಚಿತ್ರದಲ್ಲಿ ಮಾಧವನ್, ತ್ರಿಷಾ ಮುಖ್ಯ ಪಾತ್ರಗಳಲ್ಲಿದ್ದಾರೆ. ಕಾಮಿಡಿ ಮತ್ತು ಪ್ರೇಮ ಕಥಾ ಹಂದರದ ಚಿತ್ರ ಇದಾಗಿದೆ. ಈಗಾಗಲೆ ತೆರೆಕಂಡಿರುವ ಈ ಚಿತ್ರದ ಬಗ್ಗೆ ಪ್ರೇಕ್ಷಕರ ತೀವ್ರ ಕುತೂಹಲ ವ್ಯಕ್ತಪಡಿಸಿದ್ದಾರೆ. ಒಟ್ಟಿನಲ್ಲಿ ಕಮಲ್ ಜೊತೆ ರಮೇಶ್ ಅರವಿಂದ್ ಮತ್ತೊಂದು ಇನ್ನಿಂಗ್ಸ್ ಆರಂಭಿಸಿದ್ದಾರೆ. [ರಮೇಶ್ ಅರವಿಂದ್]

More from Filmibeat

English summary
Kannada actor Ramesh Aravind is now cancer patient! Are you shocked! Yes he is a cancer patient on reel not in a real life. Ramesh done a cameo role in Tamil flick Manmadhan Ambu. In this film he appeared as cancer patient. The movie leads Kamal Haasan, Trisha Krishnan and Madhavan.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X