ಅಭಿಷೇಕ್ ಅಂಬರೀಶ್-ಅವಿವಾ ಆರತಕ್ಷತೆಗೆ ಅದ್ಧೂರಿ ವೇದಿಕೆ: ಡಿಸೈನ್.. ಗೆಸ್ಟ್ ಬಗ್ಗೆ ಫುಲ್ ಡಿಟೈಲ್ಸ್
ರೆಬೆಲ್ ಸ್ಟಾರ್ ಅಂಬರೀಶ್ ಪುತ್ರ ಅಭಿಷೇಕ್ ಅಂಬರೀಶ್ ಜೂನ್ 5 ರಂದು ವೈವಾಹಿಕ ಜೀವನಕ್ಕೆ ಕಾಲಿಟ್ಟಿದ್ದು ಗೊತ್ತೇ ಇದೆ. ಬೆಂಗಳೂರಿನ ಫ್ಯಾಷನ್ ಐಕಾನ್ ಪ್ರಸಾದ್ ಬಿದ್ದಪ್ಪ ಪುತ್ರಿ ಅವಿವಾ ಬಿದ್ದಪ್ಪ ಅವರನ್ನು ಕುಟುಂಬಸ್ಥರು ಹಾಗೂ ಆತ್ಮೀಯರ ಸಮ್ಮುಖದಲ್ಲಿ ವಿವಾಹವಾಗಿದ್ದಾರೆ.
ಮದುವೆಗೆ ಕೇವಲ ಆತ್ಮೀಯರು ಹಾಗೂ ಕುಟುಂಬದವರಿಗೆ ಮಾತ್ರ ಆಹ್ವಾನ ನೀಡಲಾಗಿತ್ತು. ಇಂದು (ಜೂನ್ 7)ರಂದು ಪ್ಯಾಲೇಸ್ ಗ್ರೌಂಡ್‌ನಲ್ಲಿ ಅದ್ಧೂರಿಯಾಗಿ ಆರತಕ್ಷತೆಯನ್ನು ಇಟ್ಟುಕೊಳ್ಳಲಾಗಿದೆ. ಇದರಲ್ಲಿ ಸಿನಿಮಾ, ರಾಜಕೀಯ ಸೇರಿದಂತೆ ಬೇರೆ ಬೇರೆ ಕ್ಷೇತ್ರದ ಮುಖಂಡರು ಆಗಮಿಸುವ ಸಾಧ್ಯತೆಯಿದೆ. ಅಲ್ಲದೆ ಅಭಿಮಾನಿಗಳಿಗೂ ಆಹ್ವಾನ ನೀಡಲಾಗಿದೆ.

ಅಭಿಷೇಕ್-ಅವಿವಾ ಆರತಕ್ಷತೆಗೆ ಪ್ಯಾಲೇಸ್ ಗ್ರೌಂಡ್ ಸಜ್ಜಾಗಿದೆ. ನವ ಜೋಡಿಗಾಗಿ ಅದ್ಧೂರಿಯಾಗಿ ವೇದಿಕೆ ನಿರ್ಮಾಣಗೊಂಡಿದೆ. ಸೆಲೆಬ್ರೆಟಿಗಳ ಮದುವೆಗೆ ವಿಶೇಷವಾಗಿ ಡಿಸೈನ್ ಮಾಡುವ ಡಿಸೈನರ್ ವೇದಿಕೆಯನ್ನು ಸಿದ್ಧಪಡಿಸಿದ್ದಾರೆ. ಹಾಗಿದ್ದರೆ, ಈ ವೇದಿಕೆಯ ಹೈಲೈಟ್ ಏನು? ಆರತಕ್ಷತೆಗೆ ಯಾವ್ಯಾವ ಸೆಲೆಬ್ರೆಟಿ ಬರುತ್ತಾರೆ? ಊಟ ವ್ಯವಸ್ಥೆ ಎಲ್ಲದರ ಕಂಪ್ಲೀಟ್ ಡಿಟೈಲ್ಸ್ ಇಲ್ಲಿದೆ.
ಈ ಡಿಸೈನ್ ಭಾರತದಲ್ಲೇ ಪ್ರಥಮ?
ಅಭಿಷೇಕ್ ಅಂಬರೀಶ್ ಹಾಗೂ ಅವಿವಾ ಬಿದ್ದಪ್ಪ ರಿಸೆಪ್ಷನ್‌ಗೆ ವೇದಿಕೆ ಅಲಂಕಾರಗೊಂಡಿದೆ. ಸೆಲೆಬ್ರೆಟಿಗಳ ಮದುವೆಯಲ್ಲಿ ಈ ಸ್ಟೇಜ್‌ಗಳನ್ನು ನೋಡುವುದೇ ಒಂದು ಚಂದ. ಈ ಜೋಡಿಯ ರಿಸೆಪ್ಷನ್ ಕೂಡ ಅಷ್ಟೇ ಅದ್ಧೂರಿಯಾಗಿದೆ. ದೆಹಲಿಯ ಮೋರದಾಬಾದ್‌ನಿಂದ ಈ ಡಿಸೈನ್‌ಗಳನ್ನು ತರಿಸಲಾಗಿದ್ದು, ಇದು ಭಾರತದಲ್ಲೇ ಮೊದಲು ಎನ್ನಲಾಗಿದೆ.
ಅಂದ್ಹಾಗೆ ಈ ಡಿಸೈನ್ ಅನ್ನು ಇಂಡಿಯನ್ ಕ್ರಿಸ್ಟಲ್ ಶ್ಯಾಂಡಲಿಯರ್ ಡಿಸೈನ್‌ನಲ್ಲಿ ನಿರ್ಮಾಣ ಮಾಡಲಾಗಿದೆ. ಈ ವೇದಿಕೆ ಮೇಲೆ ಸುಮಾರು 300ಕ್ಕೂ ಅಧಿಕ ಶ್ಯಾಂಡಲಿಯರ್ ಬಳಸಲಾಗಿದೆ. ಅಲ್ಲದೆ 72 ಅಡಿ ಅಗಲ ಹಾಗೂ 32 ಅಡಿ ಉದ್ದದ ಶ್ಯಾಂಡಲಿಯರ್ ಅನ್ನು ವೇದಿಕೆಯನ್ನು ಸಿಂಗಾರಗೊಳಿಸುವುದಕ್ಕೆಂದೇ ಬಳಸಲಾಗಿದೆ.

