ಆಮಿರ್ ಖಾನ್ 'ಲಾಲ್‌ ಸಿಂಗ್ ಚಡ್ಡ' ಸಿನಿಮಾ 'ಕೆಜಿಎಫ್ 2' ದಾಖಲೆ ಉಡೀಸ್ ಮಾಡುತ್ತಾ? ಬಾಲಿವುಡ್ ಹೇಳ್ತಿರೋದೇನು?

'ಕೆಜಿಎಫ್ 2' ಬಾಕ್ಸಾಫೀಸ್‌ನಲ್ಲಿ ಇನ್ನೂ ತನ್ನ ಆಟವನ್ನು ಮುಗಿಸಿಲ್ಲ. ಪ್ರೇಕ್ಷಕರನ್ನು ಇನ್ನೂ ಚಿತ್ರಮಂದಿರದೆಡೆಗೆ ಸೆಳೆಯುತ್ತಲೇ ಇದೆ. 'ಕೆಜಿಎಫ್ 2' ಭಾರತೀಯ ಚಿತ್ರರಂಗದ ಇತಿಹಾಸದಲ್ಲಿಯೇ ಅತೀ ಹೆಚ್ಚು ಸಕ್ಸಸ್ ಕಂಡ ಸಿನಿಮಾಗಳಲ್ಲೊಂದು. ಈ ಸಿನಿಮಾ ಬಿಡುಗಡೆಯಾದಲ್ಲಿಂದ ಭಾರತದ ಯಾವುದೇ ಭಾಷೆಯ ಚಿತ್ರವೂ ಈ ದಾಖಲೆಯನ್ನು ಮುರಿದು ಮುನ್ನುಗ್ಗಲು ಸಾಧ್ಯವಾಗಿಲ್ಲ.

Recommended Video

ಯಶ್‌ಗೆ ವಿಶೇಷ ಬೇಡಿಗೆ ಇಟ್ಟ ಮಹಾರಾಷ್ಟ್ರ ಫ್ಯಾನ್ಸ್ | Yash Next Movie

'ಕೆಜಿಎಫ್ 2' ದಾಖಲೆಯನ್ನು ಮುರಿಯೋಕೆ ಮತ್ತೊಂದು ರಾಜಮೌಳಿ ಸಿನಿಮಾ ಬರಬೇಕು. ಪ್ರಶಾಂತ್ ನೀಲ್ ನಿರ್ದೇಶನದ ಸಿನಿಮಾ ರಿಲೀಸ್ ಆಗಬೇಕು. ಇಲ್ಲಾ ಯಶ್ ಸಿನಿಮಾ ರಿಲೀಸ್ ಆಗಬೇಕು ಎಂಬ ಮಾತು ಕೇಳಿ ಬರುತ್ತಿತ್ತು. ಆದ್ರೀಗ ಆಮಿರ್ ಖಾನ್ ಅಭಿಮಾನಿಗಳು ಹೊಸ 'ಲಾಲ್ ಸಿಂಗ್ ಚಡ್ಡ' ಕಡೆ ಬೊಟ್ಟು ಮಾಡಿ ತೋರಿಸುತ್ತಿದ್ದಾರೆ.

ಆಮಿರ್ ಖಾನ್ ಅಭಿನಯದ 'ಲಾಲ್ ಸಿಂಗ್ ಚಡ್ಡ' ಟ್ರೈಲರ್ ರಿಲೀಸ್ ಆಗಿದ್ದೇ ಆಗಿದ್ದು, ಫ್ಯಾನ್ಸ್ ಫುಲ್ ಖುಷಿಯಾಗಿದ್ದಾರೆ. ಇನ್ನೊಂದು ಕಡೆ ಬಾಲಿವುಡ್‌ಗೆ ಸೂಪರ್ ಸಕ್ಸಸ್ ತಂದುಕೊಡುತ್ತೆ ಎಂದು ಲೆಕ್ಕಾಚಾರ ಹಾಕುತ್ತಿದ್ದಾರೆ. ಈ ಮಧ್ಯೆನೇ ಆಮಿರ್ ಫ್ಯಾನ್ಸ್ 'ಲಾಲ್ ಸಿಂಗ್ ಚಡ್ಡ' ಸಿನಿಮಾ 'ಕೆಜಿಎಫ್ 2' ದಾಖಲೆಯನ್ನು ಉಡೀಸ್ ಮಾಡುತ್ತೆ ಎಂದು ಹೇಳುತ್ತಿದ್ದಾರೆ. ಅಷ್ಟಕ್ಕೂ ಇಷ್ಟೊಂದು ಕಾನ್ಫಿಡೆನ್ಸ್ ಯಾಕೆ? ಇಲ್ಲಿದೆ 5 ಪ್ರಮುಖ ಕಾರಣಗಳು.

