ಶಿವರಾಜ್ ಕುಮಾರ್ 'ಆನಂದ್'ಗೆ 34 ವರ್ಷ: ಅಭಿಮಾನಿಗಳ ಸಂಭ್ರಮ

ರಾಜವಂಶದ ಕುಡಿ ಶಿವರಾಜ್ ಕುಮಾರ್ ನಾಯಕ ನಟನಾಗಿ ಚಿತ್ರರಂಗಕ್ಕೆ ಪರಿಚಯವಾಗಿ ಇಂದಿಗೆ 34 ವರ್ಷ. ನಾಯಕರಾಗಿ ಅವರ ಚೊಚ್ಚಲ ಚಿತ್ರ 'ಆನಂದ್' 1986ರ ಜೂನ್ 19ರಂದು ತೆರೆಕಂಡಿತ್ತು.

Recommended Video

ಮಹೇಶ್ ಭಟ್ ಮತ್ತು ಸುಶಾಂತ್ ಮೇಲೆ ಹೆಚ್ಚಾಯಿತು ಅನುಮಾನ | Sushant Singh Rajput | FILMIBEAT KANNADA

ಸಿಂಗೀತಂ ಶ್ರೀನಿವಾಸ್ ನಿರ್ದೇಶನದ ಈ ಚಿತ್ರದಲ್ಲಿ ಶಿವರಾಜ್ ಕುಮಾರ್ ಮತ್ತು ಸುಧಾರಾಣಿ ಎಂಬ ಹೊಸ ತಾರೆಯರು ಉದಯಿಸಿದ್ದರು. ಸಂಗೀತಮಯ ಚಿತ್ರ 'ಆನಂದ್' 38 ವಾರಗಳ ಕಾಲ ಓಡುವ ಮೂಲಕ ಭರ್ಜರಿ ಹಿಟ್ ಆಗಿತ್ತು. ಇದರ ನಂತರ ಬಿಡುಗಡೆಯಾದ ಶಿವರಾಜ್ ಕುಮಾರ್ ಅವರ ಸಿನಿಮಾಗಳು ಹಿಟ್ ಆಗಿ ಅವರಿಗೆ 'ಹ್ಯಾಟ್ರಿಕ್ ಹೀರೋ' ಎಂಬ ಬಿರುದು ತಂದುಕೊಟ್ಟಿತ್ತು.

'ಆನಂದ್' ಚಿತ್ರ ಮತ್ತು ಅದರ ಹಾಡುಗಳು ಎಂದಿಗೂ ಎವರ್ ಗ್ರೀನ್. 'ನೀಲ ಮೇಘ...', 'ಟುವ್ವಿ ಟುವ್ವಿ', 'ಟಿಕ್ ಟಿಕ್...' ಹಾಡುಗಳು ಸಾರ್ವಕಾಲಿಕ ಹಿಟ್ ಹಾಡುಗಳ ಸಾಲಿಗೆ ಸೇರಿವೆ. ಮುಂದೆ ಓದಿ...

ಮತ್ತೊಂದು ಆನಂದ್?

ಮತ್ತೊಂದು ಆನಂದ್?

1986ರ ಫೆ. 19ರಂದು 'ಆನಂದ್' ಚಿತ್ರಕ್ಕೆ ಮುಹೂರ್ತ ನಡೆದಿತ್ತು. ಸರಿಯಾಗಿ ನಾಲ್ಕು ತಿಂಗಳ ಬಳಿಕ ಜೂನ್ 19ರಂದು ಬಿಡುಗಡೆಯಾಗಿತ್ತು. ಶಂಕರ್ ಗಣೇಶ್ ಸಂಗೀತ ನೀಡಿರುವ ಹಾಡುಗಳಿಗೆ ಚಿ. ಉದಯಶಂಕರ್ ಸಾಹಿತ್ಯ ಬರೆದಿದ್ದರು. ಇದೇ ಹೆಸರಿನ ಸಿನಿಮಾವನ್ನು ಪಿ. ವಾಸು ನಿರ್ದೇಶಿಸಲಿದ್ದು, ಶಿವರಾಜ್ ಕುಮಾರ್ ನಟಿಸಲಿದ್ದಾರೆ ಎಂಬ ಸುದ್ದಿ ಎರಡು ವರ್ಷಗಳ ಹಿಂದೆ ಹರಿದಾಡಿತ್ತು.

