6 ಮರಿಗಳಿಗೆ ಜನ್ಮ ನೀಡಿದ '777 ಚಾರ್ಲಿ'; ರಿಯಲ್ ಲೈಫ್‌ನಲ್ಲಿ ಸಿನಿಮಾ ಜರ್ನಿ ಪೂರ್ಣಗೊಳಿಸಿದ ಚಾರ್ಲಿ!

ರಾಷ್ಟ್ರ ಮಟ್ಟದಲ್ಲಿ ಸದ್ದು ಮಾಡಿದ ಕನ್ನಡ ಪ್ಯಾನ್ ಇಂಡಿಯಾ ಸಿನಿಮಾ '777 ಚಾರ್ಲಿ'. ಶ್ವಾನ ಪ್ರಿಯರನ್ನು ಹೆಚ್ಚಾಗಿ ಗಮನದಲ್ಲಿಟ್ಟುಕೊಂಡು ಮಾಡದ ಸಿನಿಮಾಗೆ ಭಾರತದಾದ್ಯಂತ ಜನರು ಮೆಚ್ಚುಗೆ ಸೂಚಿಸಿದ್ದರು. ಸಿನಿಮಾ ಕೂಡ ಬಾಕ್ಸಾಫೀಸ್‌ನಲ್ಲಿ ಸಿಕ್ಕಾಪಟ್ಟೆ ಸದ್ದು ಮಾಡಿತ್ತು.

ಈ ಸಿನಿಮಾದಲ್ಲಿ ರಕ್ಷಿತ್ ಶೆಟ್ಟಿ ಎಷ್ಟು ಸದ್ದು ಮಾಡಿದ್ದರೋ, ಅಷ್ಟೇ ಫೇಮಸ್ ಆಗಿದ್ದು '777 ಚಾರ್ಲಿ'. ಈ ಸಿನಿಮಾ ನಿರ್ಮಾಣದುದ್ದಕ್ಕೂ ಚಾರ್ಲಿಯ ಜರ್ನಿ ಕೂಡ ಅಷ್ಟೇ ವಿಶೇಷವಾಗಿತ್ತು. ಸಿನಿಮಾದಲ್ಲಿ ಚಾರ್ಲಿಯನ್ನು ಕಂಡು ಜನರು ಇಷ್ಟ ಪಟ್ಟಿದ್ದರು. ಕೊನೆಯಲ್ಲಿ ಚಾರ್ಲಿಯನ್ನು ನೋಡಿ ಕಣ್ಣೀರು ಹಾಕಿದ್ದರು.

777 Charlie movie fame dog gave birth to 6 puppies Rakshit Shetty came live here is video

ಹಾಗೇ, '777 ಚಾರ್ಲಿ' ಸಿನಿಮಾ ಮುಗಿದು ರಿಲೀಸ್ ಆದರೂ, ರಕ್ಷಿತ್ ಶೆಟ್ಟಿ ಮತ್ತು ತಂಡ ಚಾರ್ಲಿಯನ್ನು ಮರೆತಿಲ್ಲ. ಆಗಾಗ ಚಾರ್ಲಿ ಬಗ್ಗೆ ವಿಚಾರಿಸಿಕೊಳ್ಳುತ್ತಲೇ ಇದ್ದರು. ಮೈಸೂರಿನಲ್ಲಿ ಟ್ರೈನರ್ ಪ್ರಮೋದ್ ಜೊತೆ ಇರುವ ಚಾರ್ಲಿ ಆರಾಮಾಗಿದೆ.

ಆದರೆ, '777 ಚಾರ್ಲಿ' ಸಿನಿಮಾದ ಕ್ಲೈಮ್ಯಾಕ್ಸ್‌ನಲ್ಲಿರುವಂತೆ ರಿಯಲ್‌ ಲೈಫ್‌ನಲ್ಲೂ ಚಾರ್ಲಿ ಮರಿಗಳಿಗೆ ಜನ್ಮ ನೀಡಬೇಕು ಎಂಬುದು ಚಿತ್ರತಂಡ ಒತ್ತಾಸೆಯಾಗಿತ್ತು. ಆದರೆ, ಅದಾಗಲೇ ಚಾರ್ಲಿಗೆ ವಯಸ್ಸಾಗಿದ್ದರಿಂದ ಈ ಚಾನ್ಸ್ ತುಂಬಾನೇ ಕಡಿಮೆ ಇತ್ತು. ಕೊನೆಗೆ ಚಾರ್ಲಿ ತಂಡ ಆಸೆ ನೆರವೇರಿದೆ. ಚಾರ್ಲಿ ಆರು ಮರಿಗಳಿಗೆ ಜನ್ಮ ನೀಡಿದ್ದಾಳೆ.

ಹೀಗಾಗಿ ಚಾರ್ಲಿಯನ್ನು ನೋಡುವುದಕ್ಕೆ ನಟ ರಕ್ಷಿತ್ ಶೆಟ್ಟಿ ಮೈಸೂರಿಗೆ ತೆರಳಿದ್ದರು. ಅಲ್ಲಿಂದಲೇ ಲೈವ್ ಬಂದು ತಮ್ಮ ಸಿನಿಮಾದ ಲೀಡ್ ಕ್ಯಾರೆಕ್ಟರ್ ಚಾರ್ಲಿ ಆರು ಮರಿಗಳಿಗೆ ಜನ್ಮ ನೀಡಿದ ಸಂಗತಿಯನ್ನು ಹಂಚಿಕೊಂಡಿದ್ದಾರೆ. ಕೆಲ ಕಾಲ ಚಾರ್ಲಿ ಹಾಗೂ ಮರಿಗಳೊಂದಿಗೆ ಸಮಯ ಕಳೆದು ಮರಳಿದ್ದಾರೆ. ಈ ವೇಳೆ ಲೈವ್‌ ಬಂದು ಚಾರ್ಲಿ ಬಗ್ಗೆ ಮಾತಾಡಿದ್ದಾರೆ.

