ಅಭಿಮಾನಿ ಮೇಲೆ ಹಲ್ಲೆ ಮಾಡಿದ ಆರೋಪ: ಧನ್ವೀರ್ ವಿರುದ್ಧ ದೂರು ದಾಖಲಿಸಿದ ಫ್ಯಾನ್

ಸ್ಯಾಂಡಲ್‌ವುಡ್ ನಟ ಧನ್ವೀರ್ ಹಾಗೂ ಶ್ರೀಲೀಲಾ ಅಭಿನಯದ ಸಿನಿಮಾ 'ಬೈ ಟೂ ಲವ್​' ಇಂದು(ಫೆ 18) ರಿಲೀಸ್ ಆಗಿದೆ. ಕಳೆದೊಂದು ವಾರದಿಂದ ಇಡೀ ಚಿತ್ರತಂಡ ಸಿನಿಮಾ ಬಗ್ಗೆ ಸಿಕ್ಕಾಪಟ್ಟೆ ಪ್ರಚಾರ ಮಾಡಿದೆ. ಹಗಲು -ರಾತ್ರಿ ಎನ್ನದೆ ಚಿತ್ರತಂಡ ಸಿನಿಮಾ ಪ್ರಚಾರದಲ್ಲಿ ಭಾಗಿಯಾಗಿತ್ತು. ಕೊನೆಗೆ ಇಂದು ಸಿನಿಮಾ ರಿಲೀಸ್ ಆಗಿದ್ದು, ಈ ವಾರ ಮುಗಿಯುವುದರೊಳಗೆ ಸಿನಿಮಾ ಬಾಕ್ಸಾಫೀಸ್‌ ಗಳಿಕೆಯಲ್ಲಿ ಗೆದ್ದಿದ್ದೆಯಾ ಸೋತಿದೆಯಾ ಎಂಬುದು ಗೊತ್ತಾಗಲಿದೆ.

ಧನ್ವೀರ್ ಸಿನಿಮಾ 'ಬೈ ಟೂ ಲವ್​' ಬಿಡುಗಡೆಯಾಗುತ್ತಿದ್ದಂತೆ ನಟ ವಿವಾದದಲ್ಲಿ ಸಿಕ್ಕಿಕೊಂಡಿದ್ದಾರೆ. ಧನ್ವೀರ್ ವಿರುದ್ಧ ಅಭಿಮಾನಿಯೊಬ್ಬ ದೂರು ದಾಖಲಿಸಿದ್ದಾನೆ. ಸಿನಿಮಾ ಬಿಡುಗಡೆಯಾದ ಸಂಭ್ರಮದಲ್ಲಿರಬೇಕಾಗಿದ್ದ ನಟ ವಿವಾದದ ಸುಳಿಗೆ ಸಿಲುಕಿದಂತಾಗಿದೆ. ತನ್ನ ವಿರುದ್ಧ ಅಭಿಮಾನಿ ಮಾಡಿದ ಆರೋಪಕ್ಕೆ ಇದೂವರೆಗೂ 'ಬೈಟು ಲವ್' ನಟ ಧನ್ವೀರ್ ಪ್ರತಿಕ್ರಿಯೆ ನೀಡಿಲ್ಲ. ಅಷ್ಟಕ್ಕೂ ಧನ್ವೀರ್ ಮೇಲೆ ಅಭಿಮಾನಿ ಮಾಡಿದ ಆರೋಪವೇನು ಅನ್ನುವುದನ್ನು ತಿಳಿಯಲು ಮುಂದೆ ಓದಿ.

ಅಭಿಮಾನಿ ಮೇಲೆ ಧನ್ವೀರ್ ಹಲ್ಲೆ ಆರೋಪ

'ಬೈ ಟೂ ಲವ್​' ಸಿನಿಮಾ ಬಿಡುಗಡೆಯಾದ ಖುಷಿಯಲ್ಲಿ ನಟ ಧನ್ವೀರ್ ಇರಬೇಕಿತ್ತು. ತನ್ನ ಸಿನಿಮಾ ಪ್ರಚಾರಕ್ಕೆ ಅಂತ ಬೆಳಗ್ಗೆಯಿಂದಲೇ ವೇಳಾಪಟ್ಟಿ ನಿಗದಿ ಪಡಿಸಿಕೊಂಡಿದ್ದ ಧನ್ವೀರ್‌ಗೆ ಅಭಿಮಾನಿ ದೂರು ದಾಖಲಿಸಿ ಶಾಕ್ ಕೊಟ್ಟಿದ್ದಾನೆ. ನಟ ಧನ್ವೀರ್ ಬೌನ್ಸರ್ ಜೊತೆ ಸೇರಿಕೊಂಡು ಅಭಿಮಾನಿ ಮೇಲೆ ಹಲ್ಲೆ ನಡೆಸಿದ ಆರೋಪವನ್ನು ಧನ್ವೀರ್ ಎದುರಿಸುತ್ತಿದ್ದಾರೆ. ಇದರಿಂದ ನಟ ಧನ್ವೀರ್‌ಗೆ ಸಂಕಷ್ಟ ಎದುರಾಗುವ ಸಾಧ್ಯತೆ ಇದೆ.

