68th Filmfare Awards: 2023ರ ಫಿಲ್ಮ್ ಫೇರ್ ಪ್ರಶಸ್ತಿ ಘೋಷಣೆ; ಕನ್ನಡದಲ್ಲಿ ಪ್ರಶಸ್ತಿ ಗೆದ್ದವರ ಲಿಸ್ಟ್ ಇಲ್ಲಿದೆ!

68ನೇ ಫಿಲ್ಮ್‌ಫೇರ್ ಪ್ರಶಸ್ತಿ ಅನೌನ್ಸ್ ಆಗಿದೆ. 2023ನೇ ಸಾಲಿನ ದಕ್ಷಿಣ ಭಾರತದ ಪ್ರಶಸ್ತಿಗಳು ಹೊರಬಿದ್ದಿವೆ. ಅತ್ಯುತ್ತಮ ನಟ-ನಟಿಯರು, ನಿರ್ದೇಶಕರು, ಸಿನಿಮಾ, ಮ್ಯೂಸಿಕ್ ಡೈರೆಕ್ಟರ್‌ಗಳು, ತಂತ್ರಜ್ಷರು ಸೇರಿದಂತೆ ಹಲವು ವಿಭಾಗಗಳಲ್ಲಿ ಪ್ರಶಸ್ತಿಯನ್ನು ಘೋಷಣೆ ಮಾಡಲಾಗಿದೆ. ಕಳೆದ ವರ್ಷ ಕೆಲವು ಕಾರಣಗಳಿಂದ ನಡೆಯಬೇಕಿದ್ದ ಈ ಪ್ರಶಸ್ತಿ ಪ್ರಧಾನ ಸಮಾರಂಭ ನಡೆದಿರಲಿಲ್ಲ.

ಈ ಕಾರಣಕ್ಕೆ 2023ನೇ ಸಾಲಿನ ಪ್ರಶಸ್ತಿಯನ್ನು ಫಿಲ್ಮ್‌ಫೇರ್ ಡಿಜಿಟಲ್ ಮಾಧ್ಯಮದ ಮೂಲಕ ರಿವೀಲ್ ಮಾಡಲಾಗಿದೆ. ಕನ್ನಡ ಚಿತ್ರರಂಗ ಸದ್ಯ ಸಂಕಷ್ಟದಲ್ಲಿ ಇದ್ದರೂ, 2023ನೇ ಸಾಲಿನಲ್ಲಿ ಪ್ಯಾನ್ ಇಂಡಿಯಾ ಮಟ್ಟದಲ್ಲಿ ಸದ್ದು ಮಾಡಿದ್ದವು. ಆ ವೇಳೆ ಪ್ರೇಕ್ಷಕರ ಮನಗೆದ್ದ ಸಿನಿಮಾಗಳನ್ನು ಮುಂದಿಟ್ಟುಕೊಂಡು 68ನೇ ಫಿಲ್ಮ್ ಫೇರ್ ಪ್ರಶಸ್ತಿ ಗೆದ್ದವರ ಪಟ್ಟಿಯನ್ನು ಬಿಡುಗಡೆ ಮಾಡಲಾಗಿದೆ.

68th Filmfare Awards South Kannada 2023 here is full list of winners

ಈ ಪ್ರಶಸ್ತಿಗಳ ಪಟ್ಟಿಯಲ್ಲಿ ರಿಷಬ್ ಶೆಟ್ಟಿ ನಟಿಸಿ, ನಿರ್ದೇಶಿಸಿರುವ 'ಕಾಂತಾರ', '777 ಚಾರ್ಲಿ', 'ವಿಕ್ರಾಂತ್ ರೋಣ', 'ಧರಣಿ ಮಂಡಲ ಮಧ್ಯದೊಳಗೆ', 'ತಲೆದಂಡ' ಸಿನಿಮಾಗಳು ಪ್ರಮುಖ ಪ್ರಶಸ್ತಿಗಳನ್ನು ಬಾಚಿಕೊಂಡಿವೆ. ಫಿಲ್ಮ್ ಫೇರ್ 2023ಯ ಪ್ರಮುಖ ಪ್ರಶಸ್ತಿಗಳನ್ನು ಗೆದ್ದ ಆ ಸಿನಿಮಾಗಳ ಪಟ್ಟಿ ಇಲ್ಲಿದೆ.

ಫಿಲ್ಮ್ ಫೇರ್ 2023 ಪ್ರಶಸ್ತಿಗಳ ಪಟ್ಟಿ (ಕನ್ನಡ)

ಅತ್ಯುತ್ತಮ ಸಿನಿಮಾ
ಕಾಂತಾರ

ಅತ್ಯುತ್ತಮ ನಿರ್ದೇಶಕ
ಕಿರಣ್‌ರಾಜ್ ಕೆ (777 ಚಾರ್ಲಿ)

ಅತ್ಯುತ್ತಮ ಸಿನಿಮಾ (ಕ್ರಿಟಿಕ್ಸ್)
ಧರಣಿ ಮಂಡಲ ಮಧ್ಯದೊಳಗೆ (ಶ್ರೀಧರ್ ಶಿಕಾರಿಪುರ)

ಅತ್ಯುತ್ತಮ ನಟ
ರಿಷಬ್ ಶೆಟ್ಟಿ (ಕಾಂತಾರ)

ಅತ್ಯುತ್ತಮ ನಟ (ಕ್ರಿಟಿಕ್ಸ್)
ನವೀನ್ ಶಂಕರ್ ( ಧರಣಿ ಮಂಡಲ ಮಧ್ಯದೊಳಗೆ )

ಅತ್ಯುತ್ತಮ ನಟಿ
ಚೈತ್ರಾ ಜೆ ಆಚಾರ್ (ತಲೆದಂಡ)

ಅತ್ಯುತ್ತಮ ನಟಿ (ಕ್ರಿಟಿಕ್ಸ್)
ಸಪ್ತಮಿಗೌಡ (ಕಾಂತರ)

ಅತ್ಯುತ್ತಮ ಪೋಷಕ ನಟ
ಅಚ್ಯುತ್ ಕುಮಾರ್ (ಕಾಂತರಾ)

ಅತ್ಯುತ್ತಮ ಪೋಷಕ ನಟಿ
ಮಂಗಳ ಎನ್ (ತಲೆದಂಡ)

ಅತ್ಯುತ್ತಮ ಮ್ಯೂಸಿಕ್ ಅಲ್ಬಮ್
ಬಿ ಅಜನೀಶ್ ಲೋಕನಾಥ್ (ಕಾಂತಾರ)

ಅತ್ಯುತ್ತಮ ಸಾಹಿತ್ಯ
ವಿ.ನಾಗೇಂದ್ರ ಪ್ರಸಾದ್ (ಬೆಳಕಿನ ಕವಿತೆ-ಬನಾರಸ್)

ಅತ್ಯುತ್ತಮ ಗಾಯಕ
ಸಾಯಿ ವಿಘ್ನೇಶ್ (ವರಾಹ ರೂಪಂ-ಕಾಂತಾರ)

ಅತ್ಯುತ್ತಮ ಗಾಯಕಿ
ಸುನಿಧಿ ಚೌಹಾಣ್ (ರಾ ರಾ ರಕ್ಕಮ್ಮ-ವಿಕ್ರಾಂತ್ ರೋಣ)

More from Filmibeat

English summary
68th Filmfare Awards South Kannada 2023 here is full list of winners:
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X