twitter
    For Quick Alerts
    ALLOW NOTIFICATIONS  
    For Daily Alerts

    ಇದೂವರೆಗೂ 'ಕೆಜಿಎಫ್ 2' ನೋಡಿದವರೆಷ್ಟು ಮಂದಿ? ಉತ್ತರದಲ್ಲೆಷ್ಟು? ದಕ್ಷಿಣದಲ್ಲೆಷ್ಟು?

    |

    ಕೆಜಿಎಫ್.. ಕೆಜಿಎಫ್.. ಕೆಜಿಎಫ್.. ಕನ್ನಡದ ಪ್ಯಾನ್ ಇಂಡಿಯಾ ಸಿನಿಮಾವನ್ನು ಜನರು ಮುಗಿಬಿದ್ದು ನೋಡುತ್ತಿದ್ದಾರೆ. ಉತ್ತರದಿಂದ ದಕ್ಷಿಣದವರೆಗೂ 'ಕೆಜಿಎಫ್ 2' ಸಿನಿಮಾ ನೋಡಿ ಎಂಜಾಯ್ ಮಾಡುತ್ತಿದ್ದಾರೆ. ರಾಕಿ ಭಾಯ್, ಅಧೀರ, ರಮೀಕಾ ಸೇನ್ ಹಾಗೂ ರೀನಾ ಸೇರಿದಂತೆ ಪ್ರಮುಖ ಪಾತ್ರಗಳನ್ನು ನೋಡಿ ಪ್ರೇಕ್ಷಕರು ಎಂಜಾಯ್ ಮಾಡುತ್ತಿದ್ದಾರೆ.

    'ಕೆಜಿಎಫ್ 2' ಕನ್ನಡದ ಪ್ಯಾನ್ ಇಂಡಿಯಾ ಸಿನಿಮಾ ಆಗಿದ್ದರೂ, ಹಿಂದಿ, ತೆಲುಗು, ತಮಿಳು ಹಾಗೂ ಮಲಯಾಳಂ ಭಾಷೆಯಲ್ಲಿ ಜನ ಮೆಚ್ಚುಗೆ ಪಡೆದುಕೊಂಡಿದೆ. ಸಿನಿಮಾ ಬಿಡುಗಡೆಯಾಗಿ 25 ದಿನಗಳಾಗಿದ್ದರೂ, 'ಕೆಜಿಎಫ್ 2' ನೋಡುವವರ ಸಂಖ್ಯೆ ಮಾತ್ರ ಕಡಿಮೆಯಾಗಿಲ್ಲ. ಬಾಕ್ಸಾಫೀಸ್‌ನಲ್ಲಿ ಸಾವಿರ ಕೋಟಿ ದಾಟಿದ ಸಿನಿಮಾ ಕಲೆಕ್ಷನ್ ಬಗ್ಗೆ ಇಡೀ ವಿಶ್ವವೇ ಬೆರಗುಗಣ್ಣಿನಿಂದ ನೋಡಲು ಆರಂಭಿಸಿದೆ.

    25ನೇ ದಿನದ ಬಳಿಕ ಮತ್ತೆ ಚಿಗುರಿದ 'ಕೆಜಿಎಫ್ 2' ಕಲೆಕ್ಷನ್ : 26ನೇ ದಿನವೂ ಭರ್ಜರಿ ಗಳಿಕೆ!25ನೇ ದಿನದ ಬಳಿಕ ಮತ್ತೆ ಚಿಗುರಿದ 'ಕೆಜಿಎಫ್ 2' ಕಲೆಕ್ಷನ್ : 26ನೇ ದಿನವೂ ಭರ್ಜರಿ ಗಳಿಕೆ!

    ಕನ್ನಡದ ಪ್ಯಾನ್ ಇಂಡಿಯಾ ಸಿನಿಮಾ ಬಾಕ್ಸಾಫೀಸ್‌ನಲ್ಲಿ ಇಷ್ಟೊಂದು ಕಲೆಕ್ಷನ್ ಮಾಡಲು ಸಾಧ್ಯವಾಗಿದ್ದು ಹೇಗೆ? ಭಾರತದಲ್ಲಿ 'ಕೆಜಿಎಫ್ 2' ಸಿನಿಮಾದ ಕಲೆಕ್ಷನ್ ಲೆಕ್ಕಾಚಾರವೇನು? ಗಲ್ಲಾಪೆಟ್ಟಿಗೆಯಲ್ಲಿ ಭಾರತದ ಗಳಿಕೆ 1000 ಕೋಟಿ ಸಮೀಪಿಸಲು ಎಷ್ಟು ಮಂದಿ ಸಿನಿಮಾ ನೋಡಿರಬಹುದು? ಎಂದು ಅಂದಾಜು ಹಾಕಲಾಗಿದೆ. ಈ ವೇಳೆ ಭಾರತದಲ್ಲಿ ಉತ್ತರ ಹಾಗೂ ದಕ್ಷಿಣದಲ್ಲಿ ಇದೂವರೆಗೂ ಎಷ್ಟು ಮಂದಿ ಸಿನಿಮಾ ನೋಡಿದ್ದಾರೆ ಎನ್ನುವ ಲೆಕ್ಕವೊಂದು ಹೊರ ಬಿದ್ದಿದೆ.

