ದರ್ಶನ್ ಹುಟ್ಟುಹಬ್ಬಕ್ಕೆ 50 ದಿನ ಬಾಕಿ: ಡಿ ಬಾಸ್ ಪರ್ವ.. ಸುಲ್ತಾನ್ ಸಂಭ್ರಮ

ಸೂಪರ್‌ಸ್ಟಾರ್‌ಗಳ ಹುಟ್ಟುಹಬ್ಬವನ್ನು ಅಭಿಮಾನಿಗಳು ತಮ್ಮನೇ ಹಬ್ಬ ಎನ್ನುವಂತೆ ಆಚರಣೆ ಮಾಡುವುದು ಕಾಮನ್. ಅಭಿಮಾನಿಗಳು ತಮ್ಮ ನೆಚ್ಚಿನ ನಟನ ಹುಟ್ಟುಹಬ್ಬಕ್ಕೆ ಒಂದು ತಿಂಗಳು ಮೊದಲಿನಿಂದ ಸ್ಕೆಚ್ ಹಾಕುತ್ತಾರೆ. ಮಧ್ಯರಾತ್ರಿಯಿಂದಲೇ ದರ್ಶನ್ ಮನೆಯ ಮುಂದೆ ಜಾಮಾಯಿಸುತ್ತಾರೆ. ದರ್ಶನ್ ನೋಡಲು ತುದಿಗಾಲಲ್ಲಿ ನಿಂತಿರುತ್ತಾರೆ. ರಾಜ್ಯ ಮೂಲೆ ಮೂಲೆಯಿಂದ ಬಂದು ರಾಬರ್ಟ್ ಮನೆ ಮುಂದೆ ಜೈ ಕಾರ ಹಾಕುತ್ತಾರೆ.

ಹೂವಿನ ಹಾರ, ಮಾರುದ್ದದ ಕೇಕ್ ತಂದು ತಮ್ಮದೇ ಬರ್ತ್‌ಡೇ ಎನ್ನುವಂತೆ ಸಂಭ್ರಮಿಸುತ್ತಾರೆ. ಇವೆಲ್ಲವೂ ದರ್ಶನ್ ಹುಟ್ಟುಹಬ್ಬದ ದಿನದ ಸಂಭ್ರಮ, ಆದರೆ ದರ್ಶನ್ ಅಭಿಮಾನಿಗಳು ಸೋಶಿಯಲ್ ಮೀಡಿಯಾದಲ್ಲಿ ಮೂರು-ನಾಲ್ಕು ತಿಂಗಳಿಗೂ ಮುನ್ನವೇ ಸೆಲೆಬ್ರೆಷನ್ ಶುರು ಮಾಡಿರುತ್ತಾರೆ. ಡಿ ಬಾಸ್ ಬರ್ತ್‌ಡೇಗಂತಲೇ ವಿಶೇಷವಾದ ಡಿ ಪಿ ರಿಲೀಸ್ ಮಾಡುತ್ತಾರೆ. ಪ್ರತಿ ವರ್ಷದಂತೆ ಈ ವರ್ಷ ಕೂಡ ಸ್ಪೆಷಲ್ ಡಿಪಿ ರಿಲೀಸ್ ಮಾಡಿದ್ದಾರೆ.

ಬಾಸ್ ಪರ್ವ.. ಸುಲ್ತಾನ್ ಸಂಭ್ರಮ ಶುರು

ಬಾಸ್ ಪರ್ವ.. ಸುಲ್ತಾನ್ ಸಂಭ್ರಮ ಶುರು

ಫೆಬ್ರವರಿ 16, ಚಾಲೆಂಜಿಂಗ್ ಸ್ಟಾರ್ ದರ್ಶನ್ 45ನೇ ಹುಟ್ಟುಹಬ್ಬವನ್ನು ಆಚರಿಸಿಕೊಳ್ಳುತ್ತಿದ್ದಾರೆ. ದರ್ಶನ್ ಹುಟ್ಟುಹಬ್ಬಕ್ಕೆ ಇನ್ನೂ 50 ದಿನಗಳು ಬಾಕಿ ಉಳಿದಿವೆ. ಆಗಲೇ ಅಭಿಮಾನಿಗಳ ಸಂಭ್ರಮ ಅದ್ಧೂರಿಯಾಗಿಯೇ ಶುರುವಾಗಿದೆ. ಸೋಶಿಯಲ್ ಮೀಡಿಯಾದಲ್ಲಿ ಡಿ ಬಾಸ್ ಅಭಿಮಾನಿಗಳು ಕಾಮನ್ ಡಿಪಿಯನ್ನು ಬಿಡುಗಡೆ ಮಾಡಿದ್ದು, 'ಬಾಸ್ ಪರ್ವ.. ಸುಲ್ತಾನ್ ಸಂಭ್ರಮ' ಅಂತ ಅಭಿಯಾನ ಶುರುಮಾಡಿದ್ದಾರೆ. ಇದೇ ಡಿಪಿ ಈಗ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದೆ.