"ಈ ಲೈವ್ ಬರುವುದಕ್ಕೆ ಒಂದು ಕಾರಣವಿದೆ. ಹಾಗೆ ಸುಮ್ಮನೆ ಲೈವ್ ಬಂದಿದ್ದಲ್ಲ. ಚಾರ್ಲಿ ಸಿನಿಮಾ ರಿಲೀಸ್ ಆಗಿ ಎರಡು ವರ್ಷ ಆಗಿದೆ. ಸಿನಿಮಾ ರಿಲೀಸ್ ಆದ್ಮೇಲೂ ನಮಗೆ ಚಾರ್ಲಿ ತಾಯಿಯಾದರೆ, ಈ ಜರ್ನಿಯ ಸರ್ಕಲ್ ಪೂರ್ಣಗೊಳ್ಳುತ್ತೆ ಅಂತ ಅಂದುಕೊಂಡಿದ್ದೆವು. ಈ ಫೀಲಿಂಗ್ ಪೂರ್ತಿ ತಂಡಕ್ಕೆ ಇತ್ತು. ಕಿರಣ್ ರಾಜ್ ಈ ಬಗ್ಗೆ ಬಹಳ ಹಿಂದೆನೇ ಹೇಳಿದ್ದರು." ಎಂದು ರಕ್ಷಿತ್ ಶೆಟ್ಟಿ ಹೇಳಿಕೊಂಡಿದ್ದಾರೆ.

'777 ಚಾರ್ಲಿ'ಯ ನಿರ್ದೇಶಕ ಕಿರಣ್ ರಾಜ್ ಸಿನಿಮಾ ಕ್ಲೈಮ್ಯಾಕ್ಸ್‌ನಂತೆ ಚಾರ್ಲಿ ರಿಯಲ್ ಲೈಫ್‌ನಲ್ಲೂ ಆ ಜರ್ನಿಯನ್ನು ಕಂಪ್ಲೀಟ್ ಮಾಡಲಿ ಅಂತ ಬಯಸಿದ್ದರು. ಅದರಂತೆಯೇ ರಕ್ಷಿತ್ ಶೆಟ್ಟಿ ಕೂಡ ಬಯಸಿದ್ದರಂತೆ.

"ಕಿರಣ್ ಹೇಳಿದ ಮೇಲೆ ನಾನು ಚಾರ್ಲಿ ತಾಯಿಯಾಗಲಿ ಅಂತ ಕಾಯುತ್ತಿದ್ದೆ. ಚಾರ್ಲಿ ಮೈಸೂರಿನಲ್ಲಿ ಪ್ರಮೋದ್ ಜೊತೆ ಇರುತ್ತಾಳೆ. ನಾನು ಪ್ರಮೋದ್‌ಗೆ ಫೋನ್ ಮಾಡಿದಾಗಲೆಲ್ಲ ಏನು ಚಾನ್ಸ್ ಇದೆಯಾ? ಅಂತ ಕೇಳುತ್ತಲೇ ಇದ್ದೆ. ಇಲ್ಲಾ ಚಾರ್ಲಿಗೆ ವಯಸ್ಸು ಆಯ್ತಲ್ವಾ. ಗೊತ್ತಿಲ್ಲ ಗೊತ್ತಿಲ್ಲ ಅಂತ ಹೇಳುತ್ತಿದ್ದರು. ಆದರೆ ಸರ್ಪ್ರೈಸ್ ಅಂತ ಮೇ 9ರಂದು ಚಾರ್ಲಿ ಆರು ಮರಿಗಳಿಗೆ ಜನ್ಮ ನೀಡಿದ್ದಾಳೆ. ನಾನು ಇವತ್ತು ಅದಕ್ಕೋಸ್ಕರ ಮೈಸೂರಿಗೆ ಬಂದೆ. ಚಾರ್ಲಿ ಹಾಗೂ ಅವಳ ಮರಿಗಳನ್ನು ನೋಡುವುದಕ್ಕೆ." ಎಂದು ರಕ್ಷಿತ್ ಶೆಟ್ಟಿ 'ಚಾರ್ಲಿ' ಬಗ್ಗೆ ಹರ್ಷ ವ್ಯಕ್ತಪಡಿಸಿದ್ದಾರೆ.

ಸದ್ಯ ಚಾರ್ಲಿ 6 ಮರಿಗಳಿಗೆ ಜನ್ಮ ನೀಡಿದ್ದಾಳೆ. ಅದರಲ್ಲಿ 5 ಹೆಣ್ಣು, ಒಂದು ಗಂಡು ಮರಿ. ಇನ್ನು ನೆಟ್ಟಿಗರು 'ಚಾರ್ಲಿ 2'ಗೆ ವೇದಿಕೆ ರೆಡಿ ಆಯ್ತು ಎಂದು ಕಾಮೆಂಟ್‌ಗಳನ್ನು ಮಾಡುತ್ತಿದ್ದಾರೆ. ಸದ್ಯ ರಕ್ಷಿತ್ ಶೆಟ್ಟಿ 'ರಿಚರ್ಡ್ ಆಂಟೋನಿ' ಸಿನಿಮಾ ಮಾಡುವುದರಲ್ಲಿ ಬ್ಯುಸಿಯಾಗಿದ್ದಾರೆ.

More from Filmibeat

English summary
777 Charlie movie fame dog gave birth to 6 puppies
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X