A Fan filed complaint against By Two Love movie Starrer Dhanveer for assault

ಧನ್ವೀರ್ ಹಾಗೂ ಶ್ರೀಲೀಲಾ 'ಬೈ ಟೂ ಲವ್​' ಸಿನಿಮಾದಲ್ಲಿ ಜೊತೆಯಾಗಿ ನಟಿಸಿದ್ದಾರೆ. ಯುವ ಜನಾಂಗದ ಪ್ರೀತಿ ಹಾಗೂ ಮದುವೆ ಮೇಲಿನ ಅಭಿಪ್ರಾಯಗಳನ್ನು ಇಟ್ಟುಕೊಂಡು ನಿರ್ದೇಶಕ ಹರಿ ಸಂತೋಷ್ ಕಥೆ ಹೆಣೆದಿದ್ದಾರೆ. 'ಬಜಾರ್​' ಸಿನಿಮಾದ ಮೂಲಕ ಸ್ಯಾಂಡಲ್​ವುಡ್​ಗೆ ಮಾಸ್ ಹೀರೊ ಅವತಾರದಲ್ಲಿ ಎಂಟ್ರಿ ಕೊಟ್ಟಿದ್ದರು. ಅಲ್ಲಿಂದ ಮಾಸ್ ಲುಕ್‌ನಲ್ಲಿ ಕಾಣಿಸಿಕೊಳ್ಳುತ್ತಿದ್ದವರು ಇದೇ ಮೊದಲ ಬಾರಿಗೆ ಲವರ್ ಬಾಯ್ ಆಗಿ ಕಾಣಿಸಿಕೊಂಡಿದ್ದಾರೆ. ಈ ಮಧ್ಯೆನೇ ವಿವಾದವನ್ನು ಮೈ ಮೇಲೆ ಎಳೆದುಕೊಂಡಿದ್ದಾರೆ.

ಘಟನೆ ನಡೆದಿದ್ದು ಹೇಗೆ?

'ಬೈಟೂ ಲವ್' ಸಿನಿಮಾ ಬಿಡುಗಡೆ ಇದ್ದಿದ್ದರಿಂದ ನಿನ್ನೆ (ಫೆ 17) ರಾತ್ರಿಯಿಂದಲೇ ಸಿದ್ಧತೆಗಳು ನಡೆಯುತ್ತಿದ್ದವು. ಹೀಗಾಗಿ ಧನ್ವೀರ್ ಬೆಂಗಳೂರಿನ ಪ್ರಮುಖ ಚಿತ್ರಮಂದಿರ ಅನುಪಮಾ ಚಿತ್ರಮಂದಿರದ ಬಳಿ ತಡ ರಾತ್ರಿ ವಿಸಿಟ್ ಹಾಕಿದ್ದರು. ಚಂದ್ರಶೇಖರ್ ಎಂಬ ಯುವಕ ಸ್ನೇಹಿತನೊಂದಿಗೆ ಊಟ ಮುಗಿಸಿ ಹಿಂದಿರುಗುತ್ತಿದ್ದಾಗ, ಫೋಟೊ ತೆಗೆಸಿಕೊಳ್ಳಲು ಮುಂದಾಗಿದ್ದರು. ಈ ವೇಳೆ ಧನ್ವೀರ್ ಫೋಟೊ ತೆಗೆಸಿಕೊಳ್ಳಲು ಹಿಂದೇಟು ಹಾಕಿದ್ದರು. ಇದು ಅಭಿಮಾನಿ ಚಂದ್ರಶೇಖರ್‌ಗೆ ಬೇಸರ ತರಿಸಿತ್ತು.

A Fan filed complaint against By Two Love movie Starrer Dhanveer for assault

ಧನ್ವೀರ್ ಸೆಲ್ಫಿ ಕೊಡಲಿಲ್ಲ ಎಂಬ ಬೇಸರದಲ್ಲಿ ಚಂದ್ರಶೇಖರ್ ಅಸಮಧಾನ ಹೊರಹಾಕಿದ್ದರು. ಇದರಿಂದ ಕೋಪಗೊಂಡ ಧನ್ವೀರ್ ಅಭಿಮಾನಿ ಮೇಲೆ ಹಲ್ಲೆ ಮಾಡಿದ್ದಾರೆ ಎನ್ನಲಾಗಿದೆ. ಧನ್ವೀರ್ ಜೊತೆ ಅವರ ಬೌನ್ಸರ್ಸ್‌ ಕೂಡ ಹಲ್ಲೆ ಮಾಡಿದ್ದರು ಎಂದು ಚಂದ್ರಶೇಖರ್ ಬೆಂಗಳೂರಿನ ಉಪ್ಪಾರ ಪೇಟೆ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. ಚಂದ್ರಶೇಖರ್ ನೀಡಿದ ದೂರನ್ನು ಉಪ್ಪಾರಪೇಟೆ ಪೊಲೀಸರು ದಾಖಲಿಸಿಕೊಂಡಿದ್ದು, ತನಿಖೆ ಆರಂಭಿಸಲಿದ್ದಾರೆ. ಕೇಸ್ ದಾಖಲಾದ ಬಳಿಕ ಧನ್ವೀರ್ ಯಾವುದೇ ಪ್ರತಿಕ್ರಿಯೆ ನೀಡಿಲ್ಲ.

More from Filmibeat

English summary
A Fan filed complaint against By Two Love movie Starrer Dhanveer for assault. Chandrashekar a Dhanveer fan register case against him in upparpete police station.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X