'777 ಚಾರ್ಲಿ'ಯ ಪ್ಯಾನ್ ಇಂಡಿಯಾ ಟ್ರೈಲರ್ ರಿಲೀಸ್: ರಕ್ಷಿತ್ ಹಾಗೂ ಚಾರ್ಲಿ ಕಥೆಯೇನು?
ಬಹಳ ದಿನಗಳಿಂದ ಈ ಸಿನಿಮಾದ ಟ್ರೈಲರ್‌ಗಾಗಿ ಸಿನಿಪ್ರಿಯರು ಕಾದು ಕೂತಿದ್ದರು. ಕೊನೆಗೂ '777 ಚಾರ್ಲಿ' ಟ್ರೈಲರ್ ಪ್ಯಾನ್ ಇಂಡಿಯಾ ಲೆವೆಲ್‌ನಲ್ಲಿ ರಿಲೀಸ್ ಆಗಿದೆ. ಕನ್ನಡ, ತೆಲುಗು, ತಮಿಳು, ಮಲಯಾಳಂ ಭಾಷೆಯಲ್ಲಿ ಸಿನಿಮಾ ಟ್ರೈಲರ್ ಬಿಡುಗಡೆಯಾಗಿದ್ದು, ಕಿಕ್ ಕೊಡುತ್ತಿದೆ.
Recommended Video

ಶ್ವಾನವನ್ನೇ ಪ್ರಮುಖ ಪಾತ್ರವನ್ನಾಗಿಟ್ಟುಕೊಂಡು ಕನ್ನಡದಲ್ಲಿ ಸಿನಿಮಾ ಬಂದಿದ್ದು ತೀರಾ ವಿರಳ. ಕನ್ನಡದಲ್ಲೂ ಬೆರಳೆಣಿಕೆಯಷ್ಟು ಸಿನಿಮಾ ಬಂದಿರಬಹುದು. ಈ ಕಾರಣಕ್ಕೆ '777 ಚಾರ್ಲಿ' ಕನ್ನಡಿಗರ ಮಟ್ಟಿಗೆ ಹೊಸ ಅನುಭವ ನೀಡುತ್ತೆ ಎನ್ನುವ ಭರವಸೆಯಿದೆ. ಅದಕ್ಕೆ ಟ್ರೈಲರ್ ಕೂಡ ಸಾಥ್ ನೀಡಿದೆ.
'777 ಚಾರ್ಲಿ' ಮತ್ತೊಂದು ಪ್ಯಾನ್ ಇಂಡಿಯಾ ಸಿನಿಮಾ ರಿಲೀಸ್
ಬೇರೆ ಭಾಷೆಗಳಲ್ಲಿ ಶ್ವಾನವನ್ನು ಇಟ್ಟುಕೊಂಡಿ ಸಿನಿಮಾ ಮಾಡಿದ ಉದಾಹರಣೆಗಳಿವೆ. ಕೆಲವು ಸಿನಿಮಾಗಳು ಪ್ರೇಕ್ಷಕರಿಗೆ ಇಷ್ಟನೂ ಆಗಿದೆ. ಅಷ್ಟಕ್ಕೂ 777 ಚಾರ್ಲಿ ಟ್ರೈಲರ್‌ನಲ್ಲಿ ಎರಡು ಪ್ರಮುಖ ಪಾತ್ರಗಳಿವೆ. ಒಂದು ಧರ್ಮ.. ಇನ್ನೊಂದು ಚಾರ್ಲಿ.. ಈ ಎರಡು ಪಾತ್ರಗಳು ಇಡೀ ಸಿನಿಮಾದಲ್ಲಿ ನಿಮ್ಮನ್ನು ನಗಿಸುತ್ತವೆ, ಅಳಿಸುತ್ತವೆ. ಅಂದ್ಹಾಗೆ ಇಲ್ಲಿ ಧರ್ಮನಾಗಿ ರಕ್ಷಿತ್ ಶೆಟ್ಟಿ ನಟಿಸಿದ್ದಾರೆ. ಶ್ವಾನಕ್ಕೆ ಚಾರ್ಲಿ ಅಂತ ಹೆಸರಿಟ್ಟಿದೆ ಚಿತ್ರತಂಡ. ಇವರಿಬ್ಬರ ನಡುವಿನ ಈ ಸಂಬಂಧವೇ ಸಿನಿಮಾ ಕಥೆ.