2 ವರ್ಷಗಳಿಂದ ಹುಟ್ಟುಹಬ್ಬ ಆಚರಣೆ ಇಲ್ಲ

ದರ್ಶನ್ ಫ್ಯಾನ್ಸ್‌ ಮನೆಯಲ್ಲಿ ಹಬ್ಬ ಹರಿದಿನಗಳನ್ನು ಆಚರಣೆ ಮಾಡುತ್ತಾರೋ ಇಲ್ಲವೋ ಗೊತ್ತಿಲ್ಲ. ಆದರೆ, ದರ್ಶನ್ ಹುಟ್ಟುಹಬ್ಬವನ್ನು ಮಾತ್ರ ಮಿಸ್ ಮಾಡುವುದಿಲ್ಲ. ಕಳೆದರಡು ವರ್ಷಗಳಿಂದ ಕೊರೊನಾ ಹಾವಳಿ ಹಿನ್ನೆಲೆಯಲ್ಲಿ ದರ್ಶನ್ ಹುಟ್ಟುಹಬ್ಬವನ್ನೇ ಆಚರಿಸಿ ಕೊಂಡಿಲ್ಲ. ಹೀಗಾಗಿ ಈ ಬಾರಿಯಾದರೂ, ಬರ್ತ್‌ಡೇಯನ್ನು ಆಚರಿಸಿಕೊಳ್ಳಬಹುದು ಎನ್ನುವ ನಿರೀಕ್ಷೆಯಲ್ಲಿ ಅಭಿಮಾನಿಗಳಿದ್ದಾರೆ. ಈ ಬಾರಿ ಕೂಡ ಕೊರೊನಾ ಮೂರನೇ ಅಲೆ ಶುರುವಾದರೆ, ಬರ್ತ್‌ಡೇ ಸಂಭ್ರಮಕ್ಕೆ ಬ್ರೇಕ್ ಬೀಳಬಹುದು.

 ಕ್ರಾಂತಿ ಚಿತ್ರದಿಂದ ಫ್ಯಾನ್ಸ್‌ಗೆ ಗಿಫ್ಟ್

ಕ್ರಾಂತಿ ಚಿತ್ರದಿಂದ ಫ್ಯಾನ್ಸ್‌ಗೆ ಗಿಫ್ಟ್

ಕೊರೊನಾದಿಂದಾಗಿ ದರ್ಶನ್ ಅಭಿಮಾನಿಗಳು ತಮ್ಮ ನೆಚ್ಚಿನ ನಟನನ್ನು ನೋಡಲು ಸಾಧ್ಯವಾಗುತ್ತಿಲ್ಲ. ವರ್ಷಕ್ಕೊಮ್ಮೆ ಹುಟ್ಟುಹಬ್ಬಕ್ಕಾದರೂ ಅಭಿಮಾನಿಗಳನ್ನು ಭೇಟಿ ಮಾಡುತ್ತಿದ್ದರು. ಆದರೆ, ಕಳೆದರಡು ವರ್ಷಗಳಿಂದ ಅದು ಸಾದ್ಯವಾಗದ ಹಿನ್ನೆಲೆ ನಿರಾಶರಾಗಿದ್ದಾರೆ. ಹೀಗಾಗಿ ದರ್ಶನ್ ನಟಿಸುತ್ತಿರುವ 'ಕ್ರಾಂತಿ' ಚಿತ್ರತಂಡದಿಂದ ಟೀಸರ್, ಟ್ರೈಲರ್ ಇಲ್ಲವೇ ಮೋಷನ್ ಪೋಸ್ಟರ್ ಅನ್ನುಬಿಡುಗಡೆ ಮಾಡಬಹುದು ಎಂಬ ನಿರೀಕ್ಷೆಯಲ್ಲಿದ್ದಾರೆ. ಯಾಕಂದ್ರೆ,ಇಲ್ಲಿವರೆಗೂ ಒಂದೇ ಒಂದು ಪೋಸ್ಟರ್ ರಿಲೀಸ್ ಆಗಿದ್ದು ಬಿಟ್ಟರೆ, ಟೀಸರ್, ಟ್ರೈಲರ್ ಬಂದಿಲ್ಲ.

ಹುಟ್ಟುಹಬ್ಬಕ್ಕೆ ಹೊಸ ಸಿನಿಮಾ ಘೋಷಣೆ

ಹುಟ್ಟುಹಬ್ಬಕ್ಕೆ ಹೊಸ ಸಿನಿಮಾ ಘೋಷಣೆ

ಡಿ ಬಾಸ್ ಬರ್ತ್‌ಡೇ ವೇಳೆ ಅಭಿಮಾನಿಗಳು ಅದ್ದೂರಿ ಸಂಭ್ರಮದ ಜೊತೆ ನೆಚ್ಚಿನ ನಟನ ಹೊಸ ಸಿನಿಮಾ ಘೋಷಣೆಯ ನಿರೀಕ್ಷೆಯಲ್ಲಿರುತ್ತಾರೆ. ದರ್ಶನ್ ಕಾಲ್ ಶೀಟ್ ಪಡೆದ ನಿರ್ಮಾಪಕರು ಕೂಡ ಅದೇ ದಿನ ದರ್ಶನ್‌ಗೆ ಶುಭ ಕೋರಿ ಜಾಹೀರಾತುಗಳನ್ನು ನೀಡುತ್ತಾರೆ. ಈ ಎಲ್ಲಾ ಸಂಭ್ರಮಕ್ಕೆ ಇನ್ನೂ 50 ದಿನಗಳು ಬಾಕಿ ಉಳಿದಿವೆ. 2022 ಫೆಬ್ರವರಿ 16 ರಂದು ಡಿ ಬಾಸ್ ಪರ್ವ.. ಸುಲ್ತಾನ್ ಸಂಭ್ರಮ ಎರಡೂ ಅದ್ಧೂರಿಯಾಗಿ ನಡೆಯಲಿದೆ.

More from Filmibeat

English summary
50 days for Kranti Actor Darshan birthday advanced special DP released. On February 16th Challenging star Darshan celebrating 45th Birthday.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X