ಸಿನಿಮಾ ರಿಲೀಸ್ ಡೇಟ್

ಸಿನಿಮಾ ರಿಲೀಸ್ ಡೇಟ್

'ಲಾಲ್‌ ಸಿಂಗ್ ಚಡ್ಡ' ಕೂಡ 'ಕೆಜಿಎಫ್ 2' ಹಾದಿಯನ್ನೇ ಹಿಡಿಯುತ್ತಿದೆ ಎಂದು ಹೇಳಲಾಗುತ್ತಿದೆ. ಉತ್ತರ ಭಾರತದ ಜನಪ್ರಿಯ ಆಚರಣೆಗಳಲ್ಲೊಂದಾದ ರಕ್ಷಾ ಬಂಧನದಂದೇ ಬಿಡುಗಡೆ ಮಾಡಲಿದೆ. ಆಗಸ್ಟ್ 11ರಂದು ರಕ್ಷಾ ಬಂಧನ್ ದಿನದಂದೇ 'ಲಾಲ್ ಸಿಂಗ್ ಚಡ್ಡ ರಿಲೀಸ್ ಆಗುತ್ತಿದೆ. ಆಗಸ್ಟ್ 12ರಂದು ವೀಕೆಂಡ್ ಆರಂಭ. ಆಗಸ್ಟ್ 13 ಎರಡನೇ ಶನಿವಾರ. ಆಗಸ್ಟ್ 14 ಭಾನುವಾರ. ಆಗಸ್ಟ್ 15 ಸ್ವಾತಂತ್ರ್ಯ ದಿನಾಚರಣೆ. ಹೀಗೆ ಬ್ಯಾಕ್ ಟು ಬ್ಯಾಕ್ ಸಿನಿಮಾ ರಜೆಗಳಿರುವುದರಿಂದ ಸಿನಿಮಾ ಬಾಕ್ಸಾಫೀಸ್‌ನಲ್ಲಿ ಬೇಜಾನ್ ಮೋಡಿ ಮಾಡುತ್ತಿದೆ.

ಆಮಿರ್- ಕರೀನಾ ಕಾಂಬಿನೇಷನ್

ಆಮಿರ್- ಕರೀನಾ ಕಾಂಬಿನೇಷನ್

ಆಮಿರ್ ಖಾನ್ ಸಿನಿಮಾ 'ಲಾಲ್ ಸಿಂಗ್ ಚಡ್ಡ' ಇದೇ ವರ್ಷ ಆಗಸ್ಟ್ 11ಕ್ಕೆ ಬಿಡುಗಡೆಯಾಗುತ್ತಿದೆ. ಸಿನಿಮಾ ರಿಲೀಸ್‌ಗೆ ಇನ್ನೂ ಬಾಕಿ ಇರುವಾಗಲೇ ಐಪಿಎಲ್ ಫೈನಲ್‌ನಲ್ಲಿ ಭರ್ಜರಿ ಎಂಟ್ರಿ ಕೊಟ್ಟಿದ್ದಾಗಿದೆ. ಹೀಗಾಗಿಯೇ ಆಮಿರ್ ಸಿನಿಮಾ ಬಗ್ಗೆ ಫ್ಯಾನ್ಸ್ ಹೊಸ ಲೆಕ್ಕ ಹಾಕಿದ್ದಾರೆ. ಆಮಿರ್ ಹಾಗೂ ಕರೀನಾ ಕಪೂರ್ ಸೂಪರ್ ಜೋಡಿ. ಇಬ್ಬರ ಕಾಂಬಿನೇಷನ್‌ನಲ್ಲಿ ಬಂದಿದ್ದ '3 ಈಡಿಯಟ್ಸ್', 'ತಲಾಶ್' ಸಿನಿಮಾಗಳು ಬಾಕ್ಸಾಫೀಸ್‌ನಲ್ಲಿ ಮೋಡಿ ಮಾಡಿದೆ. ಈ ಕಾರಣಕ್ಕೆ 'ಲಾಲ್ ಸಿಂಗ್ ಚಡ್ಡ' ಕೂಡ ಗಲ್ಲಾಪೆಟ್ಟಿಗೆಯಲ್ಲಿ ದಾಖಲೆ ಬರೆಯುತ್ತೆ ಎಂಬ ನಿರೀಕ್ಷೆಯಿದೆ.

