ನವರಸಗಳನ್ನು ಆಧರಿಸಿದ '9 ಸುಳ್ಳು ಕಥೆಗಳು': ಶಿವಣ್ಣ-ರಿಷಬ್ ಶೆಟ್ಟಿ ಸಾಥ್!

ಹೊಸ ಹೊಸ ಕಥೆಗಳು. ಹೊಸ ಹೊಸ ಆಲೋಚನೆಗಳು ಇರುವ ಸಿನಿಮಾ ಬರಬೇಕು. ಆಗಲೇ ಚಿತ್ರರಂಗ ಪ್ರೇಕ್ಷಕರಲ್ಲಿ ಹೊಸ ಅಭಿರುಚಿಯನ್ನು ಬೆಳೆಸಲು ಸಾಧ್ಯ. ಇಂತಹ ಪ್ರಯತ್ನಕ್ಕೆ ಸಾದಾ ಮುಂದಾಗೋರು ಹೊಸಸ ಪ್ರತಿಭೆಗಳೇ. ಇಂತಹದ ಒಂದು ಪ್ರಯತ್ನವೇ '9 ಸುಳ್ಳು ಕಥೆಗಳು'.

ರಂಗಭೂಮಿಯಲ್ಲಿ ಹಲವು ವರ್ಷಗಳಿಂದ ದುಡಿಯುತ್ತಿರುವ ಮಂಜುನಾಥ್ ಮುನಿಯಪ್ಪ '9 ಸುಳ್ಳು ಕಥೆಗಳು' ಸಿನಿಮಾ ಸೂತ್ರಧಾರ. ಹಾಗೇ ಈ ಸಿನಿಮಾವನ್ನು ನಿರ್ಮಾಣ ಮಾಡಿರೋದು ಕೂಡ ಇವರೇ. ಸದ್ಯ ಟೈಟಲ್‌ನಿಂದಲೇ ಈ ಸಿನಿಮಾ ಎಲ್ಲರ ಗಮನ ಸೆಳೆಯುತ್ತಿದೆ.

'9 ಸುಳ್ಳು ಕಥೆಗಳು' ಸಿನಿಮಾದಲ್ಲಿ ನವರಸಗಳನ್ನು ಆಧರಿಸಿದ ಒಂಭತ್ತು ಕಥೆಗಳಿವೆ. ನೈಜ ಘಟನೆಗಳನ್ನಿಟ್ಟುಕೊಂಡು ಈ ಸಿನಿಮಾದ ಕಥೆಯನ್ನು ಹೆಣೆಯಾಗಿದೆ. ಹೀಗಾಗಿ ಕಥೆ ವಿಭಿನ್ನ ಅನ್ನೋದನ್ನು ನಿಸ್ಸಂದೇಹವಾಗಿ ಹೇಳಬಹುದು. ವಿಭಿನ್ನ ಕಥೆಯನ್ನು ಆಧರಿಸಿದ ಸಿನಿಮಾಗಳ ಸಾಲಿನಲ್ಲಿ ಈ ಸಿನಿಮಾ ನಿಲ್ಲಬಹುದು ಎಂಬ ನಿರೀಕ್ಷೆ ಚಿತ್ರತಂಡದ್ದು.

ಸಾಕಷ್ಟು ರಂಗಭೂಮಿ ಕಲಾವಿದರೇ ಸೇರಿಕೊಂಡು '9 ಸುಳ್ಳು ಕಥೆಗಳು' ಸಿನಿಮಾವನ್ನು ನಿರ್ಮಾಣ ಮಾಡಲಾಗಿದೆ. ಸಿನಿಮಾರಂಗ ಹಾಗೂ ರಂಗಭೂಮಿ ಎರಡೂ ಕ್ಷೇತ್ರದಲ್ಲೂ ಚಿರಪರಿಚಿತರಾಗಿರುವ ವಿನಾಯಕ್ ಜೋಷಿ ಈ ಸಿನಿಮಾದ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಸಾಹಿತ್ಯ ಪ್ರೇಮಿಯಾಗಿ ವಿನಾಯಕ್ ಜೋಷಿ ಕಾಣಿಸಿಕೊಂಡಿದ್ದಾರೆ.

ರಿಷಬ್ ಶೆಟ್ಟಿ ಮೊದಲ ಬಾರಿಗೆ '9 ಸುಳ್ಳು ಕಥೆಗಳು' ಸಿನಿಮಾಗಾಗಿಯೇ ಹಾಡಿದ್ದಾರೆ. ಕನ್ನಡದ ಕುರಿತಾದ ಹಾಡು ಈಗಾಗಲೇ ಸಂಗೀತ ಪ್ರಿಯರಿಗೆ ತುಂಬಾನೇ ಇಷ್ಟ ಆಗಿದೆ. ಮತ್ತೊಂದು ವಿಶೇಷ ಅಂದರೆ, ಸೆಂಚುರಿ ಸ್ಟಾರ್ ಶಿವರಾಜಕುಮಾರ್ ಈ ಸಿನಿಮಾದ ಟ್ರೈಲರ್‌ಗೆ ಧ್ವನಿ ನೀಡಿರೋದು ಈ ಚಿತ್ರಗೆ ಆನೆ ಬಲ ಬಂದಂತಾಗಿದೆ.

9 sullu Kathegalu Kannada Movie Will Be Releasing On September 9th

ಪ್ರಮೋದ್ ಶೆಟ್ಟಿ, ವಿನಾಯಕ ಜೋಶಿ, ಕೃಷ್ಣ ಹೆಬ್ಬಾಳೆ, ಸಕೃತ ವಾಗ್ಲೆ, ಕರಿಸುಬ್ಬು, ನಂದಗೋಪಾಲ್, ಲಕ್ಷ್ಮೀ ಚಂದ್ರಶೇಖರ್, ಶ್ರೀನಿವಾಸಪ್ರಭು, ಸುನೇತ್ರ ಪಂಡಿತ್, ಸುಪ್ರಿತಾ ಶೆಟ್ಟಿ, ಸುಂದರ್ ವೀಣಾ, ವೀಳ್ಯಾ ರಾಘವೇಂದ್ರ, ಜಯಲಕ್ಷ್ಮಿ ಪಾಟೀಲ್ ಸೇರಿದಂತೆ ನೂರಕ್ಕೂ ಅಧಿಕ ಕಲಾವಿದರು ಈ ಚಿತ್ರದ ತಾರಾಬಳಗದಲ್ಲಿದ್ದಾರೆ. ಪ್ರವೀಣ್ - ಪ್ರದೀಪ್ ಸಿನಿಮಾಗೆ ಸಂಗೀತ ನೀಡಿದ್ದಾರೆ. ಅಲ್ಲದೆ ಪರಮೇಶ್ ಛಾಯಾಗ್ರಹಣದ ಜೊತೆ ಹಾಡುಗಳನ್ನೂ ಬರೆದಿದ್ದಾರೆ.

9 sullu Kathegalu Kannada Movie Will Be Releasing On September 9th

More from Filmibeat

English summary
9 sullu Kathegalu Kannada Movie Will Be Releasing On September 9th, Know More.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X