»   » ಗೋಲ್ಡನ್ ಸ್ಟಾರ್ ಗಣೇಶ್ ಗೆ ಹೊಸ ಬಿರುದು: ಏನಿರಬಹುದು ಹೇಳಿ.?

ಗೋಲ್ಡನ್ ಸ್ಟಾರ್ ಗಣೇಶ್ ಗೆ ಹೊಸ ಬಿರುದು: ಏನಿರಬಹುದು ಹೇಳಿ.?

Posted By:
Subscribe to Filmibeat Kannada

ಇಷ್ಟು ದಿನ ಗಣೇಶ್ ರವರನ್ನ 'ಗೋಲ್ಡನ್ ಸ್ಟಾರ್' ಅಂತ ಎಲ್ಲರೂ ಕರೆಯುತ್ತಿದ್ದರು. ಇನ್ನೇಲೆ 'ಗೋಲ್ಡನ್ ಸ್ಟಾರ್' ಜೊತೆಗೆ 'ಅಭಿನಯ ಅಧಿಪತಿ' ಅಂತಲೂ ನೀವು 'ಮಳೆ ಹುಡುಗ'ನಿಗೆ ಕರೆಯಬಹುದು.

ಹೌದು, ಗೋಲ್ಡನ್ ಸ್ಟಾರ್ ಗಣೇಶ್ ಗೆ ಹೊಸ ಬಿರುದು ಸಿಕ್ಕಿದೆ. 'ಅಭಿನಯ ಅಧಿಪತಿ' ಎಂದು ಗಣೇಶ್ ಗೆ ನಾಮಕರಣ ಮಾಡಲಾಗಿದೆ. ಹಾಗೆ, ಗಣೇಶ್ ಗೆ 'ಅಭಿನಯ ಅಧಿಪತಿ' ಎಂದು ಟೈಟಲ್ ನೀಡಿರುವುದು 'ಪಟಾಕಿ' ಚಿತ್ರತಂಡ.


'ಅಭಿನಯ ಅಧಿಪತಿ' ಗಣೇಶ್

ಸಿನಿಮಾಗಳ ಮೂಲಕ ಸ್ಟಾರ್ ನಟರಿಗೆ ಹೊಸ ಬಿರುದು ನೀಡುವುದು ಇತ್ತೀಚಿನ ಗಾಂಧಿನಗರದ ಸಂಪ್ರದಾಯ. ಈ ಸಂಪ್ರದಾಯವನ್ನ ಚಾಚೂ ತಪ್ಪದೇ ಪಾಲಿಸಿರುವ 'ಪಟಾಕಿ' ಚಿತ್ರತಂಡ ಗಣೇಶ್ ಗೆ 'ಅಭಿನಯ ಅಧಿಪತಿ' ಎಂದು ಎಂಬ ಬಿರುದು ನೀಡಿದೆ.


ಗಣೇಶ್ ಫ್ಯಾನ್ಸ್ ಗೆ ಖುಷಿ

'ಅಭಿನಯ ಅಧಿಪತಿ' ಎಂದು ಗಣೇಶ್ ಗೆ ಹೊಸ ಬಿರುದು ಸಿಕ್ಕಿರುವುದರಿಂದ 'ಜಿ ಸ್ಟಾರ್' ಅಭಿಮಾನಿಗಳಿಗೆ ಸಖತ್ ಖುಷಿ ಆಗಿದೆ. #ಅಭಿನಯಅಧಿಪತಿ ಎಂಬ ಹ್ಯಾಶ್ ಟ್ಯಾಗ್ ಕೂಡ ಸಾಮಾಜಿಕ ಜಾಲತಾಣಗಳಲ್ಲಿ ಟ್ರೆಂಡಿಂಗ್ ಆಗಿದೆ.


'ಅಭಿನಯ ಅಧಿಪತಿ'ಯ ಖಾಕಿ ದರ್ಬಾರ್

'ಪಟಾಕಿ' ಚಿತ್ರದ ಮೂಲಕ ಮೊಟ್ಟ ಮೊದಲ ಬಾರಿಗೆ ಖಾಕಿ ಧರಿಸಿರುವ ಗಣೇಶ್ ಖಡಕ್ ಡೈಲಾಗ್ ಗಳನ್ನ ಉದುರಿಸಿದ್ದಾರೆ. ಗಣೇಶ್ ಜೊತೆ ರನ್ಯ, ಸಾಯಿ ಕುಮಾರ್, ಸಾಧು ಕೋಕಿಲ ನಟಿಸಿರುವ 'ಪಟಾಕಿ' ಚಿತ್ರಕ್ಕೆ ಮಂಜು ಸ್ವರಾಜ್ ಆಕ್ಷನ್ ಕಟ್ ಹೇಳಿದ್ದಾರೆ.


'ಪಟಾಕಿ' ಯಶಸ್ವಿ ಪ್ರದರ್ಶನ

ಗಣೇಶ್ ಹಾಗೂ ಸಾಧು ಕೋಕಿಲ ಕಾಂಬಿನೇಷನ್ ನಲ್ಲಿ ಮಸ್ತ್ ಕಾಮಿಡಿ ಇರುವ 'ಪಟಾಕಿ' ಚಿತ್ರ ಎಲ್ಲೆಡೆ ಯಶಸ್ವಿ ಪ್ರದರ್ಶನ ಕಾಣುತ್ತಿದೆ. 'ಪಟಾಕಿ' ಚಿತ್ರದ ವಿಮರ್ಶೆ ಓದಲು ಈ ಲಿಂಕ್ ಕ್ಲಿಕ್ ಮಾಡಿ....[ವಿಮರ್ಶೆ: ಗಣೇಶ 'ಪಟಾಕಿ'ಯಲ್ಲಿ ನಗುವಿನ ಸದ್ದೇ ಹೆಚ್ಚು]


English summary
Kannada Actor Ganesh gets new title from 'Pataki' team - 'Abhinaya Adhipathi'.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada