'ಒಲವಿನ ಉಡುಗೊರೆ' ಕೊಟ್ಟು 'ಚಳಿ ಚಳಿ' ಎಂದು ಭಾವಿ ಪತ್ನಿ ಅವಿವಾ ಜೊತೆ ಅಭಿ ಡ್ಯಾನ್ಸ್: ತಂದೆ ಹುಟ್ಟುಹಬ್ಬಕ್ಕೆ ಗಿಫ್ಟ್
ಒಂದ್ಕಡೆ ರೆಬೆಲ್‌ಸ್ಟಾರ್ ಅಂಬರೀಶ್ 71ನೇ ಹುಟ್ಟುಹಬ್ಬ. ಇನ್ನೊಂದು ಕಡೆ ಅಭಿಷೇಕ್ ಅಂಬರೀಶ್ ಮದುವೆ ಸಂಭ್ರಮ. ರೆಬೆಲ್ ಅಭಿಮಾನಿಗಳಿಗೆ ಡಬಲ್ ಸಂಭ್ರಮ. ಇದೇ ಸಂದರ್ಭದಲ್ಲಿ ಅಭಿಷೇಕ್ ಹಾಗೂ ಭಾವಿ ಪತ್ನಿ ಅವಿವಾ ಬಿಡಪ ಜೊತೆ ತಂದೆಯ ಹಾಡುಗಳಿಗೆ ಹೆಜ್ಜೆ ಹಾಕಿದ್ದಾರೆ.
ಇದೇ ಜೂನ್ 5ರಂದು ರೆಬೆಲ್‌ಸ್ಟಾರ್ ಪುತ್ರ ಅಭಿಷೇಕ್ ಫ್ಯಾಷನ್ ಗುರು ಪ್ರಸಾದ್ ಬಿಡಪ ಪುತ್ರಿಯ ಅವಿವಾ ಜೊತೆ ವೈವಾಹಿಕ ಜೀವನಕ್ಕೆ ಕಾಲಿಡುತ್ತಿದ್ದಾರೆ. ಇವರಿಬ್ಬರ ಮದುವೆಗೆ ಭರ್ಜರಿಯಾಗಿ ಸಿದ್ಧತೆಗಳು ಆರಂಭ ಆಗಿವೆ. ಈ ಮಧ್ಯೆ ತಂದೆಯ ಹುಟ್ಟುಹಬ್ಬಕ್ಕೆ ಅವರದ್ದೇ ಹಾಡುಗಳ ಮೂಲಕ ಗೌರವ ಅರ್ಪಣೆ ಮಾಡಲಾಗಿದೆ.

ವಿಶೇಷ ಅಂದರೆ, ಈ ಹಾಡಿನಲ್ಲಿ ಭಾವಿ ಪತ್ನಿ ಅವಿವಾ ಬಿಡಪ ಕೂಡ ಅಭಿ ಜೊತೆ ಹೆಜ್ಜೆ ಹಾಕಿದ್ದಾರೆ. ಫುಲ್ ರೆಟ್ರೋ ಲುಕ್‌ನಲ್ಲಿ ಅಭಿಷೇಕ್ ಅಂಬರೀಶ್ ಹಾಗೂ ಅವಿವಾ ಬಿಡಪ ಹೆಜ್ಜೆ ಹಾಕಿರೋ ಹಾಡು ವೈರಲ್ ಆಗುತ್ತಿದೆ.
ಅಭಿಮಾನಿಗಳಿಗೆ ಸ್ಪೆಷಲ್ ವಿಡಿಯೋ
ಇದು ಡಾ. ಅಂಬರೀಶ್ 71ನೇ ಹುಟ್ಟುಹಬ್ಬಕ್ಕಾಗಿ ಅಭಿಷೇಕ್ ಅಂಬರೀಶ್ ಮತ್ತು ಕೆಆರ್‌ಜಿ ಕನೆಕ್ಟ್ಸ್ ಜೊತೆಯಾಗಿ ಸ್ಪೆಷಲ್ ವಿಡಿಯೋ ಮಾಡಿದೆ. ಈ ಮೂಲಕ ರೆಬೆಲ್ ಸ್ಟಾರ್ ಅಭಿಮಾನಿಗಳಿಗೆ ಸ್ಪೆಷಲ್ ಟ್ರೀಟ್ ಕೊಟ್ಟಿದೆ.
