»   » ಕಿಚ್ಚ ಸುದೀಪ್ ಗಾಗಿ ಅಭಿಮಾನಿ ಬರೆದಿರುವ ಅಭಿಮಾನದ ಕವಿತೆ ಇದು.!

ಕಿಚ್ಚ ಸುದೀಪ್ ಗಾಗಿ ಅಭಿಮಾನಿ ಬರೆದಿರುವ ಅಭಿಮಾನದ ಕವಿತೆ ಇದು.!

Posted By:
Subscribe to Filmibeat Kannada

'ಅಭಿನಯ ಚಕ್ರವರ್ತಿ' ಕಿಚ್ಚ ಸುದೀಪ್ ಅಭಿಮಾನಿಗಳ ಪಾಲಿಗೆ ಆರಾಧ್ಯ ದೈವ. ಬರೀ ಹೆಸರಿಗೆ ಮಾತ್ರ 'ಆರಾಧ್ಯ ದೈವ' ಅಲ್ಲ... ಕಿಚ್ಚ ಸುದೀಪ್ ರವರನ್ನ ಸ್ವತಃ ದೇವರಂತೆ ಪೂಜಿಸುವ ಅಪ್ಪಟ 'ಭಕ್ತ'ರೂ ಇದ್ದಾರೆ.

ಬೆಳ್ಳಿಪರದೆ ಮೇಲೆ ಕಿಚ್ಚ ಸುದೀಪ್ ರವರ ನಟನೆ ನೋಡಿ ಫಿದಾ ಆಗಿರುವವರ ಅಸಂಖ್ಯಾತ ಅಭಿಮಾನಿಗಳ ಪೈಕಿ 'ಕುಮಾರ್ ಗಂಗಾಧರ್' ಎಂಬುವವರೂ ಒಬ್ಬರು. 'ನಲ್ಲ' ಸುದೀಪ್ ಮೇಲೆ ಅಪಾರ ಅಭಿಮಾನ ಹೊಂದಿರುವ ಕುಮಾರ್ ಗಂಗಾಧರ್, ಸುದೀಪ್ ಬಗ್ಗೆ ಬರೆದಿರುವ ಅಭಿಮಾನದ ಕವಿತೆ ಇದು...

a-poem-on-kiccha-sudeep-by-his-hardcore-fan

ನಿನ್ನಲ್ಲಿ 'ಕಿಚ್ಚು' ಇದೆ, 'ದೀಪ'ವು ಇದೆ
ತಲೆ ಎತ್ತಿ ನಿಂತರೆ ನೀ ಆಗಸದೆತ್ತರ
ತಲೆ ತಗ್ಗಿಸಿದರೆ ಭೂಮಿಗೆ ಹತ್ತಿರ
ಕರುಣೆಯ ಕಟ್ಟೆ ಒಡೆದರೆ, ನೀನೊಬ್ಬ ಕರುಣಾಮಯಿ
ಕ್ರೋಧದಿ ಗುಡುಗಿದರೆ, ಜ್ವಾಲಾಮುಖಿ!

ಉದ್ದವಾದ ಕೈಗಳಲ್ಲಿ ನೀ ಬಾಚಿ ಅಪ್ಪಿದೆ ಎಷ್ಟೋ ಜನರನ್ನು
ದಾರಿಯ ಕಾಣದೆ, ಗೊಂದಲದಿ ಸಿಲುಕಿದವರಿಗೆ, ನೀ ದೃಷ್ಟಿಯಾದೆ
ನಿನ್ನ ಸಾಧನೆಯ ಗುರಿಯನ್ನು ಮುಡಿಗೇರಿಸಿಕೊಳ್ಳದೆ
ಸಾಮಾನ್ಯರಲ್ಲಿ, ಸಾಮಾನ್ಯನಾದೆ

ಅಭಿನಯ ಚಕ್ರವರ್ತಿ ನೀನೆನ್ನುವರು ಜನರು
ಇಲ್ಲ ನಾನಿನ್ನೂ ಕಲಿಕೆಯ ಹುಡುಗನೆಂದು ನೀನೆನ್ನುವೆ
ಹೊಸ ಹೊಸ ಪಾತ್ರಗಳಲ್ಲಿ, ನಮ್ಮ ಮನರಂಜಿಸುತ್ತಿರುವೆ
ಕರುನಾಡಿನ ಪಾಲಿಗೆ, ನೀನೆಂದು ನಂದಾ ದೀಪ,
ನಮ್ಮೆಲ್ಲರ 'ಕಿಚ್ಚ'ಸು'ದೀಪ'

ಕುಮಾರ್ ಗಂಗಾಧರ್ ಎಂಬುವರು ಬರೆದಿರುವ ಈ ಕವಿತೆಯನ್ನು ಕಿಚ್ಚ ಸುದೀಪ್ ಅಭಿಮಾನಿಗಳು ಟ್ವಿಟ್ಟರ್ ನಲ್ಲಿ ಶೇರ್ ಮಾಡಿದ್ದರು.

ಅದನ್ನ ಓದಿದ ಬಳಿಕ, ''ಇಂತಹ ಅದ್ಭುತ ಪದಪುಂಜಕ್ಕೆ ನಾನು ಅರ್ಹನಿದ್ದೇನೋ, ಇಲ್ಲವೋ ಗೊತ್ತಿಲ್ಲ. ಆದ್ರೆ, ಧನ್ಯವಾದಗಳು'' ಎಂದು ಸುದೀಪ್ ಟ್ವೀಟ್ ಮಾಡಿದ್ದಾರೆ.[ಇದೇ ಕಾರಣಕ್ಕೆ ನೋಡಿ ಕಿಚ್ಚ ಸುದೀಪ್ ಅಂದ್ರೆ ಪ್ರೇಮ್ ಗೆ ಬಲು'ಪ್ರಿಯ'.!]

English summary
Take a look at the Poem on Kannada Actor Kiccha Sudeep written by his hardcore fan.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada