ಟ್ರೆಂಡ್ ಸೃಷ್ಟಿಸಿದ 'ಓಂ' ಚಿತ್ರಕ್ಕೆ 25 ವರ್ಷ: ಅಭಿಮಾನಿಗಳ ಸಂಭ್ರಮ

ಟ್ವಿಟ್ಟರ್‌ನಲ್ಲಿ ಟ್ರೆಂಡ್ ಶುರುವಾಗಿದೆ. ಇದು ಕನ್ನಡದ ಸಿನಿಮಾದ ಖುಷಿಯ ಹಬ್ಬದ ಟ್ರೆಂಡ್. ಕನ್ನಡ ಚಿತ್ರರಂಗದ ದಿಕ್ಕನ್ನು ಬದಲಿಸಿ ಹೊಸ ಟ್ರೆಂಡ್ ಶುರುಮಾಡಿದ 'ಓಂ' ಚಿತ್ರ ಬಿಡುಗಡೆಯಾಗಿ ಮೇ 19ಕ್ಕೆ 25 ವರ್ಷ.

Recommended Video

ಮಲ್ಟಿಪ್ಲೆಕ್ಸ್ ಗಳಿಗೆ ದೊಡ್ಡ ಶಾಕ್ ನೀಡಿದ ಪುನೀತ್ ರಾಜ್ ಕುಮಾರ್..! | Puneeth Rajkumar | Amazon Prime | OTT

ಈ ಸಂತಸದ ಆಚರಣೆಗೆ ಈಗಾಗಲೇ ಚಾಲನೆ ನೀಡಲಾಗಿದೆ. 25YrsForTrendsetterOm ಎಂಬ ಹ್ಯಾಷ್ ಟ್ಯಾಗ್ ಬಳಸಿ 25ನೇ ವರ್ಷ ತುಂಬಿದ ಗಳಿಗೆಯನ್ನು ಆಚರಿಸಲಾಗುತ್ತಿದೆ. ಅದಕ್ಕಾಗಿ ಸಿಡಿಪಿ (ಕಾಮನ್ ಡಿಸ್‌ಪ್ಲೇ ಪಿಕ್ಚರ್) ಬಿಡುಗಡೆ ಮಾಡಲಾಗಿದೆ.

ಶಿವರಾಜ್ ಕುಮಾರ್ 'ಓಂ' ಸಿನಿಮಾದಲ್ಲಿ ಸಿಗರೇಟ್ ಹಚ್ಚುವ ಮತ್ತು ಹೊಡೆದಾಟದಲ್ಲಿ ಗಾಯಗೊಂಡ ಎರಡು ಚಿತ್ರಗಳನ್ನು ಸಿಡಿಪಿಯಲ್ಲಿ ಬಳಸಿಕೊಳ್ಳಲಾಗಿದೆ. ಜತೆಗೆ ಚಿತ್ರಮಂದಿರ ತುಂಬಿದೆ ಎಂಬ ಬೋರ್ಡ್ ಇದೆ. ಅದರ ಹಿನ್ನೆಲೆಯಲ್ಲಿ ಓಂ ಚಿತ್ರದ ವಿವಿದ ದೃಶ್ಯಗಳು, ಹಾಡುಗಳ ಒಂದೊಂದು ಪದಗಳನ್ನು ಬಳಸಲಾಗಿದೆ. ಮುಂದೆ ಓದಿ...

ಟ್ರೆಂಡ್ ಸೆಟ್ಟರ್

ಟ್ರೆಂಡ್ ಸೆಟ್ಟರ್

ಶಿವರಾಜ್ ಕುಮಾರ್ ಮತ್ತು ಉಪೇಂದ್ರ ಅಭಿಮಾನಿಗಳ ಪ್ರೊಫೈಲ್ ಪಿಕ್ಚರ್‌ಗಳಲ್ಲಿ ಓಂ ಚಿತ್ರದ ಹೊಸ ವಿನ್ಯಾಸವೇ ತುಂಬಿಕೊಂಡಿದೆ. ನಟ ಪುನೀತ್ ರಾಜ್ ಕುಮಾರ್ ಕೂಡ ಈ ಸಿಡಿಪಿ ಹಂಚಿಕೊಂಡಿದ್ದು, 'ಓಂ ಸಿಲ್ವರ್ ಜ್ಯುಬಿಲಿ. 25 ವರ್ಷಗಳ ಟ್ರೆಂಡ್ ಸೆಟ್ಟರ್ ಎಂದು ಬರೆದುಕೊಂಡಿದ್ದಾರೆ.

