71st National Film Awards: ಶಾರುಖ್‌ಗೆ ಮೊದಲ ರಾಷ್ಟ್ರ ಪ್ರಶಸ್ತಿ.. ಮೋಹನ್‌ಲಾಲ್‌ಗೆ ದಾದಾ ಸಾಹೇಬ್ ಫಾಲ್ಕೆ ಪ್ರಶಸ್ತಿ
ಭಾರತೀಯ ಚಿತ್ರರಂಗಕ್ಕೆ ನೀಡಲಾಗುವ ಪ್ರತಿಷ್ಠಿತ ರಾಷ್ಟ್ರ ಪ್ರಶಸ್ತಿ ಪ್ರದಾನ ಸಮಾರಂಭ ಇಂದು ( ಸೆಪ್ಟೆಂಬರ್ 23) ದೆಹಲಿಯಲ್ಲಿ ನಡೆದಿದೆ. ಇದು 2023ನೇ ಸಾಲಿನ ಹಾಗೂ 71ನೇ ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿ ಸಮಾರಂಭ ಆಗಿದೆ. ರಾಷ್ಟ್ರಪತಿ ದ್ರೌಪದಿ ಮುರ್ಮು 71ನೇ ಸಾಲಿನ ರಾಷ್ಟ್ರ ಪ್ರಶಸ್ತಿ ವಿಜೇತರಿಗೆ ಅವಾರ್ಡ್ ಕೊಟ್ಟು ಗೌರವಿಸಿದ್ದಾರೆ.
ಈ ಬಾರಿಯ ರಾಷ್ಟ್ರ ಪ್ರಶಸ್ತಿ ಪ್ರದಾನ ಸಮಾರಂಭ ದೇಶದ ಗಮನ ಸೆಳೆದಿದೆ. ಭಾರತೀಯ ಚಿತ್ರರಂಗದ ಇಬ್ಬರು ನಟರು ಪ್ರಶಸ್ತಿಯನ್ನು ಪಡೆದುಕೊಂಡಿದ್ದಾರೆ. ಸುಮಾರು 30 ವರ್ಷಗಳ ಕಾಲ ಸಿನಿಮಾರಂಗದಲ್ಲಿ ಕೆಲಸ ಮಾಡಿರುವ ಬಾಲಿವುಡ್ ಬಾದ್‌ಷಾ ಶಾರುಖ್ ಖಾನ್ ಮೊದಲ ರಾಷ್ಟ್ರ ಪ್ರಶಸ್ತಿಯನ್ನು ಪಡೆದುಕೊಂಡಿದ್ದಾರೆ. ಇದು 71ನೇ ರಾಷ್ಟ್ರ ಪ್ರಶಸ್ತಿ ಪ್ರದಾನ ಸಮಾರಂಭದ ಹೈಲೈಟ್.

ಹಾಗೇ ಮಲಯಾಳಂನ ಸೂಪರ್‌ಸ್ಟಾರ್ ಮೋಹನ್‌ಲಾಲ್ ಅವರಿಗೂ ಸಿನಿಮಾ ಕ್ಷೇತ್ರದಲ್ಲಿ ನೀಡಲಾಗುವ ಪ್ರತಿಷ್ಠಿತ ದಾದಾ ಸಾಹೇಬ್ ಫಾಲ್ಕೆ ಲಭಿಸಿದೆ. ರಾಷ್ಟ್ರಪತಿ ದ್ರೌಪದಿ ಮುರ್ಮು ಅವರಿಂದ ಮೋಹನ್‌ಲಾಲ್ ಈ ಪ್ರಶಸ್ತಿಯನ್ನು ಪಡೆದುಕೊಂಡಿದ್ದಾರೆ. ಇವರೊಂದಿಗೆ ಭಾರತದ ಪ್ರಮುಖ ಭಾಷೆಗಳಲ್ಲಿ ಸಾಧನೆ ಮಾಡಿದ ಸಿನಿಮಾ ತಂಡ, ಕಲಾವಿದರು ಹಾಗೂ ತಂತ್ರಜ್ಞರಿಗೆ ಪ್ರಶಸ್ತಿಯನ್ನು ನೀಡಿ ಗೌರವಿಸಲಾಗಿದೆ.
ಶಾರುಖ್ ಖಾನ್ ತಮ್ಮ 3 ದಶಕಗಳ ಸಿನಿಮಾ ಕರಿಯರ್‌ನಲ್ಲಿ ಇದೇ ಮೊದಲ ಬಾರಿಗೆ ರಾಷ್ಟ್ರ ಪ್ರಶಸ್ತಿ ಲಭಿಸಿದೆ. 'ಜವಾನ್' ಸಿನಿಮಾದ ನಟನೆಗಾಗಿ ಪ್ರತಿಷ್ಠಿತ ಪ್ರಶಸ್ತಿಯನ್ನು ಪಡೆದುಕೊಂಡಿದ್ದರೆ, ಇವರೊಂದಿಗೆ '12th ಪಾಸ್' ಸಿನಿಮಾದ ನಟನೆಗಾಗಿ ವಿಕ್ರಾಂತ್ ಮೆಸ್ಸಿ ಕೂಡ ಅತ್ಯುತ್ತಮ ನಟ ಪ್ರಶಸ್ತಿ ಗೆದ್ದಿದ್ದಾರೆ. 'Mrs ಚಟರ್ಜಿ Vs ನಾರ್ವೆ' ಸಿನಿಮಾಗಾಗಿ ಬಾಲಿವುಡ್ ನಟಿ ರಾಣಿ ಮುಖರ್ಜಿಗೆ ಅತ್ಯುತ್ತಮ ನಟಿ ಪ್ರಶಸ್ತಿಗೆ ಭಾಜನರಾಗಿದ್ದಾರೆ.