ಆನಂದದಿಂದ ನೋಡುವವರು

ಆನಂದದಿಂದ ನೋಡುವವರು

ಆನಂದ್ ಬಿಡುಗಡೆಯಾಗಿ 34 ವರ್ಷ ತುಂಬಿದ ಈ ಸಂದರ್ಭವನ್ನು ಶಿವರಾಜ್ ಕುಮಾರ್ ಅಭಿಮಾನಿಗಳು ಸಂಭ್ರಮಿಸುತ್ತಿದ್ದಾರೆ. 'ಅವತ್ತಿಂದ ಇವತ್ತಿನವರೆಗೂ ಅದೇ ಕ್ರೇಜ್ ಅದೇ ಹವಾ... ಮೂವತ್ತ ಮೂರು ವರ್ಷಗಳಿಂದ ಅಭಿಮಾನಿಗಳನ್ನ ಆನಂದದಿಂದ ನೋಡ್ಕೋಳ್ತಿರೋ... ಒಬ್ರೆ ಸೂಪರ್ ಸ್ಟಾರ್ ಡಾ.ಶಿವಣ್ಣಾವ್ರು' ಎಂದು ಅಭಿಮಾನಿಗಳು ಹೇಳಿದ್ದಾರೆ.

ಫ್ಯಾನಾಗಿ ಹೋಗ್ತೀರ...

ಫ್ಯಾನಾಗಿ ಹೋಗ್ತೀರ...

ಮೊದಲ ಚಿತ್ರದಲ್ಲೇ ಕರ್ನಾಟಕ ಜನಮನಗೆದ್ದು, ಅಣ್ಣಾವ್ರ ಮಗನಾದರೂ ಸಹ ಅದರ ಹಂಗಿಲ್ಲದೆ ತನ್ನದೇ ಆದ ಛಾಪು ಮೂಡಿಸಿ ಅಂದಿನ ಕಾಲದಲ್ಲೇ ಅಡ್ವಾನ್ಸ್ ಬುಕ್ಕಿಂಗ್ ಮಾಡಿಸಿಕೊಂಡು, ಹೆಣ್ಣು ಮಕ್ಕಳ ಹೃದಯ ಕದ್ದು ಗಂಡೈಕ್ಳ ಎದೆಯೊಳಗೆ ಅಚ್ಚೆ ಹಾಕಿಸಿಕೊಂಡ ನಾಟ್ಯ ಚಕ್ರವರ್ತಿ, ಕರುನಾಡ ಚಕ್ರವರ್ತಿ ಡಾ.ಶಿವರಾಜಕುಮಾರ್ ಎಂಬ ಅಪ್ಪಟ ದೇಶೀ ಪ್ರತಿಭೆ ಅಭಿನಯಿಸಿದ ಪ್ರಪ್ರಥಮ ಚಿತ್ರ ಆನಂದ್ ಗೆ 34 ವರ್ಷಗಳ ಸಂಭ್ರಮ. ಮನೇಲಿ, ಆಫೀಸಲ್ಲಿ ಫ್ರೀ ಇದ್ರೆ ಈ ಸಿನಿಮಾನ ಹಾಕೊಂಡ್ ನೋಡಿ ಮುಲಾಜಿಲ್ದೆ ಫ್ಯಾನಾಗೋಯ್ತೀರ.! ಇಡೀ ವಿಶ್ವಕ್ಕೊಬ್ರೆ ಹ್ಯಾಟ್ರಿಕ್ ಹೀರೋ ಬರೀ ಅಂದ್ರೆ ಬರೀ ಡಾ.ಶಿವರಾಜಕುಮಾರ್ ಗೆ ಜೈ ಎಂದು ಅಭಿಮಾನಿಯೊಬ್ಬರು ಹೇಳಿಇದ್ದಾರೆ.

ಅಭಿಮಾನಿಗಳ ಸಂಭ್ರಮ

ಅಭಿಮಾನಿಗಳ ಸಂಭ್ರಮ

ಕರುನಾಡ ಚಕ್ರವರ್ತಿ ಶಿವಣ್ಣ ಅಭಿನಯದ ಮೊಟ್ಟಮೊದಲ ಚಿತ್ರ 'ಆನಂದ್' ತೆರೆಕಂಡು 34 ವರ್ಷಗಳು ಪೂರ್ಣ ಎಂದು ಅನೇಕ ಅಭಿಮಾನಿಗಳು 'ಅನಂದ್' ಚಿತ್ರದ ಪೋಸ್ಟರ್‌ಗಳನ್ನು ಹಂಚಿಕೊಂಡು ಖುಷಿ ಪಡುತ್ತಿದ್ದಾರೆ.

More from Filmibeat

English summary
Shivarj Kumar and Sudharani starrer first movie Anand has completed 34 years.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X