ಕರಿಬಸವಯ್ಯ ನಿಧನಕ್ಕೆ ಸಿನಿತಾರೆಯರ ಅಶ್ರುತರ್ಪಣ

ಅವರ ನಟನೆಯಲ್ಲಿ ಮಾತ್ರವಲ್ಲದೇ ವ್ಯಕ್ತಿತ್ವದಲ್ಲಿ ಕೂಡ ಹಾಸ್ಯ ಹಾಸುಹೊಕ್ಕಾಗಿತ್ತು. ಅವರೊಬ್ಬ ಕಲಾವಿದ ಮಾತ್ರವಲ್ಲದೇ ಒಳ್ಳೆಯ ವ್ಯಕ್ತಿಯಾಗಿದ್ದರು" ಎಂದಿದ್ದಾರೆ ಅಂಬರೀಷ್. ಅದೇ ರೀತಿ ಹಿರಿಯ ನಟ ದೊಡ್ಡಣ್ಣ ಕೂಡ ಅವರ ಅಕಾಲಿಕ ನಿಧನಕ್ಕೆ ತೀವ್ರ ಶೋಕ ವ್ಯಕ್ತಪಡಿಸಿದ್ದಾರೆ. ಅವರದು ಅಕಾಲಿಕ ಸಾವು. ಅವರ ಮಗಳ ಸಾವಿನಿಂದ ಇನ್ನೂ ಚೇತರಿಸಿಕೊಂಡಿರಲಿಲ್ಲ" ಎಂದಿದ್ದಾರೆ.
ನಿರ್ದೆಶಕ ನಾಗಶೇಖರ್ ಹಾಗೂ ಗೋಲ್ಡನ್ ಸ್ಟಾರ್ ಗಣೇಶ್ ಕರಿಬಸವಯ್ಯ ನಿಧನಕ್ಕೆ ದಿಗ್ಭ್ರಮೆ ವ್ಯಕ್ತಪಡಿಸಿದ್ದಾರೆ. ಕಾರಣ ಅವರು ಕೇವಲ ನಟ ಮಾತ್ರವಲ್ಲ, ತುಂಬಾ ಸ್ನೇಹಜೀವಿ ಕೂಡ ಆಗಿದ್ದರು. ನಮಗೂ ಅವರಿಗೂ ಬಹಳ ಹತ್ತಿರದ ನಂಟು. ತುಂಬಾ ವರ್ಷಗಳಿಂದ ನಾವೆಲ್ಲ ಸ್ನೇಹಿತರು" ಎಂದಿದ್ದಾರೆ. (ಒನ್ ಇಂಡಿಯಾ ಕನ್ನಡ)
English summary
Actor Karibasaviah died today (03-02-2012), from accident held on 31st, Jan. 2012.


Click it and Unblock the Notifications