71ನೇ ಸಾಲಿನ ಪ್ರಮುಖ ರಾಷ್ಟ್ರ ಪ್ರಶಸ್ತಿಗಳ ಪಟ್ಟಿ
* ಅತ್ಯುತ್ತಮ ನಟ- ಶಾರುಖ್ ಖಾನ್ (ಜವಾನ್)/ ವಿಕ್ರಾಂತ್ ಮೆಸ್ಸಿ (12th ಪಾಸ್)
* ಅತ್ಯುತ್ತಮ ನಟಿ- ರಾಣಿ ಮುಖರ್ಜಿ (Mrs ಚಟರ್ಜಿ ವರ್ಸ್ ನಾರ್ವೆ)
* ದಾದಾ ಸಾಹೇಬ್ ಫಾಲ್ಕೆ- ಮೋಹನ್‌ಲಾಲ್
* ಅತ್ಯುತ್ತಮ ಪೋಷಕ ನಟಿ - ಊರ್ವಶಿ ('ಉಲ್ಲೋಳುಕ್ಕು')
* ಜಾನಕಿ ಬೋಡಿವಾಲ(ವಶ್) * ಅತ್ಯುತ್ತಮ ಸಿನಿಮಾ - 12th ಫೇಲ್(ಹಿಂದಿ)
* ಅತ್ಯುತ್ತಮ ನಿರ್ದೇಶನ - ಸುದಿಪೋ ಸೇನ್(ದಿ ಕೇರಳ ಸ್ಟೋರಿ)
* ಅತ್ಯುತ್ತಮ ಕನ್ನಡ ಸಿನಿಮಾ: ಕಂದೀಲು: ದಿ ರೇ ಆಫ್ ಹೋಪ್
*ಅತ್ಯುತ್ತಮ ಹಿಂದಿ ಸಿನಿಮಾ: ಕಥಲ್
* ಅತ್ಯುತ್ತಮ ಗುಜರಾತಿ ಚಿತ್ರ: ವಾಶ್
* ಅತ್ಯುತ್ತಮ ಬಂಗಾಳಿ ಚಿತ್ರ: ಡೀಪ್ ಫ್ರಿಡ್ಜ್
* ಅಸ್ಸಾಮೀಸ್‌ನಲ್ಲಿ ಅತ್ಯುತ್ತಮ ಚಿತ್ರ: ರಂಗತಪು 1982
* ಅತ್ಯುತ್ತಮ ನೃತ್ಯ ಸಂಯೋಜನೆ: ರಾಕಿ ಔರ್ ರಾಣಿ ಕಿ ಪ್ರೇಮ್ ಕಹಾನಿ
* ಅತ್ಯುತ್ತಮ ಸಂಕಲನ: ಪೂಕಲಂ (ಮಲಯಾಳಂ)
* ಅತ್ಯುತ್ತಮ ಚಿತ್ರಕಥೆ: ಬೇಬಿ (ತೆಲುಗು), ಪಾರ್ಕಿಂಗ್ (ತಮಿಳು)
* ಅತ್ಯುತ್ತಮ ಛಾಯಾಗ್ರಹಣ: ದಿ ಕೇರಳ ಸ್ಟೋರಿ (ಹಿಂದಿ)
* ಅತ್ಯುತ್ತಮ ಪಂಜಾಬಿ ಚಿತ್ರ: ಗಾಡ್ಡೇ ಗಾಡ್ಡೇ ಚಾ
* ಅತ್ಯುತ್ತಮ ಒಡಿಯಾ ಚಿತ್ರ: ಪುಷ್ಕರ
* ಅತ್ಯುತ್ತಮ ಮರಾಠಿ ಚಿತ್ರ: ಶ್ಯಾಮ್ಚಿ ಆಯಿ ನಾನ್ ಫೀಚರ್ ಫಿಲ್ಮ್
* ಅತ್ಯುತ್ತಮ ಸ್ಕ್ರಿಪ್ಟ್ - Sunflowers Were the First Ones to Know(ಕನ್ನಡ)
* ಅತ್ಯುತ್ತಮ ಸಿನಿಮಾ- ಫ್ಲೋರಿಂಗ್ ಮ್ಯಾನ್


Click it and Unblock the Notifications