     'ಕೆಜಿಎಫ್ 2' ತಂಡದಿಂದ ಮತ್ತೊಂದು ಮೈಲಿಗಲ್ಲು

    'ಕೆಜಿಎಫ್ 2' ತಂಡದಿಂದ ಮತ್ತೊಂದು ಮೈಲಿಗಲ್ಲು

    ಕೋವಿಡ್ ಬಳಿಕ ತಣ್ಣಗಾಗಿದ್ದ ಬಾಕ್ಸಾಫೀಸ್‌ನಲ್ಲಿ RRR, 'ಕೆಜಿಎಫ್ 2' ಸಿನಿಮಾ ಮತ್ತೆ ಹಣದ ಸದ್ದು ಕೇಳುವಂತೆ ಮಾಡಿದೆ. ಯಶ್ ಹಾಗೂ ಪ್ರಶಾಂತ್ ನೀಲ್ ಕಾಂಬಿನೇಷನ್ ಮತ್ತೆ ಜಾದು ಮಾಡಿದೆ. ಕ್ರೈಂ-ಡ್ರಾಮ ಸಿನಿಮಾವನ್ನು ಪ್ರೇಕ್ಷಕರು ಹೊಗಳಿಕೊಂಡಾಡಿದ್ದಾರೆ. ಸಾವಿರ ಕೋಟಿಯ ಗಡಿ ಸಮೀಪಿಸಿದ 'ಕೆಜಿಎಫ್ 2' ಸಿನಿಮಾದ ಗಳಿಕೆ ವಿಚಾರದಲ್ಲಿ ಹೊಸ ಲೆಕ್ಕವೊಂದು ಹೊರಬಿದ್ದಿದೆ. ಸಿನಿಮಾದ ಕಲೆಕ್ಷನ್ ಸಾವಿರದ ಗಡಿ ಸಮೀಪಿಸಲು ಭಾರತದಾದ್ಯಂತ ಸುಮಾರು 5 ಕೋಟಿಗೂ ಅಧಿಕ ಮಂದಿ ಸಿನಿಮಾ ವೀಕ್ಷಿಸಿದ್ದಾರೆ.

     ಸಿನಿಮಾ ನೋಡಿದವರು ಎಷ್ಟು ಮಂದಿ?

    ಸಿನಿಮಾ ನೋಡಿದವರು ಎಷ್ಟು ಮಂದಿ?

    'ಕೆಜಿಎಫ್ 2' ಸಿನಿಮಾ ಬಿಡುಗಡೆಯಾಗಿ ಇಂದಿಗೆ 27 ದಿನಗಳಾಗಿವೆ. ಸಿನಿಮಾ ಬಿಡುಗಡೆಯಾದಲ್ಲಿಂದ ಇಲ್ಲಿವರೆಗೂ ಭಾರತದಾದ್ಯಂತ ಇದೂವರೆಗೂ ಸುಮಾರು 5.05 ಕೋಟಿ ಮಂದಿ ಸಿನಿಮಾ ನೋಡಿದ್ದಾರೆ. ದಕ್ಷಿಣದ ಸಿನಿಮಾಗಳಿಗೆ ಶೇ.10 ರಿಂದ 15ರಷ್ಟು ಮಾತ್ರ ಆಕ್ಯೂಪೆನ್ಸಿ ಇರುತ್ತಿತ್ತು. ಆದ್ರೀಗ ಕೇವಲ ಉತ್ತರ ಭಾರತದಲ್ಲಿಯೇ ಸುಮಾರು 2.35 ಕೋಟಿ ಮಂದಿ ಸಿನಿಮಾ ನೋಡಿದ್ದಾರೆ. ಅದೇ ದಕ್ಷಿಣ ಭಾರತದಲ್ಲಿ 2.70 ಕೋಟಿ ಮಂದಿ ಸಿನಿಮಾ ವೀಕ್ಷಿಸಿದ್ದಾರೆ. ಇದು ದಕ್ಷಿಣ ಭಾರತದ ಮತ್ತೊಂದು ಸಿನಿಮಾದ ಸಾಧನೆ.

