ಕ್ರೇಜಿ ಡ್ಯಾನ್ಸರ್ ಕಿಶನ್ ಜೊತೆ ರಾಗಿಣಿ ರೈನ್ ಡ್ಯಾನ್ಸ್; ಉರ್‍ಕೊಂಡವರು ಒಬ್ರ.. ಇಬ್ಬರಾ?
ಸ್ಯಾಂಡಲ್‌ವುಡ್‌ನ ಸ್ಟೈಲಿಷ್ ಡ್ಯಾನ್ಸರ್ ಕಿಶನ್ ಬೆಳಗಲಿ ಇತ್ತೀಚೆಗೆ ಸೋಶಿಯಲ್ ಮೀಡಿಯಾದಲ್ಲಿ ಸಿಕ್ಕಾಪಟ್ಟೆ ಫೇಮಸ್. ಕನ್ನಡದ ನಟಿಯರೊಂದಿಗೆ ಕ್ರೇಜಿಯಾಗಿ ರೊಮ್ಯಾಂಟಿಕ್ ಸಾಂಗ್‌ಗಳಲ್ಲಿ ಹೆಜ್ಜೆ ಹಾಕಿ ವಿಡಿಯೋಗಳನ್ನು ಅಪ್‌ಲೋಡ್ ಮಾಡುತ್ತಿದ್ದಾರೆ. ಈ ವಿಡಿಯೋಗಳು ಸೋಶಿಯಲ್ ಮೀಡಿಯಾಗಳಲ್ಲಿ ಸಿಕ್ಕಾಪಟ್ಟೆ ಟ್ರೆಂಡಿಂಗ್‌ನಲ್ಲಿವೆ.
ಹಿಂದಿಯ ಡ್ಯಾನ್ಸ್ ರಿಯಾಲಿಟಿ ಶೋಗಳಲ್ಲಿ ಕಿಶನ್ ಹೆಜ್ಜೆ ಹಾಕಿ ಮಿಂಚಿದ್ದರು. ಧಕ್ ಧಕ್ ಬೆಡಗಿ ಮಾಧುರಿ ದೀಕ್ಷಿತ್ ಜೊತೆ ಭರ್ಜರಿ ಸ್ಟೆಪ್ಸ್ ಹಾಕಿದ್ದರು. ಅಷ್ಟೇ ಅಲ್ಲದೆ ಕನ್ನಡ ಬಿಗ್‌ಬಾಸ್‌ನಲ್ಲೂ ಕಿಶನ್ ಬೆಳಗಲಿ ಭಾಗವಹಿಸಿದ್ದರು. ಇಲ್ಲಿಂದ ಕಿಶನ್ ಮಸ್ತ್ ಡ್ಯಾನ್ಸರ್ ಅನ್ನೋದು ಕನ್ನಡಿಗರ ಮನದಲ್ಲಿ ಕೂತುಬಿಟ್ಟಿದ್ದೆ.

ಇತ್ತೀಚೆಗೆ ಸೋಶಿಯಲ್ ಮೀಡಿಯಾದಲ್ಲಿ ಸಿಕ್ಕಾಪಟ್ಟೆ ಆಕ್ಟಿವ್ ಆಗಿರುವ ಕಿಶನ್ ಕನ್ನಡದ ನಟಿಯರೊಂದಿಗೆ ಹೆಜ್ಜೆ ಹಾಕಿ ಸಂಚಲನ ಸೃಷ್ಟಿಸುತ್ತಿದ್ದಾರೆ. ಈಗಾಗಲೇ ಕನ್ನಡದ ಹಲವು ನಟಿಯರು ಕಿಶನ್ ಜೊತೆ ಮಸ್ತ್ ಸ್ಟೆಪ್ಸ್ ಹಾಕಿ ಗ್ಲಾಮರಸ್ ಲುಕ್ ಕೊಟ್ಟಿದ್ದನ್ನು ನೋಡಿದ್ದೀರಿ. ಈಗ ತುಪ್ಪದ ಬೆಡಗಿ ರಾಗಿಣಿ ದ್ವಿವೇದಿ ಜೊತೆ ಕಿಶನ್ ರೈನ್ ಸಾಂಗ್‌ನಲ್ಲಿ ಕಾಣಿಸಿಕೊಂಡಿದ್ದಾರೆ.
ರಾಗಿಣಿ ದ್ವಿವೇದಿ ಜೊತೆ ಕಿಶನ್ ರೊಮ್ಯಾಂಟಿಕ್ ಮೂಡಿಗೆ ಜಾರುತ್ತಿದ್ದಂತೆ ನೆಟ್ಟಿಗರು ಅಲರ್ಟ್ ಆಗಿದ್ದಾರೆ. ರೊಮ್ಯಾಂಟಿಕ್ ಸಾಂಗ್‌ಗಳನ್ನು ರೀ ಕ್ರಿಯೇಟ್ ಮಾಡುವ ಕಿಶನ್ ಜೊತೆ ಈ ಬಾರಿ ರಾಗಿಣಿ ದ್ವಿವೇದಿ ಇನ್‌ಸ್ಟಾಗ್ರಾಂನಲ್ಲಿ ಸಂಚಲನ ಸೃಷ್ಟಿಸುತ್ತಿದೆ. ಕೆಂಪು ಬಣ್ಣದ ಮಾಡರ್ನ್ ಕಾಸ್ಟ್ಯೂಮ್‌ನಲ್ಲಿ ನಟಿ ರಾಗಿಣಿ ಕೂಡ ಕಿಶನ್ ಜೊತೆ ಹೆಜ್ಜೆ ಹಾಕಿದ್ದಾರೆ.
