Exclusive: ಅಂಬಿ ಪುತ್ರನ ವಿವಾಹದ ಸಿದ್ಧತೆ ಹೇಗಿದೆ? ಮೆಹೆಂದಿ, ಸಂಗೀತ್, ಅತಿಥಿಗಳ ಕಂಪ್ಲೀಟ್ ಡಿಟೈಲ್ಸ್
ಇಂದು (ಮೇ 29) ರೆಬೆಲ್ ಸ್ಟಾರ್ ಅಂಬರೀಶ್ ಹುಟ್ಟುಹಬ್ಬದ ಸಂಭ್ರಮ. ಅಂಬಿ ಸಮಾಧಿ ಮುಂದೆ ಮಂಡ್ಯದ ಗಂಡಿನ ಅಭಿಮಾನಿಗಳು ಸೆಲೆಬ್ರೆಟ್ ಮಾಡುತ್ತಿದ್ದಾರೆ. ಇನ್ನೊಂದು ಕಡೆ ಅಭಿಷೇಕ್ ಅಂಬರೀಶ್ ಮದುವೆ ಸಮಾರಂಭಕ್ಕೆ ಸಿದ್ಧತೆಗಳು ನಡೆಯುತ್ತಿದೆ.
ಜೂನ್ 5ರಂದು ಕಲಿಯುಗದ ಕರ್ಣ ಅಂಬರೀಶ್ ಪುತ್ರ ಅಭಿಷೇಕ್ ಅಂಬರೀಶ್ ಹಾಗೂ ಫ್ಯಾಷನ್ ಗುರು ಪ್ರಸಾದ್ ಬಿಡಪ ಮಗಳ ಅವಿವಾ ಬಿಡಪ ವಿವಾಹ ನಡೆಯಲಿದೆ. ಕೆಲವು ದಿನಗಳಿಂದ ಮದುವೆ ಸಮಾರಂಭ ಭರ್ಜರಿಯಾಗಿ ನಡೆಯುತ್ತಿದೆ. ಸಮಲತಾ ಹಾಗೂ ಅಭಿಷೇಕ್ ಗಣ್ಯರಿಗೆ ಆಮಂತ್ರಣ ಪತ್ರಿಕೆಯನ್ನು ನೀಡಿ, ಮದುವೆಗೆ ಆಹ್ವಾನ ನೀಡುತ್ತಿದ್ದಾರೆ.

ಈ ಸಂಬಂಧ ಇಂದು (ಮೇ 29) ಅಂಬರೀಶ್ ಸಮಾಧಿ ಮುಂದೆ ಮದುವೆ ಆಮಂತ್ರಣ ಪತ್ರಿಕೆಯನ್ನು ಇಟ್ಟು ಪೂಜೆ ಸಲ್ಲಿಸಲಾಗಿದೆ. ಹಾಗಿದ್ದರೆ, ಅಭಿಷೇಕ್ ಅಂಬರೀಶ್ ಮದುವೆಗೆ ತಯಾರಿ ಹೇಗೆ ನಡೆಯುತ್ತಿದೆ? ಯಾವ್ಯಾವ ದಿನ ಯಾವ್ಯಾವ ಕಾರ್ಯಕ್ರಮ? ಮದುವೆ ಸಮಾರಂಭಕ್ಕೆ ಬರುವ ಅತಿಥಿಗಳು ಯಾರು? ಅನ್ನೋ ಫುಲ್ ಡಿಟೈಲ್ಸ್ ಇಲ್ಲಿದೆ.
ಮೆಹೆಂದಿ, ಸಂಗೀತ್ ಯಾವಾಗ?
ಅಭಿಷೇಕ್ ಅಂಬರೀಶ್ ಹಾಗೂ ಅವಿವಾ ಬಿಡಪ ಮದುವೆ ಸಂಭ್ರಮ ಈಗಾಗಲೇ ಆರಂಭ ಆಗಿದೆ. ಎರಡೂ ಮನೆಯಲ್ಲೂ ಸಂಭ್ರಮ ಮುಗಿಲು ಮುಟ್ಟಿದೆ. ಜೂನ್ 2ರಿಂದಲೇ ಮದುವೆ ಕಾರ್ಯಕ್ರಮಗಳು ಆರಂಭ ಆಗುತ್ತಿವೆ. ಜೂನ್ 2ರಂದು ಮೆಹೆಂದಿ ಕಾರ್ಯಕ್ರಮ ಅದ್ಧೂರಿಯಾಗಿ ನಡೆಯಲಿದೆ.
ಜೂನ್ 3ರಂದು ಸಂಗೀತ್ ಕಾರ್ಯಕ್ರಮ ನಡೆಯಲಿದೆ. ಅಭಿಷೇಕ್ ಅಂಬರೀಶ್ ಹಾಗೂ ಅವಿವಾ ಬಿಡಪ ಎರಡು ತಂಡಗಳಲಾಗಿ ಈ ಕಾರ್ಯಕ್ರಮಗಳಲ್ಲಿ ಡ್ಯಾನ್ಸ್ ಮಾಡಲಿದ್ದಾರೆ. ಜೂನ್ 4ರಂದು ಚಪ್ಪರ ಕಾರ್ಯಕ್ರಮವಿರುತ್ತದೆ. ಹಾಗೇ ಜೂನ್ 5 ರಂದು ವಿವಾಹ ಜರುಗಲಿದ್ದು, ಕೇವಲ ಆತ್ಮೀಯರು ಹಾಗೂ ಕುಟುಂಬಸ್ಥರು ಭಾಗಿಯಾಗಲಿದ್ದಾರೆ.

