»   » 'ಎಳೆಯರು ನಾವು ಗೆಳೆಯರು' ಚಿತ್ರತಂಡದಿಂದ ಶಾಲಾ ಮಕ್ಕಳಿಗೆ ಬಿಗ್ ಆಫರ್

'ಎಳೆಯರು ನಾವು ಗೆಳೆಯರು' ಚಿತ್ರತಂಡದಿಂದ ಶಾಲಾ ಮಕ್ಕಳಿಗೆ ಬಿಗ್ ಆಫರ್

Posted By:
Subscribe to Filmibeat Kannada

'ಡ್ರಾಮಾ ಜೂನಿಯರ್ಸ್' ಖ್ಯಾತಿಯ ಪುಟಾಣಿ ಮಕ್ಕಳ ಅಭಿನಯದ 'ಎಳೆಯರು ನಾವು ಗೆಳೆಯರು' ಚಿತ್ರ ಜೂನ್ 2 ರಂದು ರಾಜ್ಯಾದ್ಯಂತ ತೆರೆಕಂಡಿದ್ದು, ಉತ್ತಮ ಪ್ರದರ್ಶನ ಕಾಣುತ್ತಿದೆ. ವಿಕ್ರಮ್ ಸೂರಿ ನಿರ್ದೇಶನ ಈ ಚಿತ್ರ ನೋಡಲು ಈಗ ಚಿತ್ರತಂಡ ಶಾಲಾ-ಕಾಲೇಜು ವಿದ್ಯಾರ್ಥಿಗಳಿಗೆ ಟಿಕೆಟ್ ದರದಲ್ಲಿ 50% ರಿಯಾಯ್ತಿ ನೀಡಿದೆ.['ಎಳೆಯರ' ಜೊತೆ 'ಗೆಳೆಯರ' ಸಿನಿಮಾ ನೋಡಿದ ಕಿಚ್ಚ ಸುದೀಪ್]

ಅಂದಹಾಗೆ ಶಾಲಾ-ಕಾಲೇಜು ವಿದ್ಯಾರ್ಥಿಗಳು 'ಎಳೆಯರು ನಾವು ಗೆಳೆಯರು' ಸಿನಿಮಾ ನೋಡಲು ಟಿಕೆಟ್ ದರದಲ್ಲಿ 50% ರಿಯಾಯ್ತಿ ಇರುವುದು ಈ ಸೋಮವಾರದಿಂದ-ಗುರುವಾರದವರೆಗೆ(ಜೂನ್ 5- ಜೂನ್ 8) ಮಾತ್ರ. ಆದರೆ ಈ ಆಫರ್ ಮಲ್ಟಿಪ್ಲೆಕ್ಸ್ ಚಿತ್ರಮಂದಿರಗಳಿಗೆ ಅನ್ವಯಿಸುವುದಿಲ್ಲ. ಈ ಚಿತ್ರ ನೋಡಲು ಬಯಸುವ ಶಾಲಾ-ಕಾಲೇಜು ಮಕ್ಕಳು ಟಿಕೆಟ್ ದರದಲ್ಲಿ 50% ಡಿಸ್ಕೌಂಟ್ ಪಡೆಯಲು ಚಿತ್ರಮಂದಿರದಲ್ಲಿ ತಮ್ಮ ಐಡಿ ಕಾರ್ಡ್ ಅನ್ನು ಕಡ್ಡಾಯವಾಗಿ ತೋರಿಸಬೇಕಿದೆ.

50 percent discount in ticket price to school students to watch 'Eleyaru Naavu Geleyaru' film

'ಎಳೆಯರು ನಾವು ಗೆಳೆಯರು' ಚಿತ್ರನೋಡಿದ ಹಲವರು ಶಾಲಾ-ಕಾಲೇಜು ವಿದ್ಯಾರ್ಥಿಗಳು ಈ ಚಿತ್ರವನ್ನು ನೋಡಬೇಕು. ಅಷ್ಟೊಂದು ಅತ್ಯುತ್ತಮವಾಗಿ ಉತ್ತಮ ಸಂದೇಶದೊಂದಿಗೆ ಚಿತ್ರ ಮೂಡಿಬಂದಿದೆ. ಆದ್ದರಿಂದ ಶಾಲಾ ಮಕ್ಕಳು ಚಿತ್ರ ವೀಕ್ಷಿಸಲು ಟಿಕೆಟ್ ದರದಲ್ಲಿ ರಿಯಾಯ್ತಿ ನೀಡಿ ಎಂದು ಕೇಳಿಕೊಂಡ ಹಿನ್ನೆಲೆಯಲ್ಲಿ ಚಿತ್ರತಂಡ ಈ ನಿರ್ಧಾರ ಕೈಗೊಂಡಿದೆ.

ಚಿತ್ರಕ್ಕೆ ಕಥೆ ಬರೆದು ನಾಗರಾಜ್ ಗೋಪಾಲ್ ರವರು ನಿರ್ಮಾಣ ಮಾಡಿರುವ ಈ ಚಿತ್ರಕ್ಕೆ ಅನೂಪ್ ಸೀಳಿನ್ ಸಂಗೀತ ಸಂಯೋಜನೆ ಮಾಡಿದ್ದಾರೆ. ಚಿತ್ರ ವಿರ್ಮಶಕರಿಂದಲೂ ಉತ್ತಮ ಪ್ರಶಂಸೆ ಪಡೆದಿದ್ದು, ಚಿತ್ರದಲ್ಲಿಯ ಅಚಿಂತ್ಯ, ನಿಹಾಲ್,ಅಮೋಘ್, ಮಹೇಂದ್ರ, ಅಭಿಷೇಕ್, ತುಷಾರ್, ಸೂರಜ್, ಪುಟ್ಟರಾಜು, ತೇಜಸ್ವಿನಿ ಮತ್ತು ಇತರೆ ಮಕ್ಕಳು ಅಭಿನಯಕ್ಕೆ ವಿಮರ್ಶಕರು ಮನಸೋತಿದ್ದಾರೆ.[ಎಳೆಯ ಗೆಳೆಯರ ಸಮಾಜ ಕಳಕಳಿಗೆ ಮನಸೋತ ವಿಮರ್ಶಕರು ಏನಂದ್ರು ನೋಡಿ..]

English summary
Fifty percent discount in ticket price to school students to watch 'Eleyaru Naavu Geleyaru' Kannada Movie. This Offer only four days From Today in theaters except Multiplex.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada