ಹೇಗಿದ್ದ ರನ್ಯಾ ರಾವ್ ಹೇಗಾದರು, ಜೈಲು ಸೇರಿದ ಎರಡೇ ದಿನಕ್ಕೆ ಸೊರಗಿದ ಸುಂದರಿ..!

ಹಣ ಕಂಡರೆ ಹೆಣ ಕೂಡ ಬಾಯಿ ಬೀಡುವ ಕಾಲ ಇದು. ಈ ಕಾಲದಲ್ಲಿ ದುಡ್ಡೊಂದಿದ್ದರೆ ಸಾಕು ಎಲ್ಲವನ್ನೂ ಪಡೆದುಕೊಳ್ಳಬಹುದು ಅನ್ನುವ ಮನಸ್ಥಿತಿ ಅನೇಕರದ್ದು. ಚಿತ್ರರಂಗ ಕೂಡ ಇದರಿಂದ ಹೊರತಾಗಿಲ್ಲ.

ದುಡ್ಡಿಗಾಗಿ ಅನೇಕರು ಇಲ್ಲಿ ಆತ್ಮ ಸಾಕ್ಷಿಯನ್ನು ಮಾರಿಕೊಳ್ಳುತ್ತಾರೆ. ದೀಢೀರ್ ಶ್ರೀಮಂತರಾಗಲು ಅಡ್ಡದಾರಿಯನ್ನು ಹಿಡಿಯುತ್ತಾರೆ. ಮೋಸ, ಸುಲಿಗೆ, ವಂಚನೆಯ ಪ್ರಕರಣದಲ್ಲಿ ಕೂಡ ಸಿಲುಕಿಕೊಳ್ಳುತ್ತಾರೆ. ಇದಕ್ಕೆ ಭಾರತೀಯ ಚಿತ್ರರಂಗದಲ್ಲಿ ರಾಶಿ ರಾಶಿ ಉದಾಹರಣೆಗಳಿವೆ. ಈ ಸಾಲಿಗೆ ಸೇರಿಕೊಂಡಿರುವ ಮಾಣಿಕ್ಯ ಚಿತ್ರದ ನಾಯಕಿ ರನ್ಯಾ ರಾವ್ ಸದ್ಯ ಗೋಲ್ಡ್ ಸ್ಮಗ್ಲಿಂಗ್ ಪ್ರಕರಣದಲ್ಲಿ ಜೈಲು ಸೇರಿದ್ದಾರೆ. ಹೊರ ಬರಲು ನಾನಾ ಕಸರತ್ತು ಮಾಡುತ್ತಿದ್ದಾರೆ. ಜಾಮೀನಿಗೆ ಅರ್ಜಿ ಸಲ್ಲಿಸಿದ್ದಾರೆ.

A photo of actress Ranya Rao from jail arrested in a gold smuggling case goes viral

ಕಿಚ್ಚ ಸುದೀಪ್ ಸಿನಿಮಾ ನಾಯಕಿ ಕಸ್ಟಮ್ಸ್ ಅಧಿಕಾರಿಗಳ ವಶಕ್ಕೆ

ಇಂದು { ಶುಕ್ರವಾರ } ರನ್ಯಾ ಭವಿಷ್ಯ ನಿರ್ಧಾರವಾಗಲಿದೆ. ಆರೋಪಿಯನ್ನು ತಮ್ಮ ವಶಕ್ಕೆ ನೀಡಬೇಕೆಂದು ಆದಾಯ ಗುಪ್ತಚರ ನಿರ್ದೇಶನಾಲಯ { DRI } ನಿನ್ನೆ ವಾದ ಮಾಡಿದ ಹಿನ್ನೆಲೆ ಆರ್ಥಿಕ ಅಪರಾಧಗಳ ನ್ಯಾಯಾಲಯ ಇಂದು ತೀರ್ಪನ್ನು ಕಾಯ್ದಿರಿಸಿದೆ.

ಇನ್ನು ಜೈಲು ಜೀವನ ಎಲ್ಲರಿಗೆ ಗೊತ್ತಿರುವಂತೆ ನರಕಯಾತನೆ. ನಿಜಾ. ಸೆಲೆಬ್ರಿಟಿಗಳಿಗೆ, ರಾಜಕಾರಣಿಗಳಿಗೆ ಈ ಹಿಂದೆ ಜೈಲಿನಲ್ಲಿ ರಾಜಾತಿಥ್ಯ ಸಿಕ್ಕ ಉದಾಹರಣೆಗಳಿವೆ. ಆದರೆ ಎಲ್ಲರಿಗೆ ಜೈಲುವಾಸ ಒಗ್ಗಲ್ಲ. ರಾಜಾತಿಥ್ಯದ ಭಾಗ್ಯವೂ ಕೂಡ ಸಿಗಲ್ಲ. ಇದಕ್ಕೆ ರನ್ಯಾ ರಾವ್ ಅವರ ಸದ್ಯದ ಪರಿಸ್ಥಿತಿಯೇ ಅತ್ಯುತ್ತಮವಾದ ಕೈಗನ್ನಡಿ.

