ಬಾಲಿವುಡ್ ಮಸಲ್ ಮ್ಯಾನ್ ಭೇಟಿ ಮಾಡಿದ್ದೇಕೆ '777 ಚಾರ್ಲಿ' ನಿರ್ದೇಶಕ? ಕನ್ನಡಕ್ಕೆ ಬರಬಹುದೇ?

'777 ಚಾರ್ಲಿ' ಪ್ಯಾನ್ ಇಂಡಿಯಾ ಮಟ್ಟದಲ್ಲಿ ಜನಪ್ರಿಯತೆಯನ್ನು ಗಿಟ್ಟಿಸಿಕೊಂಡ ಸಿನಿಮಾ. ಶ್ವಾನವನ್ನೇ ಪ್ರಮುಖ ವಿಷಯವಾಗಿಟ್ಟುಕೊಂಡು ಈ ಸಿನಿಮಾವನ್ನು ಚಿತ್ರೀಕರಣ ಮಾಡಲಾಗಿತ್ತು. ರಕ್ಷಿತ್ ಶೆಟ್ಟಿ ಈ ಸಿನಿಮಾದಲ್ಲಿ ಮತ್ತೊಂದು ಪ್ರಮುಖ ಪಾತ್ರದಲ್ಲಿ ನಟಿಸಿದ್ದರು. ಚಾರ್ಲಿ ಹಾಗೂ ರಕ್ಷಿತ್ ಶೆಟ್ಟಿಯ ಕಾಂಬಿನೇಷನ್ ಪ್ರೇಕ್ಷಕರನ್ನು ಕಣ್ಣೀರಿನಲ್ಲಿ ತೇಲಿಸಿತ್ತು.

ವಿಶ್ವದ ಯಾವುದೇ ಮೂಲೆಗೆ ಹೋದರೂ, ನಾಯಿಯನ್ನು ಪ್ರೀತಿ ಮಾಡುವ ಜನರು ಸಿಗುತ್ತಾರೆ. ಇತ್ತೀಚೆಗೆ ಮಕ್ಕಳಿಗಿಂತ ಹೆಚ್ಚಾಗಿ ನಾಯಿಯನ್ನು ಮುದ್ದಾಗಿ ಸಾಕುತ್ತಾರೆ. ಇದೇ ವಿಷಯವನ್ನು ಇಟ್ಟುಕೊಂಡು '777 ಚಾರ್ಲಿ' ಸಿನಿಮಾವನ್ನು ನಿರ್ಮಾಣ ಮಾಡಲಾಗಿತ್ತು. ಈ ಸಿನಿಮಾ ಅದೇ ಮೊದಲ ಬಾರಿಗೆ ಕಿರಣ್ ರಾಜ್ ಆಕ್ಷನ್ ಕಟ್ ಹೇಳಿದ್ದರು.

777 Charlie director Kiranraj k met bollywood actor John Abraham

'777 ಚಾರ್ಲಿ' ಬಳಿಕ ದೇಸಿ ನಾಯಿಯನ್ನು ಇಟ್ಟುಕೊಂಡು ಮತ್ತೊಂದು ದ್ವಿಭಾಷಾ ಸಿನಿಮಾವನ್ನು ಅನೌನ್ಸ್ ಮಾಡಿದ್ದರು. ಆಗ ನಾಪತ್ತೆಯಾದವರು ಈಗ ಮತ್ತೆ ಪ್ರತ್ಯಕ್ಷ ಆಗಿದ್ದಾರೆ. ಅದೂ ಬಾಲಿವುಡ್ ನಟಿ ಜಾನ್ ಅಬ್ರಾಹಂ ಅವರ ಜೊತೆ ಕಾಣಿಸಿಕೊಂಡಿದ್ದಾರೆ. ಅವರೊಂದಿಗೆ ನಿಂತು ಫೋಟೊವನ್ನು ಕ್ಲಿಕ್ಕಿಸಿಕೊಂಡಿದ್ದಾರೆ. ಈ ಫೋಟೊವನ್ನು ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡು "ಎಂತಹ ಅದ್ಭುತ ದಿನ" ಎಂದು ಬರೆದುಕೊಂಡಿದ್ದಾರೆ.

'777 ಚಾರ್ಲಿ' ಸಿನಿಮಾವನ್ನು ಪ್ಯಾನ್ ಇಂಡಿಯಾ ಮಟ್ಟದಲ್ಲಿ ರಿಲೀಸ್ ಮಾಡಲು ನಿರ್ಧರಿಸಿದ್ದರು. ಈ ವೇಳೆ ಬಾಲಿವುಡ್ ನಟ ಜಾನ್ ಅಬ್ರಾಹಂ ಸಿನಿಮಾ ತಂಡದ ಬೆಂಬಲಕ್ಕೆ ನಿಂತಿದ್ದರು. ಯಾಕಂದ್ರೆ, ಜಾನ್ ಅಬ್ರಾಹಂ ಕೂಡ ಶ್ವಾನ ಪ್ರಿಯರು. ಹೀಗಾಗಿ ಹಿಂದಿ ಬೆಲ್ಟ್‌ಗಳಲ್ಲಿ '777 ಚಾರ್ಲಿ' ಬಿಡುಗಡೆಯಾದಾಗ ಜಾನ್ ಅಬ್ರಾಹಂ ಸಿನಿಮಾ ನೋಡುವಂತೆ ಮನವಿ ಮಾಡಿದ್ದರು.