ವಿವಾಹಕ್ಕೆ ಆಗಮಿಸುತ್ತಿರುವ ಗಣ್ಯರ ಲಿಸ್ಟ್
ರೆಬೆಲ್ ಸ್ಟಾರ್ ಅಂಬರೀಶ್ ಹಾಗೂ ಸುಮಲತಾ ಬಳಗ ದೊಡ್ಡದಿದೆ. ಇಬ್ಬರೂ ಸಿನಿಮಾ ಹಾಗೂ ರಾಜಕೀಯ ಕ್ಷೇತ್ರದಲ್ಲಿ ದೊಡ್ಡ ಆತ್ಮೀಯ ಬಳಗವನು ಸಂಪಾದಿಸಿದ್ದಾರೆ. ಈಗಾಗಲೇ ಎರಡೂ ಕ್ಷೇತ್ರದ ಗಣ್ಯರಿಗೆ ಆಹ್ವಾನವನ್ನು ನೀಡಿಲಾಗಿದೆ. ಅಭಿಷೇಕ್ ಅಂಬರೀಶ್ ಆತ್ಮೀಯ ಮೂಲಗಳ ಪ್ರಕಾರ, ಬಾಲಿವುಡ್ ಮೆಗಾಸ್ಟಾರ್ ಅಮಿತಾಭ್ ಬಚ್ಚನ್, ಸೂಪರ್‌ಸ್ಟಾರ್ ರಜನಿಕಾಂತ್, ಸೂರ್ಯ, ಜೂ.ಎನ್‌ಟಿಆರ್ ಆಗಮಿಸುತ್ತಿದ್ದಾರೆ.
ಇವರೊಂದಿಗೆ ಕನ್ನಡ ಚಿತ್ರರಂಗದ ದಿಗ್ಗಜರು ರಾಜಕೀಯ ಮುಖಂಡರು ಆಗಮಿಸುತ್ತಿದ್ದಾರೆ. ನಿರ್ಮಲಾ ಸೀತಾರಾಮನ್, ಡಿಕೆ ಶಿವಕುಮಾರ್, ಸಿದ್ಧರಾಮಯ್ಯ, ಎಚ್‌ಡಿ ದೇವೇಗೌಡರು, ಎಚ್‌ಡಿ ಕುಮಾರಸ್ವಾಮಿ ಕೂಡ ಮದುವೆ ಬರುವುದಾಗಿ ಹೇಳಿದ್ದಾರೆ ಎನ್ನಲಾಗಿದೆ.
1 ಲಕ್ಷ ಮಂದಿಗೆ ಬೀಗರ ಊಟ
ಜೂನ್ 7ರಂದು ಅಂಬರೀಶ್ ಕುಟುಂಬ ಕನ್ನಡ ಚಿತ್ರರಂಗ ಹಾಗೂ ರಾಜಕೀಯ ಕ್ಷೇತ್ರದ ಮುಖಂಡರಿಗಾಗಿ ಅದ್ಧೂರಿ ಆರತಕ್ಷತೆ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ. ಈ ರಿಸೆಪ್ಷನ್‌ಗೆ ಎಲ್ಲಾ ಚಿತ್ರರಂಗದ ಅಂಬರೀಶ್, ಸುಮಲತಾ ಹಾಗೂ ಅಭಿಷೇಕ್ ಆಪ್ತರು ಆಗಮಿಸುವ ಸಾಧ್ಯತೆಯಿದೆ. ಸುಮಾರು 10 ಸಾವಿರ ಮಂದಿಗೆ ಊಟದ ವ್ಯವಸ್ಥೆ ಮಾಡಲಾಗುತ್ತಿದ್ದು, ಪಕ್ಕಾ ಸಸ್ಯಹಾರಿ ಖಾದ್ಯಗಳು ಇರಲಿವೆ.
ಎಲ್ಲಕ್ಕಿಂತ ಹೆಚ್ಚಾಗಿ ಜೂನ್ 16ರಂದು ಪ್ರಧಾನಿ ಮೋದಿ ಭಾಷಣ ಮಾಡಿದ್ದ ಮಂಡ್ಯದ ಗೆಜ್ಜಲಗೆರೆಯಲ್ಲಿ ಅಭಿಮಾನಿಗಳಿಗಾಗಿ ಅದ್ದೂರಿ ಬೀಗರ ಊಟವನ್ನು ಆಯೋಜನೆ ಮಾಡಲಾಗಿದೆ. ಇದರಲ್ಲಿ ಸುಮಾರು 1 ಲಕ್ಷಕ್ಕೂ ಅಧಿಕ ಮಂದಿ ಅಭಿಮಾನಿಗಳು ಭಾಗವಹಿಸುವ ಸಾಧ್ಯತೆಗಳು ಇವೆ.


Click it and Unblock the Notifications