ಅದ್ಭುತ ಸಮಾಗಮ-ಸಿನಿಮಾ

ಅದ್ಭುತ ಸಮಾಗಮ-ಸಿನಿಮಾ

ನಟ, ನಿರ್ದೇಶಕ ರಕ್ಷಿತ್ ಶೆಟ್ಟಿ ಸೆಲೆಬ್ರೇಟಿಂಗ್ ಓಂ ಎಂದು ಬರೆದುಕೊಂಡು ಸಿಡಿಪಿ ಶೇರ್ ಮಾಡಿದ್ದಾರೆ. ಸಿಡಿಪಿ ಬಿಡುಗಡೆ ಮಾಡಿರುವ ನಟ ರಮೇಶ್ ಅರವಿಂದ್, '25 ವರ್ಷದ ಟ್ರೆಂಡ್ ಸೆಟ್ಟರ್' ಸಿಡಿಪಿ ಬಿಡುಗಡೆ ಮಾಡಿರುವುದಕ್ಕೆ ಖುಷಿಯಾಗುತ್ತಿದೆ. ಶಿವಣ್ಣ, ಉಪ್ಪಿ, ಓಂ ತಂಡ ಅತ್ಯುತ್ತಮವಾಗಿದ್ದನ್ನು ನೀಡಿದ್ದಾರೆ. ಅದ್ಭುತ ಜೋಡಿ, ಅದ್ಭುತ ಸಿನಿಮಾ' ಎಂದು ಬರೆದಿದ್ದಾರೆ.

ಫೇಸ್‌ಬುಕ್ ಲೈವಲ್ಲಿ ಶಿವಣ್ಣ-ಉಪ್ಪಿ

ಫೇಸ್‌ಬುಕ್ ಲೈವಲ್ಲಿ ಶಿವಣ್ಣ-ಉಪ್ಪಿ

ಓಂ ಚಿತ್ರಕ್ಕೆ 25 ವರ್ಷ ತುಂಬಿದ ಸಂದರ್ಭದಲ್ಲಿ ಉಪೇಂದ್ರ ಮತ್ತು ಶಿವರಾಜ್ ಕುಮಾರ್ ಅಭಿಮಾನಿಗಳಿಗೆ ಖುಷಿ ನೀಡಲು ಮುಂದಾಗಿದ್ದಾರೆ. ಮೇ 19ರ ಸಂಜೆ 7.30ಕ್ಕೆ ಇಬ್ಬರೂ ಜತೆಯಾಗಿ ಫೇಸ್‌ಬುಕ್‌ನಲ್ಲಿ ಲೈವ್ ಬರಲಿದ್ದಾರೆ.

ಮೈಲುಗಲ್ಲು ಸೃಷ್ಟಿಸಿದ ಚಿತ್ರ

ಮೈಲುಗಲ್ಲು ಸೃಷ್ಟಿಸಿದ ಚಿತ್ರ

'ಈ ಲೆಜೆಂಡರಿ ಚಿತ್ರದ 25 ವರ್ಷದ ಸಂಭ್ರಮ' ಎಂದು ವಸಿಷ್ಠ ಸಿಂಹ ಹೇಳಿದ್ದಾರೆ. ಭಾರತೀಯ ಚಿತ್ರರಂಗದ ಇತಿಹಾಸದಲ್ಲಿ ಮೈಲಿಗಲ್ಲು ಸೃಷ್ಟಿಸಿದ ಚಿತ್ರ ಎಂದು ನಿರ್ದೇಶಕ ಪ್ರಶಾಂತ್ ರಾಜ್ ಹೇಳಿದ್ದಾರೆ. ವಿಶ್ವದಲ್ಲೇ ಅತಿ ಹೆಚ್ಚು ಬಾರಿ ಮರು ಬಿಡುಗಡೆ ಆದಂತಹ ಚಿತ್ರ. ಅತ್ಯುನ್ನತ ನಿರ್ದೇಶಕ ಮತ್ತು ನಟರ ಸಂಗಮ ಎಂದು ನಿರ್ದೇಶಕ ಸುನಿ ಬಣ್ಣಿಸಿದ್ದಾರೆ.

More from Filmibeat

English summary
Fans of Upendra and Shivaraj Kumar are celebrating the 25 years of Om movie release.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X