ಅಷ್ಟಕ್ಕೂ ಆಮಿರ್ ಖಾನ್ ಹಾಗೂ ಸೋನಾಲಿ ಬೇಂದ್ರೆ ನಟಿಸಿದ್ದ ಬಾಲಿವುಡ್ ಸಿನಿಮಾ 'ಸರ್ಫರೋಶ್' ಸಿನಿಮಾದ ಹಾಡಿಗೆ ಹೆಜ್ಜೆ ಹಾಕಿದ್ದಾರೆ. "ಜೋ ಹಾಲ್ ದಿಲ್ ಕಾ.." ಅನ್ನೋ ರೊಮ್ಯಾಂಟಿಕ್ ಹಾಡಿಗೆ ಹೆಜ್ಜೆ ಕಿಶನ್ ಹಾಗೂ ರಾಗಿಣಿ ಹೆಜ್ಜೆ ಹಾಕಿದ್ದಾರೆ. ಈ ಸಿನಿಮಾ ತೆರೆಕಂಡು ಇತ್ತೀಚೆಗೆ 25 ವರ್ಷಗಳನ್ನು ಪೂರೈಸಿದೆ. ಈ ಸಿನಿಮಾಗೆ ಟ್ರಿಬ್ಯೂಟ್ ಸಲ್ಲಿಸುವ ಸಲುವಾಗಿ ಕಿಶನ್ ಹಾಗೂ ರಾಗಿಣಿ ಈ ಹಾಡಿಗೆ ಹೆಜ್ಜೆ ಹಾಕಿದ್ದಾರೆ.
ನಟಿ ರಾಗಿಣಿಗೂ ಮುನ್ನ ಕಿಶನ್ ಜೊತೆ ಕನ್ನಡದ ಹಲವು ನಟಿಯರು ಹೆಜ್ಜೆ ಹಾಕಿದ್ದಾರೆ. ಬಿಗ್‌ಬಾಸ್ ಖ್ಯಾತಿಯ ನಮ್ರತಾ, ಚೈತ್ರಾ ಆಚಾರ್, ಧನ್ಯ ರಾಜ್‌ಕುಮಾರ್ ಜೊತೆನೂ ವಿಡಿಯೋ ಮಾಡಿದ್ದರು. ಇವರೊಂದಿಗೆ ಬಿಗ್ ಬಾಸ್ ಸೀಸನ್ 10ರ ಸ್ಪರ್ಧಿ ಕಾರ್ತಿಕ್ ಮಹೇಶ್ ಜೊತೆ ಒಂದು ಹಾಡಿನಲ್ಲಿ ಕಾಣಿಸಿಕೊಂಡಿದ್ದಾರೆ. ಈಗ ರಾಗಿಣಿ ಜೊತೆ ಹೆಜ್ಜೆ ಹಾಕಿದ್ದು, ವಿಡಿಯೋ ವೈರಲ್ ಆಗಿದೆ.
ಈ ವಿಡಿಯೋ ನೋಡಿ ನೆಟ್ಟಿಗರು ಡಿಸೈನ್ ಡಿಸೈನ್ ಆಗಿ ಕಾಮೆಂಟ್‌ಗಳನ್ನು ಮಾಡುತ್ತಿದ್ದಾರೆ. "ಅಣ್ಣ ನಿಂಗೆ ಏನ್ ಏಳ್ಬೇಕು ಅಂತ ಗೊತಾಗ್ತಿಲ್ಲ.. ನೀ ಕಲಿಯುಗದ ಶ್ರೀ ಕೃಷ್ಣ ಪರಮೇಶ್ವರ್", "ಬ್ರೋ ನಿ ಲಕ್ಕಿ ಪರ್ಸನ್ ಬಿಡು. ಒಂದ್ ತರ ಶ್ರೀಕೃಷ್ಣ ಪರಮಾತ್ಮ ಇದ್ದಂತೆ", " ಅಷ್ಟಕ್ಕೂ ಆ ರೀತಿ ನಟನೆ ಮಾಡುವುದಕ್ಕೆ ಎಲ್ಲಾ ನಿಯಂತ್ರಣದಲ್ಲಿ ಇರಬೇಕು, ಕೈಲಾಗದವರು ಇಲ್ಲಿ ಕಾಮೆಂಟ್‌ನಲ್ಲಿ ಕಿಸಿತಾರೆ" ಎಂದು ಕಾಮೆಂಟ್‌ಗಳನ್ನು ಮಾಡುತ್ತಾರೆ.


Click it and Unblock the Notifications











