»   » ಇದೇ ಕಾರಣಕ್ಕೆ ನೋಡಿ ಕಿಚ್ಚ ಸುದೀಪ್ ಅಂದ್ರೆ ಪ್ರೇಮ್ ಗೆ ಬಲು'ಪ್ರಿಯ'.!

ಇದೇ ಕಾರಣಕ್ಕೆ ನೋಡಿ ಕಿಚ್ಚ ಸುದೀಪ್ ಅಂದ್ರೆ ಪ್ರೇಮ್ ಗೆ ಬಲು'ಪ್ರಿಯ'.!

Posted By:
Subscribe to Filmibeat Kannada

ಕಿಚ್ಚ ಸುದೀಪ್ ರವರಿಗೆ ಇರುವ ಅಭಿಮಾನಿಗಳ ಸಂಖ್ಯೆ ಲೆಕ್ಕವಿಲ್ಲ. 'ಅಭಿನಯ ಚಕ್ರವರ್ತಿ'ಗೆ ಇರುವ ಅಸಂಖ್ಯಾತ ಅಭಿಮಾನಿಗಳ ಪೈಕಿ 'ಹ್ಯಾಟ್ರಿಕ್ ಡೈರೆಕ್ಟರ್', 'ಜೋಗಿ' ಪ್ರೇಮ್ ಕೂಡ ಒಬ್ಬರು.

'ದಿ ವಿಲನ್' ಚಿತ್ರದ ಮೂಲಕ ಇದೇ ಮೊಟ್ಟ ಮೊದಲ ಬಾರಿಗೆ ಕಿಚ್ಚ ಸುದೀಪ್ ರವರಿಗೆ ಪ್ರೇಮ್ ಆಕ್ಷನ್ ಕಟ್ ಹೇಳುತ್ತಿದ್ದಾರೆ. 'ದಿ ವಿಲನ್' ಸೆಟ್ ನಲ್ಲಿ ಸಹಜವಾಗಿ ಸುದೀಪ್ ಹಾಗೂ ಪ್ರೇಮ್ ಸಖತ್ ಫ್ರೆಂಡ್ಲಿ.[ಭಯಂಕರ ಬಿರುಗಾಳಿಗೆ ಸಿಲುಕಿದ 'ದಿ ವಿಲನ್' ಚಿತ್ರತಂಡ: ಪಾರಾದ ಕಿಚ್ಚ ಸುದೀಪ್.!]

kiccha-sudeep-bakes-cake-for-director-prem

ಸದ್ಯ ಬ್ಯಾಂಕಾಕ್ ನಲ್ಲಿ 'ದಿ ವಿಲನ್' ಚಿತ್ರದ ಚಿತ್ರೀಕರಣ ನಡೆಯುತ್ತಿದೆ. ಇದೇ ಗ್ಯಾಪ್ ನಲ್ಲಿ ನಿರ್ದೇಶಕ ಪ್ರೇಮ್ ರವರಿಗಾಗಿ ನಟ ಸುದೀಪ್ ಚಾಕಲೇಟ್ ಕೇಕ್ ತಯಾರಿಸಿ ಕೊಟ್ಟಿದ್ದಾರೆ.

kiccha-sudeep-bakes-cake-for-director-prem

ಹೇಳಿ ಕೇಳಿ, ರುಚಿ ರುಚಿಯಾದ ಅಡುಗೆ ಮಾಡುವುದರಲ್ಲಿ ನಟ ಸುದೀಪ್ ಎತ್ತಿದ ಕೈ. 'ಬಾಣಸಿಗ'ನಾಗಿ 'ಬಿಗ್ ಬಾಸ್ ಕನ್ನಡ' ಕಾರ್ಯಕ್ರಮದಲ್ಲಿಯೂ ಸುದೀಪ್ ತೋರಿದ ಕೈಚಳಕ ನಿಮಗೆ ನೆನಪಿರಬಹುದು. ಈಗ 'ದಿ ವಿಲನ್' ಸೆಟ್ ನಲ್ಲೂ ನಿರ್ದೇಶಕ ಪ್ರೇಮ್ ರವರಿಗೆ ಸುದೀಪ್ ತಮ್ಮ ಕೈರುಚಿ ತೋರಿಸಿದ್ದಾರೆ.[ಕಿಚ್ಚನ ಕಿಚನ್: ಸುದೀಪ್ ಕೈ ರುಚಿ ಸವಿದ ಭಾಗ್ಯವಂತರಿವರು]

''ಚಾಕಲೇಟ್ ಕೇಕ್' ಅಂದ್ರೆ ನನಗಿಷ್ಟ'' ಅಂತ ಪ್ರೇಮ್ ಹೇಳಿದ್ದಾರೆ. ಮರುಕ್ಷಣವೇ ಬೇಕಾದ ಪದಾರ್ಥಗಳನ್ನೆಲ್ಲ ತರಿಸಿ, ಪ್ರೇಮ್ ಗಾಗಿ ಬಾಯಲ್ಲಿ ನೀರೂರಿಸುವ ಕೇಕ್ ತಯಾರಿಸಿ ಕೊಟ್ಟಿದ್ದಾರೆ.

ಈ ಬಗ್ಗೆ ಸಂತಸಗೊಂಡ ಪ್ರೇಮ್ ತಮ್ಮ ಟ್ವಿಟ್ಟರ್ ಅಕೌಂಟ್ ಮೂಲಕ ಕಿಚ್ಚ ಸುದೀಪ್ ಗೆ 'ಲವ್ ಯು ಡಾರ್ಲಿಂಗ್' ಎಂದಿದ್ದಾರೆ.

English summary
Kannada Director Prem has taken his twitter account to thank Kiccha Sudeep for baking cake for him.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada