»   » 'ಎಳೆಯರ' ಜೊತೆ 'ಗೆಳೆಯರ' ಸಿನಿಮಾ ನೋಡಿದ ಕಿಚ್ಚ ಸುದೀಪ್

'ಎಳೆಯರ' ಜೊತೆ 'ಗೆಳೆಯರ' ಸಿನಿಮಾ ನೋಡಿದ ಕಿಚ್ಚ ಸುದೀಪ್

Posted By:
Subscribe to Filmibeat Kannada

'ಡ್ರಾಮಾ ಜೂನಿಯರ್ಸ್' ಖ್ಯಾತಿಯ ಮಕ್ಕಳು ಅಭಿನಯದ 'ಎಳೆಯರು ನಾವು ಗೆಳೆಯರು' ಚಿತ್ರ ಇದೇ ವಾರ ರಾಜ್ಯಾದ್ಯಂತ ಬಿಡುಗಡೆಯಾಗುತ್ತಿದೆ. ಸಿನಿಮಾ ಬಿಡುಗಡೆಗೂ ಮುಂಚೆಯೇ ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್ ಎಳೆಯರ ಅಭಿನಯ ನೋಡಿ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

ಇತ್ತೀಚೆಗಷ್ಟೇ ಸುದೀಪ್ ಗಾಗಿ 'ಎಳೆಯರು ನಾವು ಗೆಳೆಯರು' ಚಿತ್ರದ ಪ್ರೀಮಿಯರ್ ಶೋ ಏರ್ಪಡಿಸಲಾಗಿತ್ತು. ಈ ವೇಳೆ 'ಡ್ರಾಮಾ ಜೂನಿಯರ್ಸ್' ಮಕ್ಕಳ ಜೊತೆ ಕೂತು ಸಿನಿಮಾ ನೋಡಿದ ಕಿಚ್ಚ ಎಂಜಾಯ್ ಮಾಡಿದ್ದಾರೆ.[ಜೂನ್ 2ಕ್ಕೆ 'ಡ್ರಾಮಾ ಜ್ಯೂನಿಯರ್ಸ್' ಮಕ್ಕಳ ಚಿತ್ರ ತೆರೆಗೆ]

Actor Kiccha Sudeep Watch Eleyaru Naavu Geleyaru

ಅಂದ್ಹಾಗೆ, 'ಎಳೆಯರು ನಾವು ಗೆಳೆಯರು' ಸಿನಿಮಾ ಜೀ ಕನ್ನಡ ವಾಹಿನಿಯಲ್ಲಿ ಪ್ರಸಾರವಾದ 'ಡ್ರಾಮಾ ಜ್ಯೂನಿಯರ್ಸ್' ಪುಟಾಣಿಗಳು ಅಭಿನಯಿಸಿರುವ ಚೊಚ್ಚಲ ಚಿತ್ರ. ಈ ಚಿತ್ರಕ್ಕೆ ವಿಕ್ರಮ್ ಸೂರಿ ಚಿತ್ರಕ್ಕೆ ಆಕ್ಷನ್ ಕಟ್ ಹೇಳಿದ್ದು, ನಾಗರಾಜ್ ಗೋಪಾಲ್ ಕಥೆ ಬರೆದು ಜೊತೆಗೆ ನಿರ್ಮಾಣ ಕೂಡ ಮಾಡಿದ್ದಾರೆ.[ಕಿರುತೆರೆಯಿಂದ ಬೆಳ್ಳಿತೆರೆಗೆ ಜಿಗಿದ 'ಡ್ರಾಮಾ ಜ್ಯೂನಿಯರ್ಸ್']

Actor Kiccha Sudeep Watch Eleyaru Naavu Geleyaru

ಎಸ್.ನಾರಾಯಣ್ ನಿರ್ದೇಶನದ 'ಮನಸು ಮಲ್ಲಿಗೆ' ಚಿತ್ರದಲ್ಲಿ ಸಣ್ಣದೊಂದು ಪಾತ್ರ ಮಾಡಿ ಗಮನ ಸೆಳೆದಿದ್ದ ಅಚಿಂತ್ಯ ಸೇರಿದಂತೆ ನಿಹಾಲ್, ಅಮೋಘ್, ಮಹೇಂದ್ರ, ಅಭಿಷೇಕ್, ತುಷಾರ್, ಸೂರಜ್, ಪುಟ್ಟರಾಜು, ತೇಜಸ್ವಿನಿ ಮತ್ತು ಇತರೆ ಕೆಲವು ಮಕ್ಕಳು ಗೆಳೆಯರಾಗಿ ಅಭಿನಯಿಸಿದ್ದಾರೆ.[ಎಕ್ಸ್ ಕ್ಲೂಸಿವ್:'ಡ್ರಾಮಾ ಜ್ಯೂನಿಯರ್ಸ್' ಗೆದ್ದ ಮಕ್ಕಳಿಗೆ ಸಿಕ್ಕ ಬಹುಮಾನ ಮೊತ್ತವೆಷ್ಟು?]

Actor Kiccha Sudeep Watch Eleyaru Naavu Geleyaru

'ಎಳೆಯರು ನಾವು ಗೆಳೆಯರು' ಚಿತ್ರಕ್ಕೆ ಅನೂಪ್ ಸೀಳಿನ್ ಸಂಗೀತ ಸಂಯೋಜನೆ ಮತ್ತು ಅಶೋಕ್ ವಿ ರಮಣ್ ರವರ ‍ಛಾಯಾಗ್ರಹಣ ಚಿತ್ರಕ್ಕಿದೆ. ಇನ್ನು ರಿಚರ್ಡ್ ಲೂಯಿಸ್ ಚಿತ್ರಕಥೆ ಮತ್ತು ಸಂಭಾಷಣೆ ಬರೆದಿದ್ದಾರೆ.

English summary
Kannada Actor Kiccha Sudeep appreciated Kannada Movie 'eleyaru naavu geleyaru' which features Drama juniors Childrens. 'Eleyaru Naavu Geleyaru' is Directed by Vikram Soori

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada