Abhishek Ambareesh: ರೆಬೆಲ್ ಪುತ್ರನ ನಾಲ್ಕನೇ ಸಿನಿಮಾದ ಬಜೆಟ್ 50 ಕೋಟಿ.. ಪೋಸ್ಟರ್ ಹೇಳಿದ ಕಥೆಯೇನು?
ಇಂದು (ಅಕ್ಟೋಬರ್ 3) ರೆಬೆಲ್ ಸ್ಟಾರ್ ಪುತ್ರ ಅಭಿಷೇಕ್ ಅಂಬರೀಶ್ ಹುಟ್ಟುಹಬ್ಬ. ಈ ಸಂಭ್ರಮಕ್ಕೆಂದೇ ಅವರ ನಾಲ್ಕನೇ ಸಿನಿಮಾದ ಪೋಸ್ಟರ್ ರಿಲೀಸ್ ಆಗಿತ್ತು. ರಾಕ್‌ಲೈನ್ ವೆಂಕಟೇಶ್ ನಿರ್ಮಾಣ ಮಾಡುತ್ತಿರುವ ಈ ಸಿನಿಮಾಗೆ ಮಹೇಶ್ ಕುಮಾರ್ ಆಕ್ಷನ್ ಕಟ್ ಹೇಳುತ್ತಿದ್ದಾರೆ.
ಅಭಿಷೇಕ್ ಅಂಬರೀಶ್ ಹಾಗೂ ಮಹೇಶ್ ಕುಮಾರ್ ಕಾಂಬಿನೇಷನ್ ಸಿನಿಮಾ ಈಗಾಗಲೇ ಅನೌನ್ಸ್ ಆಗಿದೆ. ಆದರೆ, ಇನ್ನೂ ಸಿನಿಮಾದ ಟೈಟಲ್ ರಿವೀಲ್ ಮಾಡದೇ ಹೋದರೂ, ಈಗಾಗಲೇ ಪೋಸ್ಟರ್ ಅನ್ನು ರಿವೀಲ್ ಮಾಡಲಾಗಿತ್ತು. ಈಗ ಬರ್ತ್‌ಡೇ ಖುಷಿಯಲ್ಲಿ ಮತ್ತೊಂದು ಪೋಸ್ಟರ್ ರಿಲೀಸ್ ಮಾಡಲಾಗಿದೆ.

ಪೋಸ್ಟರ್ ನೋಡಿದರೇ ಇದೊಂದು ಐತಿಹಾಸಿಕ ಸಿನಿಮಾ ಅನ್ನೋದು ಗೊತ್ತಾಗುತ್ತೆ. ಮಹೇಶ್ ಕುಮಾರ್ ಕಥೆ ಬರೆದು ನಿರ್ದೇಶನ ಕೂಡ ಮಾಡುತ್ತಿದ್ದಾರೆ. ಈಗಾಗಲೇ ಪ್ರೀ ಪ್ರೊಡಕ್ಷನ್ ಕೆಲಸದಲ್ಲಿ ಬ್ಯುಸಿಯಾಗಿರೋ ಮಹೇಶ್ ಆದಷ್ಟು ಬೇಗ ಸಿನಿಮಾ ಆರಂಭ ಮಾಡುವ ತರಾತುರಿಯಲ್ಲಿದ್ದಾರೆ. ಆದರೆ, ಅಭಿಷೇಕ್ ರಿಲೀಸ್‌ಗೆ ರೆಡಿಯಾಗಿರುವ 'ಬ್ಯಾಡ್ ಮ್ಯಾನರ್ಸ್' ಸಿನಿಮಾದ ಪ್ರಚಾರದಲ್ಲಿ ಬ್ಯುಸಿಯಾಗಲಿದ್ದಾರೆ. ಹೀಗಾಗಿ ಆ ಸಿನಿಮಾ ರಿಲೀಸ್ ಬಗ್ಗೆ ಮಾಹಿತಿ ಹೊರಬೀಳುವ ಸಾಧ್ಯತೆಯಿದೆ.
ಇಂದು (ಅಕ್ಟೋಬರ್ 3) ರಿಲೀಸ್ ಮಾಡುವ ಪೋಸ್ಟರ್ ಫ್ಯಾನ್ಸ್‌ಗೆ ಸಖತ್ ಕಿಕ್ ಕೊಡುತ್ತಿದೆ. ವಾರಿಯರ್ ಲುಕ್‌ನಲ್ಲಿ ಖಡ್ಗ ಹಿಡಿದು ನಿಂತಿರುವ ಅಭಿಷೇಕ್ ಅಂಬರೀಶ್ ಲುಕ್ ಥ್ರಿಲ್ ಆಗಿದೆ. ಹಾಲಿವುಡ್ ಸಿನಿಮಾ ರೇಂಜ್‌ನಲ್ಲಿದೆ ಅನ್ನೋದು ಹಲವರ ಅಭಿಪ್ರಾಯ.
ಇನ್ನು ರಾಕ್‌ಲೈನ್ ವೆಂಕಟೇಶ್ ನಿರ್ಮಾಣದ ಸಿನಿಮಾ ಅಂದ್ಮೇಲೆ ಬಜೆಟ್ ಏನೂ ಕಮ್ಮಿ ಇರುವುದಿಲ್ಲ. ಅಭಿಷೇಕ್ ಅಂಬರೀಶ್ ನಾಲ್ಕನೇ ಸಿನಿಮಾ ಐತಿಹಾಸಿಕ ಹಿನ್ನೆಲೆಯುಳ್ಳ ಕಥೆಯಾಗಿರುವುದರಿಂದ ಸಿನಿಮಾದ ಬಜೆಟ್ ಸುಮಾರು 50 ಕೋಟಿ ರೂಪಾಯಿ ಎಂದು ವರದಿಯಾಗಿದೆ.
"ಸಿಂಹವು ಬರೆಯಲು ಕಲಿಯುವವರೆಗೆ, ಇತಿಹಾಸವು ಯಾವಾಗಲೂ ಬೇಟೆಗಾರರನ್ನು ವೈಭವೀಕರಿಸುತ್ತದೆ" ಎಂದು ಡೈಲಾಗ್ ಬರೆದಿರೋ ಮಹೇಶ್ ಕುಮಾರ್ ಸಿನಿಮಾದ ಇನ್ನಷ್ಟು ಮಾಹಿತಿಯನ್ನು ಡಿಸೆಂಬರ್ ವೇಳೆಗೆ ರಿವೀಲ್ ಮಾಡಲಿದ್ದಾರೆ. ಸದ್ಯಕ್ಕೆ ಸಿನಿಮಾದ ಬಜೆಟ್ 50 ಕೋಟಿ ಆಗಿದ್ದು, ಅಭಿಷೇಕ್ ಜೊತೆ ಟಾಲಿವುಡ್‌ನಿಂದ ಸ್ಟಾರ್ ನಟ ಬರುವ ಸಾಧ್ಯತೆಯಿದೆ.


Click it and Unblock the Notifications