     4 ಭಾಷೆಗಳಲ್ಲಿ ಸಿನಿಮಾ ನೋಡಿದವರೆಷ್ಟು?

    4 ಭಾಷೆಗಳಲ್ಲಿ ಸಿನಿಮಾ ನೋಡಿದವರೆಷ್ಟು?

    ದಕ್ಷಿಣ ಭಾರತದ ಐದು ರಾಜ್ಯಗಳಲ್ಲಿ ಸಿನಿಮಾ ನೋಡಿದವರ ಸಂಖ್ಯೆ ದೊಡ್ಡದಿದೆ. ಆಂಧ್ರ ಹಾಗೂ ತೆಲಂಗಾಣದಲ್ಲಿ ಸುಮಾರು 85 ಲಕ್ಷ ಮಂದಿ 'ಕೆಜಿಎಫ್ 2' ಸಿನಿಮಾ ನೋಡಿದ್ದಾರೆ. ಕರ್ನಾಟಕ ಹಾಗೂ ತಮಿಳುನಾಡು ಎರಡೂ ರಾಜ್ಯಗಳಲ್ಲಿ ಸುಮಾರು 70 ಲಕ್ಷ ಮಂದಿ ಸಿನಿಮಾ ನೋಡಿದ್ದಾರೆ. ಕೇರಳದಲ್ಲಿ 45 ಲಕ್ಷ ಮಂದಿ ಸಿನಿಮಾ ವೀಕ್ಷಣೆ ಮಾಡಿದ್ದಾರೆ.

    ಶಿವಮೊಗ್ಗದ ಸಹ್ಯಾದ್ರಿ ಕಾಲೇಜಿನಲ್ಲಿ ಅತಿಥಿಯಾಗಿ ಹೋಗಿದ್ದ ಯಶ್: ಆ ದಿನ ನೆನೆದ ಹಳೇ ವಿದ್ಯಾರ್ಥಿ!ಶಿವಮೊಗ್ಗದ ಸಹ್ಯಾದ್ರಿ ಕಾಲೇಜಿನಲ್ಲಿ ಅತಿಥಿಯಾಗಿ ಹೋಗಿದ್ದ ಯಶ್: ಆ ದಿನ ನೆನೆದ ಹಳೇ ವಿದ್ಯಾರ್ಥಿ!

     ಯಾವ್ಯಾವ ಸಿನಿಮಾಗೆ ಎಷ್ಟೆಷ್ಟು ಆಡಿಯನ್ಸ್

    ಯಾವ್ಯಾವ ಸಿನಿಮಾಗೆ ಎಷ್ಟೆಷ್ಟು ಆಡಿಯನ್ಸ್

    ಬಾಲಿವುಡ್ ಸಿನಿಮಾ ವೆಬ್ ಸೈಟ್ ಪಿಂಕ್ ವಿಲ್ಲಾ ಪ್ರಕಾರ, ಕಳೆದ ಎರಡು ದಶಕಗಳಲ್ಲಿ ಅತೀ ಹೆಚ್ಚು ಮಂದಿ ಸಿನಿಮಾ ವೀಕ್ಷಿಸಿದ ಲೆಕ್ಕಾಚಾರ ನೀಡಲಾಗಿದೆ. ಇದರ ಪ್ರಕಾರ, 'ಬಾಹುಬಲಿ 2' ಮೊದಲ ಸ್ಥಾನದಲ್ಲಿದೆ. 'ಗದರ್' ಎರಡನೇ ಸ್ಥಾನದಲ್ಲಿದೆ. 'ಕೆಜಿಎಫ್ 2' ಮೂರನೇ ಸ್ಥಾನದಲ್ಲಿದೆ.ದಶಕಗಳಲ್ಲಿ ಅತೀ ಹೆಚ್ಚು ಮಂದಿ ವೀಕ್ಷಿಸಿದ ಸಿನಿಮಾಗಳು

    'ಬಾಹುಬಲಿ 2' - 10.80 ಕೋಟಿ
    'ಗದರ್' - 8-9 ಕೋಟಿ
    'ಕೆಜಿಎಫ್ 2' - 5.05 ಕೋಟಿ*
    'ಬಾಹುಬಲಿ' - 4.90 ಕೋಟಿ
    'RRR' - 4.40 ಕೋಟಿ

    English summary
    5 Crore People Watched Yash Starrer KGF 2 Movie Across India. Know More.
    Thursday, May 12, 2022, 8:43
    IIFA

    Kannada Photos

    Go to : More Photos
    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X
    X