ರಿಷಬ್ ಶೆಟ್ಟಿ 'ಕಾಂತಾರ'ಗಾಗಿ ಮುಂಬೈ, ಹೈದರಾಬಾದ್‌ನಿಂದ ಕುಂದಾಪುರಕ್ಕೆ ಬಂದಿಳಿದ ಕಾರ್ಪೆಂಟರ್ಸ್; ಏನ್ ನಡೀತಿದೆ?

ಪ್ಯಾನ್ ಇಂಡಿಯಾ ಸ್ಟಾರ್ ರಿಷಬ್ ಶೆಟ್ಟಿ ಮುಂದಿನ ಪ್ರಾಜೆಕ್ಟ್ 'ಕಾಂತಾರ' ಪ್ರೀಕ್ವೆಲ್. ಈಗಾಗಲೇ 'ಕಾಂತಾರ ಚಾಪ್ಟರ್ 1' ಸಿನಿಮಾ ಝಲಕ್ ಅನ್ನೂ ರಿಲೀಸ್ ಮಾಡಿದ್ದು, ರಿಷಬ್ ಲುಕ್‌ಗೆ ಇಂಟ್ರೆಸ್ಟಿಂಗ್ ಆಗಿದೆ. ಇಲ್ಲಿಂದ ಪ್ರೀಕ್ಷೆಲ್ ಕುತೂಹಲವನ್ನು ಕೆರಳಿಸುತ್ತಲೇ ಇದೆ. ಕೆಲವು ತಿಂಗಳ ಹಿಂದಷ್ಟೇ ಈ ಸಿನಿಮಾಗೆ ಮುಹೂರ್ತ ನಡೆದಿತ್ತು. ಅಲ್ಲಿಂದ ಸಿನಿಮಾ ತಂಡ ಗೌಪ್ಯವಾಗಿ ಸಿನಿಮಾ ಬಗ್ಗೆ ಕೆಲಸ ಮಾಡುತ್ತಿತ್ತು.

'ಕಾಂತಾರ ಚಾಪ್ಟರ್ 1'ಗೆ ಹೊಂಬಾಳೆ ಫಿಲ್ಮ್ಸ್‌ ಹಣ ಹೂಡುತ್ತಿರುವುದರಿಂದ ಬಿಗ್ ಬಜೆಟ್ ಸಿನಿಮಾ ಅಂತ ಗೆಸ್ ಮಾಡಬಹುದು. ಈಗಾಗಲೇ, 'ಕೆಜಿಎಫ್ 2',' 'ಕಾಂತಾರ', 'ಸಲಾರ್' ಅಂತಹ ಮೆಗಾ ಸಿನಿಮಾ ರಿಲೀಸ್ ಆಗಿವೆ. ಇದೇ ಯಶಸ್ಸಿನ ಬೆನ್ನಲ್ಲೇ ಕಾಂತಾರ ಪ್ರೀಕ್ವೆಲ್ ಅನ್ನು ಅನೌನ್ಸ್ ಮಾಡಿ ಸೆಟ್ಟೇರಿಸಿತ್ತು. ಕೊನೆಗೂ ಮೊದಲನೇ ಹಂತದ ಶೂಟಿಂಗ್ ಇನ್ನೇನು ಕೆಲವೇ ದಿನಗಳಲ್ಲಿ ಆರಂಭ ಆಗಲಿದೆ ಅನ್ನೋ ಸುದ್ದಿ ಹೊರಬಿದ್ದಿದೆ.

600 Carpenters working for Rishab Shetty Kantara chapter 1 movie set which starts in Kundapura

ರಿಷಬ್ ಶೆಟ್ಟಿ ನಟಿಸಿ, ನಿರ್ದೇಶಿಸುತ್ತಿರುವ 'ಕಾಂತಾರ' ಪ್ರೀಕ್ವೆಲ್ ಫಸ್ಟ್ ಲುಕ್ ಈಗಾಗಲೇ ಕುತೂಹಲ ಕೆರಳಿಸಿದೆ. ಸದ್ದಿಲ್ಲದೆ ತೆರೆಮರೆಯಲ್ಲಿ ರಿಷಬ್ ಶೆಟ್ಟಿ ಮತ್ತು ತಂಡ ಸಿನಿಮಾ ಕೆಲಸ ಆರಂಭ ಮಾಡಿತ್ತು. ಕೊನೆಗೂ ಪ್ರೀ ಪ್ರೊಡಕ್ಷನ್ ಕೆಲಸ ಮುಗಿಸಿ, 20 ದಿನಗಳ ಕಾಲ ಮೊದಲ ಹಂತದ ಚಿತ್ರೀಕರಣಕ್ಕೆ ರಿಷಬ್ ಶೆಟ್ಟಿ ಮುಂದಾಗಿದ್ದಾರೆ. ಹಾಗಿದ್ದರೆ, ಕಾಂತಾರ ಬಗ್ಗೆ ಏನಿದು ಸುದ್ದಿ? ತಿಳಿಯಲು ಮುಂದೆ ಓದಿ..

