For Quick Alerts
  ALLOW NOTIFICATIONS  
  For Daily Alerts

  ಚಿತ್ರರಂಗಕ್ಕೆ ಭದ್ರ ಬುನಾದಿ ಹಾಕಿಕೊಟ್ಟ ಆದರ್ಶ ದಂಪತಿಯ ವಿವಾಹ ವಾರ್ಷಿಕೋತ್ಸವ

  |

  ಕನ್ನಡ ಚಿತ್ರರಂಗದ ಹುಟ್ಟು, ಬೆಳವಣಿಗೆಯಲ್ಲಿ ಸಾವಿರಾರು ಮಂದಿ ಶ್ರಮಿಸಿದ್ದಾರೆ. ಚಿತ್ರರಂಗಕ್ಕೆ ತಮ್ಮ ಬದುಕನ್ನೇ ಮುಡುಪಾಗಿಟ್ಟು ಬೆಳೆಸಿದ್ದಾರೆ. ಕಾಣುವ ಹೆಸರುಗಳಷ್ಟೇ ಕಾಣದ ಕೈಗಳೂ ಇವೆ. ಆದರೆ ಪ್ರತಿಯೊಂದಕ್ಕೂ ದೂರದ ಮದ್ರಾಸ್ ಅನ್ನೇ ಅವಲಂಬಿಸಿದ್ದ ಕನ್ನಡ ಚಿತ್ರರಂಗಕ್ಕೆ ತನ್ನದೇ ನೆಲದಲ್ಲಿ ಭದ್ರ ಅಡಿಪಾಯ ಹಾಕಿ ಬೆಳೆಸುವಲ್ಲಿ ಡಾ. ರಾಜ್ ಕುಮಾರ್ ಮತ್ತು ಪಾರ್ವತಮ್ಮ ರಾಜ್ ಕುಮಾರ್ ಅವರ ಪಾತ್ರ ಬಹು ದೊಡ್ಡದು.

  ಚಿರು ವಿಧಿವಶವಾದ ಮೇಲೆ ತಮ್ಮ ಹೆಸರನ್ನೇ ಚೇಂಜ್ ಮಾಡಿದ ಮೇಘನಾ ರಾಜ್ | Meghana Raj Changed her Name

  ರಾಜ್ ಕುಮಾರ್ ಅವರ ಸಿನಿಮಾ ಬದುಕು ಶುರುವಾಗುವ ವೇಳೆಗೆ ಪಾರ್ವತಮ್ಮ ಅವರೊಂದಿಗೆ ದಾಂಪತ್ಯ ಜೀವನ ಕೂಡ ಶುರುವಾಗಿತ್ತು. ರಾಜ್ ಕುಮಾರ್ ಅವರ ನಟನೆಯ ಸಿನಿಮಾಗಳ ಯಶಸ್ಸಿನಲ್ಲಿ ಪಾರ್ವತಮ್ಮ ಅವರ ಪಾಲು ದೊಡ್ಡದಿದೆ. ಏಕೆಂದರೆ ರಾಜ್ ಕುಮಾರ್ ಅವರ ಸಿನಿಮಾಗಳ ಕಥೆಯ ಆಯ್ಕೆಯಲ್ಲಿ ಪಾರ್ವತಮ್ಮ ಖುದ್ದು ಕುಳಿತುಕೊಳ್ಳುತ್ತಿದ್ದರು. ವ್ಯವಹಾರಗಳನ್ನೂ ನೋಡಿಕೊಂಡರು. ಹೀಗೆ ಸಿನಿಮಾಗಳು, ನಿರ್ಮಾಣ ಸಂಸ್ಥೆಯ ಜತೆಯಲ್ಲಿ ಚಿತ್ರರಂಗವನ್ನು ವಿಸ್ತರಿಸುವ ಮೂಲಕ ಮತ್ತೊಂದು ಹಂತಕ್ಕೆ ಬೆಳೆಸಿದ್ದು ಈ ಅಪೂರ್ವ ಜೋಡಿ. ಮುಂದೆ ಓದಿ...

  ಸಾಮಾಜಿಕ ಕ್ರಾಂತಿ ಮಾಡಿದ ರಾಜ್ ಕುಮಾರ್ ಚಿತ್ರದ ಹಿಂದಿನ ಕಥೆಸಾಮಾಜಿಕ ಕ್ರಾಂತಿ ಮಾಡಿದ ರಾಜ್ ಕುಮಾರ್ ಚಿತ್ರದ ಹಿಂದಿನ ಕಥೆ

  67ನೇ ವರ್ಷದ ವಾರ್ಷಿಕೋತ್ಸವ

  67ನೇ ವರ್ಷದ ವಾರ್ಷಿಕೋತ್ಸವ

  ರಾಜ್ ಕುಮಾರ್ ಮತ್ತು ಪಾರ್ವತಮ್ಮ ಅವರ ಮದುವೆ ನಡೆದಿದ್ದು 1953ರ ಜೂನ್ 25ರಂದು. ಅಂದರೆ 67 ವರ್ಷಗಳ ಹಿಂದೆ. ನಂಜನಗೂಡಿನಲ್ಲಿ ಇಬ್ಬರ ಮದುವೆ ನಡೆದಿತ್ತು. ಆಗ ರಾಜ್ ಕುಮಾರ್ ಅವರಿಗೆ 24 ವರ್ಷವಾಗಿದ್ದರೆ, ಪಾರ್ವತಮ್ಮ ಅವರಿಗೆ 14 ವರ್ಷ.