ಇದೊಂದು ಪಕ್ಕಾ ಫ್ಯಾಮಿಲಿ ಸಿನಿಮಾ

ಇದೊಂದು ಪಕ್ಕಾ ಫ್ಯಾಮಿಲಿ ಸಿನಿಮಾ

ಆಮಿರ್ ಖಾನ್ ಸಿನಿಮಾದ ಪಕ್ಕಾ ಫ್ಯಾಮಿಲಿ ಎಂಟರ್‌ಟೈನರ್. ಎಲ್ಲಾ ವಯಸ್ಸಿನ ಗುಂಪನ್ನು ಆಮಿರ್ ಖಾನ್ ಟಾರ್ಗೆಟ್ ಮಾಡಿದ್ದಾರೆ. ಹೀಗಾಗಿ ದೇಶದ ಮೂಲೆ ಮೂಲೆಯಲ್ಲೂ ಈ ಸಿನಿಮಾವನ್ನು ಫ್ಯಾಮಿಲಿ ಸಮೇತ ಬಂದು ಸಿನಿಮಾ ನೋಡುತ್ತಾರೆ ಎಂದು ನಿರೀಕ್ಷೆ ಮಾಡಲಾಗುತ್ತಿದೆ.

4 ವರ್ಷಗಳಾದ್ಮೇಲೆ ಆಮಿರ್ ಸಿನಿಮಾ

4 ವರ್ಷಗಳಾದ್ಮೇಲೆ ಆಮಿರ್ ಸಿನಿಮಾ

ಆಮಿರ್ ಖಾನ್ ಕೊನೆಯದಾಗಿ ನಟಿಸಿದ ಸಿನಿಮಾ 'ಥಗ್ಸ್ ಆಫ್ ಹಿಂದೂಸ್ತಾನ್'. 2018ರಲ್ಲಿ ಈ ಸಿನಿಮಾ ತೆರೆಕಂಡಿತ್ತು. ಆಮಿರ್ ಖಾನ್ ಹಾಗೂ ಅಮಿತಾಬ್ ಬಚ್ಚನ್ ಜೊತೆಯಾಗಿ ನಟಿಸಿದ್ದರೂ, ಬಾಕ್ಸಾಫೀಸ್‌ನಲ್ಲಿ ಗೆಲ್ಲಲಿಲ್ಲ. ಅಂದಿನಿಂದ ಆಮಿರ್ ಒಂದೇ ಒಂದು ಸಿನಿಮಾ ರಿಲೀಸ್ ಆಗಿಲ್ಲ. ಈ ಕಾರಣಕ್ಕೆ ಸಿನಿಮಾ ಬಾಕ್ಸಾಫೀಸ್‌ ಲೂಟಿ ಮಾಡಬಹುದು.

ಆಮಿರ್ ಹಾಗೂ ಶಾರುಕ್ ದರ್ಶನ

ಆಮಿರ್ ಹಾಗೂ ಶಾರುಕ್ ದರ್ಶನ

ಆಮಿರ್ ಖಾನ್ ನಟನೆಯ 'ಲಾಲ್ ಸಿಂಗ್ ಚಡ್ಡ' ಸಿನಿಮಾದ ಮತ್ತೊಂದು ಹೈಲೈಟ್ ಅಂದರೆ ಆಮಿರ್ ಖಾನ್, ಶಾರುಖ್ ಖಾನ್, ಸಲ್ಮಾನ್ ಖಾನ್. ಈ ಸಿನಿಮಾದಲ್ಲಿ ಸಲ್ಮಾನ್ ಹಾಗೂ ಶಾರುಖ್ ಖಾನ್ ಅತಿಥಿ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಹೀಗಾಗಿ ಮೂವರ ಅಭಿಮಾನಿಗಳೂ ಸಿನಿಮಾ ನೋಡಲು ಥಿಯೇಟರ್‌ಗೆ ಎಂಟ್ರಿ ಕೊಡುತ್ತಾರೆ ಎನ್ನುವ ನಂಬಿಕೆಯಿದೆ. ಈ ಎಲ್ಲಾ ಕಾರಣಕ್ಕೆ ಸಿನಿಮಾ ಬಾಕ್ಸಾಫೀಸ್‌ನಲ್ಲಿ ಲೂಟಿ ಮಾಡುತ್ತೆ ಎನ್ನಲಾಗಿದೆ.

More from Filmibeat

English summary
Aamir Khan Starrer Laal Singh Chaddha Can Beat KGF Chapter 2 Box Office Prediction, Know More.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X