ಕುಂದಾಪುರದಲ್ಲಿ 'ಕಾಂತಾರ ಚಾಪ್ಟರ್ 1'ರ ಶೂಟಿಂಗ್ ನಡೆಯಲಿದೆ. ಅದಕ್ಕಾಗಿ ಬೃಹತ್ ಸೆಟ್ ಅನ್ನು ಹಾಕಲಾಗಿದೆ ಎಂದು ಹೇಳಲಾಗುತ್ತಿದೆ. ಕುಂದಾಪುರ ಸಮೀಪ ದೊಡ್ಡ ಸೆಟ್ಟನ್ನು ಹಾಕಲಾಗುತ್ತಿದೆಯಂತೆ. ಈ ಸೆಟ್ಟಿನಲ್ಲಿಯೇ 20 ದಿನಗಳ ಕಾಲ ಬಹುತೇಕ ಮೊದಲ ಹಂತದ ಶೂಟಿಂಗ್ ನಡೆಯಲಿದೆ ಅಂತ ವರದಿಗಳಾಗಿವೆ. ಇದು ಪ್ಯಾನ್ ಇಂಡಿಯಾ ಸಿನಿಮಾ ಆಗಿದ್ದರಿಂದ ಸೆಟ್‌ ಕೂಡ ದುಬಾರಿ ಮೊತ್ತದಲ್ಲಿಯೇ ಹಾಕಲಾಗಿದೆ ಎನ್ನಲಾಗಿದೆ.

'ಕಾಂತಾರ ಚಾಪ್ಟರ್ 1'ಕ್ಕೆ ಬೃಹತ್ ಸೆಟ್ಟು ಹಾಕುವುದಕ್ಕೆ ಸುಮಾರು 600 ಮಂದಿ ಕಾರ್ಪೆಂಟ್‌ಗಳು ಕೆಲಸ ಮಾಡುತ್ತಿದ್ದಾರೆ ಎನ್ನಲಾಗಿದೆ. ಈ ಸೆಟ್ ಕೆಲಸಕ್ಕೆ ಮುಂಬೈ, ಹೈದರಾಬಾದ್‌ ಹಾಗೂ ಬೆಂಗಳೂರಿನಿಂದ ಕಾರ್ಪೆಂಟರ್‌ಗಳನ್ನು ಕರೆಸಲಾಗಿದ್ಯಂತೆ. ಇವೆಲ್ಲರೂ ಕುಂದಾಪುರದಲ್ಲಿ ದೊಡ್ಡ ಸೆಟ್ ಅನ್ನು ನಿರ್ಮಾಣ ಮಾಡುತ್ತಿದ್ದು, ಇದೇ ವಾರ ಆ ಸೆಟ್ಟಿನಲ್ಲಿ ಶೂಟಿಂಗ್ ಮಾಡಲಿದ್ದಾರೆನ್ನಲಾಗಿದೆ.

600 Carpenters working for Rishab Shetty Kantara chapter 1 movie set which starts in Kundapura

ಸದ್ಯ 'ಕಾಂತಾರ' ಪ್ರೀಕ್ವೆಲ್‌ನಲ್ಲಿ ರಿಷಬ್ ಶೆಟ್ಟಿ ಹೆಸರು ಮಾತ್ರ ರಿವೀಲ್ ಆಗಿದೆ. ರಿಷಬ್‌ಗೆ ಜೋಡಿಯಾಗಿ ಯಾರು ಆಯ್ಕೆ ಆಗಿದ್ದಾರೆನ್ನುವುದನ್ನು ಇನ್ನೂ ಹೊಂಬಾಳೆ ಫಿಲ್ಮ್ಸ್ ರಿವೀಲ್ ಮಾಡಿಲ್ಲ. ಹಾಗೇ ಉಳಿದ ಸ್ಟಾರ್ ಕಾಸ್ಟ್ ಬಗ್ಗೆನೂ ಚಿತ್ರತಂಡ ಇನ್ನೂ ಗೌಪ್ಯವಾಗಿಯೇ ಇಟ್ಟಿದೆ. ಹಾಗೇ ಗುಟ್ಟಾಗಿ ಸಿನಿಮಾ ಶೂಟಿಂಗ್ ಕೂಡ ಆರಂಭ ಆಗಿದೆ ಅನ್ನೋ ಸುದ್ದಿ ಹೊರಬಿದ್ದಿದೆ.

'ಕಾಂತಾರ'ಗೆ ಕೆಲಸ ಮಾಡಿದ ತಂತ್ರಜ್ಞರೇ ಪ್ರೀಕ್ವೆಲ್‌ಗೂ ಕೆಲಸ ಮಾಡುತ್ತಿದ್ದಾರೆ. ಅಜನೀಶ್ ಲೋಕನಾಥ್ ಮ್ಯೂಸಿಕ್ ಕಂಪೋಸ್ ಮಾಡುತ್ತಿದ್ದರೆ, ಅರವಿಂದ್ ಕಶ್ಯಪ್ ಕ್ಯಾಮರಾಮನ್ ಆಗಿ ಆಯ್ಕೆ ಆಗಿದ್ದಾರೆ. ಉಳಿದಂತೆ ಸಿನಿಮಾ ಬಗ್ಗೆ ಇನ್ನಷ್ಟೆ ಮಾಹಿತಿ ಹೊರಬೀಳಬೇಕಿದೆ. 'ಕಾಂತಾರ' ಬಾಕ್ಸಾಫೀಸ್‌ನಲ್ಲಿ 400 ಕೋಟಿ ರೂಪಾಯಿಗೂ ಅಧಿಕ ಕಲೆಕ್ಷನ್ ಮಾಡಿತ್ತು. ದೇಶಾದ್ಯಂತ ಈ ಸಿನಿಮಾವನ್ನು ಮೆಚ್ಚಿಕೊಂಡಿದ್ದರು. ಹೀಗಾಗಿ ಎಲ್ಲರ ಕಣ್ಣು 'ಕಾಂತಾರ' ಪ್ರೀಕ್ವೆಲ್ ಮೇಲೆ ಬಿದ್ದಿದೆ.

More from Filmibeat

English summary
Rishab Shetty Kantara Chapter 1 Shooting stars in Kundapura:
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X