ಕಿರಣ್ ರಾಜ್ '777 ಚಾರ್ಲಿ' ಸಿನಿಮಾ ರಿಲೀಸ್ ಆಗಿ, ಯಶಸ್ಸು ಕಾಣುತ್ತಿದ್ದಂತೆ ಹೊಸ ಸಿನಿಮಾವನ್ನು ಅನೌನ್ಸ್ ಮಾಡಿದ್ದರು. ಹಾರರ್, ಕಾಮಿಡಿ, ಫ್ಯಾಂಟಸಿ ಸಿನಿಮಾವನ್ನು ನಿರ್ದೇಶನ ಮಾಡುವುದಕ್ಕೆ ನಿರ್ಧರಿಸಿದ್ದರು. ಬಿಗ್ ಬಜೆಟ್‌ನಲ್ಲಿ ಈ ಸಿನಿಮಾ ನಿರ್ಮಾಣ ಆಗುತ್ತಿರುವ ಬಗ್ಗೆ ಸುಳಿವನ್ನು ನೀಡಿದ್ದರು. ಬಳಿಕ ಈ ಪ್ರಾಜೆಕ್ಟ್ ಬಗ್ಗೆ ಸುಳಿವು ಇರಲಿಲ್ಲ. ಸಿನಿಮಾದ ಕಥೆ ಏನಾಯ್ತು? ಅನ್ನೋದು ಗೊತ್ತಾಗಿರಲಿಲ್ಲ.

ಈ ನಡುವೆ ಕಿರಣ್ ರಾಜ್ ಬ್ಯಾಗ್ ಪ್ಯಾಕ್ ಮಾಡಿಕೊಂಡು ಲಂಡನ್‌ಗೆ ಹೊರಟು ನಿಂತಿದ್ದರು. ಅಲ್ಲಿ ವಿಎಫ್‌ಎಕ್ಸ್ ಕೋರ್ಸ್ ಮಾಡುವುದಾಗಿ ಮಾಹಿತಿಯನ್ನು ಹಂಚಿಕೊಂಡಿದ್ದರು. ತಮ್ಮ ಸಿನಿಮಾ ವಿಎಫ್‌ಎಕ್ಸ್ ಹೆಚ್ಚು ಇರುವುದರಿಂದ ಕಲಿಕೆಯ ಕಡೆ ಗಮನ ಹರಿಸಿದ್ದಾಗಿ ಹೇಳಿಕೊಂಡಿದ್ದರು. ಲಂಡನ್‌ನಿಂದ ಹಿಂತಿರುಗಿದ ಬಳಿಕ ಕಿರಣ್ ರಾಜ್ ಸಿನಿಮಾ ಬಗ್ಗೆ ಆಕ್ಟಿವ್ ಆಗಿರಲಿಲ್ಲ. ಈಗ ದಿಢೀರನೇ ಜಾನ್ ಅಬ್ರಾಹಂ ಅವರನ್ನು ಭೇಟಿ ಮಾಡಿ ಸಂಚಲನ ಸೃಷ್ಟಿಸಿದ್ದಾರೆ.

ತಮ್ಮ ಮುಂದಿನ ಸಿನಿಮಾ ಬಗ್ಗೆ ಮಾತುಕತೆ ಮಾಡುವುದಕ್ಕೆ ಹೋಗಿರಬಹುದಾ? ಅನ್ನೋ ಪ್ರಶ್ನೆ ಸಿನಿಮಾ ಮಂದಿಯನ್ನು ಆವರಿಸಿಕೊಂಡಿದೆ. ಆದರೆ, ಕಿರಣ್ ರಾಜ್ ಈ ಬಗ್ಗೆ ತಮ್ಮ ಪೋಸ್ಟ್‌ನಲ್ಲಿ ಹೆಚ್ಚಿನ ಮಾಹಿತಿಯನ್ನು ಹಂಚಿಕೊಂಡಿಲ್ಲ. ತಮ್ಮ ನೆಚ್ಚಿನ ನಟನನ್ನು ಭೇಟಿ ಮಾಡಿದ ಖುಷಿಯ ಕ್ಷಣಗಳನ್ನು ತಮ್ಮ ಇನ್‌ಸ್ಟಾಗ್ರಾಂ ಖಾತೆಯಲ್ಲಿ ಹಂಚಿಕೊಂಡಿದ್ದಾರೆ.

More from Filmibeat

English summary
777 Charlie director Kiranraj k met bollywood actor John Abraham
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X