ಡಿಸೈನ್ ಮಾಡಿದ್ದು ಯಾರು?
ಅಭಿಷೇಕ್ ಅಂಬರೀಶ್ ಹಾಗೂ ಅವಿವಾ ಬಿದ್ದಪ್ಪ ಡಿಸೆಪ್ಷನ್ ವೇದಿಕೆಯನ್ನು ಡಿಸೈನ್ ಮಾಡಿದ್ದು ಸೆಲೆಬ್ರೆಟಿ ವೆಡ್ಡಿಂಗ್ ಡಿಸೈನರ್ ವೆಡ್ಡಿಂಗ್ ಬೈ ಧ್ರುವ. ಈ ಹಿಂದೆ ಶಿವರಾಜ್‌ಕುಮಾರ್ ಮಗಳ ಮದುವೆ, ಯಶ್ ಹಾಗೂ ರಾಧಿಕಾ ಪಂಡಿತ್, ಜನಾರ್ಧನ್ ರೆಡ್ಡಿ ಮಗಳ ಮದುವೆ, ಯದುವೀರ್ ಮಹಾರಾಜರು ಸೇರಿದಂತೆ ಗಣ್ಯರ ಅದ್ಧೂರಿ ವಿವಾಹಕ್ಕೆ ಇವರು ಡಿಸೈನ್ ಮಾಡಿದ್ದಾರೆ.
ಈಗ ಅಭಿಷೇಕ್ ಅಂಬರೀಶ್ ಹಾಗೂ ಅವಿವಾ ಬಿದ್ದಪ್ಪ ಆರತಕ್ಷತೆಗೂ ಇವರೇ ಡಿಸೈನ್ ಮಾಡಿದ್ದು, ಕಣ್ಮನ ಸೆಳೆಯುತ್ತಿದೆ. ಹೊಸ ರೀತಿಯ ವೇದಿಕೆ ವಿನ್ಯಾಸವನ್ನು ಅಭಿಮಾನಿಗಳು ಹಾಗೂ ಗಣ್ಯರು ಕಣ್ತುಂಬಿ ಕೊಳ್ಳುತ್ತಿದ್ದಾರೆ.
ಆರತಕ್ಷತೆ ವ್ಯವಸ್ಥೆ, ಗೆಸ್ಟ್ ಲಿಸ್ಟ್ ಏನು?
ಅಭಿಷೇಕ್ ಅಂಬರೀಶ್ ಹಾಗೂ ಅವಿವಾ ಬಿದ್ದಪ್ಪ ಆರತಕ್ಷತೆಗೆ ಬರುವವರಿಗಾಗಿ ಸುಮಾರು 3 ಸಾವಿರ ಮಂದಿಗಾಗಿ ಆಸನದ ವ್ಯವಸ್ಥೆಯನ್ನು ಮಾಡಲಾಗಿದೆ. ಸುಮಾರು 25 ಸಾವಿರ ಜನರು ಆರತಕ್ಷತೆಗೆ ಬರುವ ನಿರೀಕ್ಷೆಯಿದ್ದು, ಅವರೆಲ್ಲರಿಗೂ ಊಟದ ವ್ಯವಸ್ಥೆ ಮಾಡಲಾಗಿದೆ. VVIPs, VIP ಹಾಗೂ ಅಭಿಮಾನಿಗಳಿಗಾಗಿ ಪ್ರತ್ಯೇಕ ಊಟದ ವ್ಯವಸ್ಥೆ ಮಾಡಲಾಗಿದೆ.
ಈ ಆರತಕ್ಷತೆ ಕಾರ್ಯಕ್ರಮಕ್ಕೆ ಪರಭಾಷಾ ನಟ ಸೂರ್ಯ, ಜಮ್ಮು ಕಾಶ್ಮೀರದ ಮಾಜಿ ಮುಖ್ಯ ಮಂತ್ರಿ ಫಾರುಖ್ ಅಬ್ದುಲಾ, ಮೆಗಾಸ್ಟಾರ್ ಚಿರಂಜೀವಿ ಕುಟುಂಬ, ಹಿರಿಯ ಕಾಂಗ್ರೆಸ್ ಮುಖಂಡ ಗುಲಾಮ್ ನವಿ ಆಜಾದ್, ಬಾಲಿವುಡ್ ನಟ ಶತ್ರುಘ್ನ ಸಿನ್ಹಾ, ಸಿ.ಎಂ ಸಿದ್ದರಾಮಯ್ಯ ಸೇರಿದಂತೆ ಅನೇಕರು ಭಾಗಿಯಾಗುವ ಸಾಧ್ಯತೆಯಿದೆ.


Click it and Unblock the Notifications