ಹೌದು ಹೊರಗಡೆ ವರ್ಷಕ್ಕೆ 27 ಬಾರಿ ಬೆಂಗಳೂರಿಂದ ದುಬೈಗೆ ಹಾರಾಡಿಕೊಂಡು ನೆಮ್ಮದಿಯಾಗಿದ್ದ ರನ್ಯಾ ರಾವ್‌ಗೆ ಸದ್ಯ ಜೈಲಿನ ಊಟ ಸೇರುತ್ತಿಲ್ಲ. ಕಣ್ಣಿಗೆ ನಿದ್ದೆ ಬರುತ್ತಿಲ್ಲ. ಹೀಗಾಗಿಯೇ ಜೈಲು ಸೇರಿದ ಎರಡೇ ದಿನಕ್ಕೆ ರನ್ಯಾ ರಾವ್ ಸೊರಗಿ ಹೋಗಿದ್ದಾರೆ.ನಿದ್ದೆ ಇಲ್ಲದೇ ರನ್ಯಾ ಕಣ್ಣುಗಳು ಊದಿಕೊಂಡಿವೆ. ಕಣ್ಣುಗಳ ಸುತ್ತ ಮುತ್ತ ಡಾರ್ಕ್ ಸರ್ಕಲ್ ಹೆಚ್ಚಾಗಿದೆ. ಸದ್ಯ ಜೈಲಿಂದ ತೇಲಿಕೊಂಡು ಬಂದ ಈ ಫೋಟೊ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ. ರನ್ಯಾ ಪ್ರಕರಣ ರಾಷ್ಟ್ರ ಮಟ್ಟದಲ್ಲಿ ಚರ್ಚೆಗೀಡಾಗಿದೆ. ಈ ಮೂಲಕ ಮಾಡಿದ್ದ ಮೂರು ಮತ್ತೊಂದು ಚಿತ್ರದಿಂದ ಸಿಗದ ಹೆಸರು ಈ ಪ್ರಕರಣದ ಮೂಲಕ ರನ್ಯಾಗೆ ಸಿಕ್ಕಿದೆ. ಚಿನ್ನದ ಕಳ್ಳಿ ಎಂಬ ಪಟ್ಟವೂ ಕೂಡ ದೊರಕಿದೆ.

ಇನ್ನುಳಿದಂತೆ ರನ್ಯಾ ರಾವ್ ಅವರನ್ನು ರಾಷ್ಟ್ರೀಯ ಭದ್ರತಾ ದೃಷ್ಟಿಯಿಂದ ಕಸ್ಟಡಿಗೆ ನೀಡಬೇಕು ಎಂದು ನಿನ್ನೆ ಡಿಆರ್‌ಐ ಪರ ವಕೀಲರು ನ್ಯಾಯಾಲಯದಲ್ಲಿ ವಾದ ಮಾಡಿದ್ದಾರೆ. ಬೆಂಗಳೂರಿನಿಂದ ದುಬೈವರೆಗೆ ರನ್ಯಾಗೆ ಸಂಪರ್ಕ ಇದೆ ಈ ಹಿನ್ನೆಲೆ ಜಾಮೀನು ನೀಡಿದರೆ ಈ ಪ್ರಕರಣದಲ್ಲಿರುವ ಉಳಿದ ಆರೋಪಿಗಳು ಬಚಾವಾಗುತ್ತಾರೆ ಎಂದು ಹೇಳಿದ್ದಾರೆ. ಈ ತರಹದ ಪ್ರಕರಣದಲ್ಲಿ 40 ದಿನಗಳ ಕಾಲ ಆರೋಪಿಯನ್ನು ಕಸ್ಟಡಿಗೆ ತೆಗೆದುಕೊಳ್ಳುವ ಅವಕಾಶ ಇದೆ ಎಂಬ ಅಂಶವನ್ನು ಉಲ್ಲೇಖಿಸಿ ಡಿಆರ್‌ಐ ಅಧಿಕಾರಿಗಳು ಮುಚ್ಚಿದ ಲಕೋಟೆಯಲ್ಲಿ ಕೋರ್ಟ್‌ಗೆ ದಾಖಲೆಯನ್ನು ಸಲ್ಲಿಸಿದ್ದಾರೆ. ರನ್ಯಾ ಅವರ ಸುತ್ತ ದೊಡ್ಡ ಸಿಂಡಿಕೇಟ್ ಇದೆ, ಆ ಸಿಂಡಿಕೇಟ್ ಸದಸ್ಯರನ್ನು ಪತ್ತೆ ಮಾಡಲು ಕಸ್ಟಡಿಗೆ ನೀಡಬೇಕೆಂದು ಮನವಿಯನ್ನು ಮಾಡಿದ್ದಾರೆ.

ಅಂದ್ಹಾಗೇ 1993ರಲ್ಲಿ ಚಿಕ್ಕಮಗಳೂರಿನಲ್ಲಿ ಹುಟ್ಟಿದ್ದ ರನ್ಯಾ,ಕೇವಲ ಮೂರು ತಿಂಗಳ ಹಿಂದೆಯಷ್ಟೇ ಮದುವೆಯಾಗಿದ್ದರು. ಬೆಂಗಳೂರಿನ ತಾಜ್ ವೆಸ್ಟ್‌ ಎಂಡ್‌ನಲ್ಲಿ ಇವರ ಮದುವೆ ಅದ್ಧೂರಿಯಾಗಿ ನಡೆದಿತ್ತು. ಇವರ ಪತಿ ಜತಿನ್ ಹುಕ್ಕೇರಿ ಬೆಂಗಳೂರಿನ ಪ್ರಸಿದ್ದ ಆರ್ಕಿಟೆಕ್ಟ್‌ಗಳಲ್ಲಿ ಒಬ್ಬರು.

More from Filmibeat

Read more about: arrest jail actress
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X