  ರಾಘವೇಂದ್ರ ರಾಜ್ ಕುಮಾರ್ ಶುಭ ಹಾರೈಕೆ

  ರಾಘವೇಂದ್ರ ರಾಜ್ ಕುಮಾರ್ ಶುಭ ಹಾರೈಕೆ

  ರಾಜ್ ಕುಮಾರ್ ಮತ್ತು ಪಾರ್ವತಮ್ಮ ಅವರ ಚೆಂದನೆಯ ಫೋಟೊ ಹಂಚಿಕೊಳ್ಳುವ ಮೂಲಕ ಅವರ ಮಗ ರಾಘವೇಂದ್ರ ರಾಜ್ ಕುಮಾರ್, ಮದುವೆಯ ವಾರ್ಷಿಕೋತ್ಸವದ ಶುಭ ಕೋರಿದ್ದಾರೆ. ವರನಟ ಡಾ.ರಾಜ್ಕುಮಾರ್ ಹಾಗೂ ಪಾರ್ವತಮ್ಮ ರವರಿಗೂ ವಿವಾಹ ವಾರ್ಷಿಕೋತ್ಸವದ ಶುಭಾಶಯಗಳು ಎಂದು ಅಭಿಮಾನಿಗಳು ಶುಭ ಹಾರೈಸಿದ್ದಾರೆ.

  ನಾಲ್ವರು ಸೂಪರ್‌ಸ್ಟಾರ್‌ಗಳ ಬೆನ್ನೆಲುಬಾಗಿದ್ದ ದಿಟ್ಟ ಮಹಿಳೆಯ ಪುಣ್ಯತಿಥಿನಾಲ್ವರು ಸೂಪರ್‌ಸ್ಟಾರ್‌ಗಳ ಬೆನ್ನೆಲುಬಾಗಿದ್ದ ದಿಟ್ಟ ಮಹಿಳೆಯ ಪುಣ್ಯತಿಥಿ

  ಫ್ಯಾನ್ಸ್ ಪುಟಗಳಲ್ಲಿ ಶುಭಾಶಯ

  ಫ್ಯಾನ್ಸ್ ಪುಟಗಳಲ್ಲಿ ಶುಭಾಶಯ

  ಅಣ್ಣಾವ್ರು ಮತ್ತು ಅಮ್ಮಾವ್ರಿಗೆ ೬೭ನೇ ವಿವಾಹ ವಾರ್ಷಿಕೋತ್ಸವದ ಶುಭಾಶಯಗಳು ಎಂದು ಪುನೀತ್ ರಾಜ್ ಕುಮಾರ್ ಮತ್ತು ಶಿವರಾಜ್ ಕುಮಾರ್ ಅಭಿಮಾನಿಗಳು ತಮ್ಮ ನೆಚ್ಚಿನ ನಟರ ಫ್ಯಾನ್ ಪೇಜ್‌ಗಳ ಮೂಲಕ ಶುಭ ಹಾರೈಸಿದ್ದಾರೆ.

  ಶಿವರಾಜ್‌ಕುಮಾರ್-ಗೀತಾ ವಾರ್ಷಿಕೋತ್ಸವ

  ಶಿವರಾಜ್‌ಕುಮಾರ್-ಗೀತಾ ವಾರ್ಷಿಕೋತ್ಸವ

  ವಿಶೇಷವೆಂದರೆ ಒಂದು ದಿನದ ಹಿಂದಷ್ಟೇ ರಾಜ್ ಕುಮಾರ್-ಪಾರ್ವತಮ್ಮ ದಂಪತಿ ಮಗ ಶಿವರಾಜ್ ಕುಮಾರ್ ಹಾಗೂ ಗೀತಾ ತಮ್ಮ ವಿವಾಹ ವಾರ್ಷಿಕೋತ್ಸವ ಆಚರಿಸಿದ್ದರು. 1986ರ ಜೂನ್ 24ರಂದು ಅವರ ಮದುವೆಯಾಗಿತ್ತು.

  ಅಣ್ಣಾವ್ರ ಸಿನಿಮಾ ನೋಡೋದೇ ಇಲ್ಲ ಎಂದ ತಮಿಳಿಗ, ಅವರ ಮುಂದಿನ ಸಿನಿಮಾಗೆ ಏನ್ ಮಾಡಿದ ಗೊತ್ತಾ!ಅಣ್ಣಾವ್ರ ಸಿನಿಮಾ ನೋಡೋದೇ ಇಲ್ಲ ಎಂದ ತಮಿಳಿಗ, ಅವರ ಮುಂದಿನ ಸಿನಿಮಾಗೆ ಏನ್ ಮಾಡಿದ ಗೊತ್ತಾ!

  English summary
  Fans wished Dr Rajkumar and Parvathamma Rajkumar on their 67th weding anniversary.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X