ಕಿರಣ್ ರಾಜ್ '777 ಚಾರ್ಲಿ' ಸಿನಿಮಾವನ್ನು ನಿರ್ದೇಶಿಸಿದ್ದು, ಈಗಾಗಲೇ ಕನ್ನಡ, ತೆಲುಗು, ತಮಿಳು, ಹಿಂದಿ ಭಾಷೆಯಲ್ಲಿ ಟ್ರೈಲರ್ ಬಿಡುಗಡೆಯಾಗಿದೆ. ಶ್ವಾನದ ಕಥೆ ಯುನಿವರ್ಸಲ್ ಆಗಿರುವುದರಿಂದ ಕನ್ನಡದ ಮತ್ತೊಂದು ಸಿನಿಮಾ ಐದು ಭಾಷೆಗಳಲ್ಲಿ ಬಿಡುಗಡೆ ಮಾಡಲು ಚಿತ್ರತಂಡ ನಿರ್ಧರಿಸಿದೆ. ಈಗಾಗಲೇ ರಕ್ಷಿತ್ ಶೆಟ್ಟಿ 'ಅವನೇ ಶ್ರೀಮನ್ನಾರಾಯಣ' ಸಿನಿಮಾ ಮೂಲಕ ಪ್ಯಾನ್ ಇಂಡಿಯಾ ಪ್ರಯೋಗ ಮಾಡಿದ್ದಾರೆ. ಹೀಗಾಗಿ '777 ಚಾರ್ಲಿ'ಯನ್ನು ವ್ಯವಸ್ಥಿತವಾಗಿ ಬಿಡುಗಡೆ ಮಾಡಲು ನಿರ್ಧರಿಸಿದೆ.
'777 ಚಾರ್ಲಿ' ದಕ್ಷಿಣದ ತಾರೆಯರು ಸಾಥ್
'777 ಚಾರ್ಲಿ' ಟ್ರೈಲರ್‌ಗೆ ದಕ್ಷಿಣದ ತಾರೆಯರು ಸಾಥ್ ನೀಡಿದ್ದಾರೆ. ಸಾಯಿ ಪಲ್ಲವಿ, ಲಕ್ಷ್ಮಿ ಮಂಜು, ರಾಣಾ ದಗ್ಗುಬಾಟಿ ಹಾಗೂ ವಿಕ್ಟರಿ ವೆಂಕಟೇಶ್ ತೆಲುಗಿನಲ್ಲಿ ಟ್ರೈಲರ್ ಲಾಂಚ್ ಮಾಡಿದ್ದಾರೆ. ಇನ್ನೊಂದು ಕಡೆ ತಮಿಳಿನಲ್ಲಿ ಧನುಷ್ '777 ಚಾರ್ಲಿ' ಸಿನಿಮಾದ ಟ್ರೈಲರ್ ಬಿಡುಗಡೆ ಮಾಡಿದ್ದು, ಮಲಯಾಳಂನಲ್ಲಿ ಟೊವಿನೋ ಥಾಮಸ್, ಆಸಿಫ್ ಅಲಿ ಸೇರಿದಂತೆ ಮಾಲಿವುಡ್‌ನ ಸ್ಟಾರ್‌ಗಳು ಡಿಜಿಟಲ್ ಆಗಿ ಟ್ರೈಲರ್ ರಿಲೀಸ್ ಮಾಡಿದ್ದಾರೆ.

ಇನ್ನು ಸಿನಿಮಾದಲ್ಲಿ ರಕ್ಷಿತ್ ಶೆಟ್ಟಿ ಹಾಗೂ ಚಾರ್ಲಿ ಜೊತೆ ಸಂಗೀತಾ ಶೃಂಗೇರಿ, ರಾಜ್ ಬಿ ಶೆಟ್ಟಿ, ದಾನಿಶ್ ಸೇಠ್ ತಮಿಳು ನಟ ಬಾಬಿ ಸಿಂಹ ವಿಶೇಷ ಪಾತ್ರದಲ್ಲಿ ನಟಿಸಿದ್ದಾರೆ. ಶ್ವಾನ ಪ್ರಿಯರಿಗೆ '777 ಚಾರ್ಲಿ' ಇಷ್ಟ ಆಗಲಿದ್ದು, ಸಿನಿಮಾ ಎಲ್ಲಾ ಭಾಷೆಯಲ್ಲೂ ಹಿಟ್ ಆಗುತ್ತೆ ಎಂದು ನಿರೀಕ್ಷೆ ಮಾಡಲಾಗುತ್ತಿದೆ.


Click it and Unblock the Notifications