ಈ ಸ್ಪೆಷಲ್ ವೀಡಿಯೋದಲ್ಲಿ ಅಭಿಷೇಕ್ ಮತ್ತು ಅವಿವಾ ರೆಬೆಲ್‌ಸ್ಟಾರ್ ಅಭಿನಯದ ಹಲವು ಜನಪ್ರಿಯ ಹಾಡುಗಳಿಗೆ ಸ್ಟೆಪ್ ಹಾಕಿದ್ದಾರೆ. ಅಂಬರೀಶ್ ಅವರ ಎವರ್‌ಗ್ರೀನ್ ಸಿನಿಮಾ 'ಒಲವಿನ ಉಡುಗೊರೆ', 'ಚಕ್ರವ್ಯೂಹ', 'ಮಂಡ್ಯದ ಗಂಡು' ಸಿನಿಮಾ ಜನಪ್ರಿಯರ ಹಾಡಿಗೆ ಹೆಜ್ಜೆ ಹಾಕಿದ್ದಾರೆ. ಈ ಸ್ಪೆಷಲ್ ವಿಡಿಯೋ ಬಿಡುಗಡೆಯಾದ ಕೆಲವೇ ಕ್ಷಣಗಳಲ್ಲಿ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ.

ಕೆಆರ್‌ಜಿ ಜೊತೆ ಸಿನಿಮಾ?
ಅಭಿಷೇಕ್ ಅಂಬರೀಶ್ ಎರಡನೇ ಸಿನಿಮಾ 'ಬ್ಯಾಡ್ ಮ್ಯಾನರ್ಸ್' ಮುಗಿದಿದೆ. ರಾಕ್‌ಲೈನ್ ವೆಂಕಟೇಶ್ ನಿರ್ಮಾಣ ಹಾಗೂ ಮಹೇಶ್ ಕುಮಾರ್ ನಿರ್ದೇಶನದ ಸಿನಿಮಾ ಇನ್ನೂ ಸೆಟ್ಟೇರಬೇಕಿದೆ. ಈ ಮಧ್ಯೆ ಮುಂಗಾರು ಮಳೆ ಕೃಷ್ಣ ನಿರ್ದೇಶನದ 'ಕಾಳಿ' ಶೂಟಿಂಗ್ ನಡೆಯುತ್ತಿದೆ. ಹೀಗಾಗಿ ಅಭಿಷೇಕ್ ಸ್ಯಾಂಡಲ್‌ವುಡ್‌ನಲ್ಲಿ ಬ್ಯುಸಿಯಾಗಿದ್ದಾರೆ.
ಈ ಮಧ್ಯೆ ಕೆಆರ್‌ಜಿ ಸ್ಟುಡಿಯೋ ಜೊತೆ ಸೇರಿ ಅಭಿಷೇಕ್ ಅಂಬರೀಶ್ ಈ ಸ್ಪೆಷಲ್ ಸಾಂಗ್ ಅನ್ನು ರಿಲೀಸ್ ಮಾಡಿದ್ದಾರೆ. ಈ ಹಾಡಿ ರಿಲೀಸ್ ಆಗುತ್ತಿದೆ. ಕೆಆರ್‌ಜಿ ಸ್ಟುಡಿಯೋ ಅಭಿ ಜೊತೆ ಸೇರಿ ಸಿನಿಮಾ ಮಾಡಹುದು. ಅದರ ಮುನ್ಸೂಚನೆ ಇರಬಹುದು ಎಂದು ನೆಟ್ಟಿಗರು ಅಂದಾಜು ಮಾಡುತ್ತಿದ್ದಾರೆ. ಆದರೆ, ಈ ಬಗ್ಗೆ ಅಧಿಕೃತವಾಗಿ ಯಾವುದೇ ಮಾಹಿತಿ ಇಲ್ಲ.
ಮದುವೆ ಬಳಿಕ 'ಬ್ಯಾಡ್ ಮ್ಯಾನರ್ಸ್' ರೆಡಿ
ಅಭಿಷೇಕ್ ಅಂಬರೀಶ್ ಹಾಗೂ ಸೂರಿ ಕಾಂಬಿನೇಷನ್‌ನಲ್ಲಿ 'ಬ್ಯಾಡ್ ಮ್ಯಾನರ್ಸ್' ಸಿನಿಮಾ ಬಿಡುಗಡೆಗೆ ಸಜ್ಜಾಗಿದೆ. ಜೂನ್ 23ರಂದು ಈ ಸಿನಿಮಾ ಬಿಡುಗಡೆಯಾಗುವ ಸಾಧ್ಯತೆಯಿದೆ. ಹೀಗಾಗಿ ಮದುವೆಯಾಗುತ್ತಿದ್ದಂತೆ ಸಿನಿಮಾದ ಪ್ರಚಾರದಲ್ಲಿ ಭಾಗಿಯಾಗುವ ಸಾಧ್ಯೆಯಿದೆ.
'ಬ್ಯಾಡ್ ಮ್ಯಾನರ್ಸ್' ಮದುವೆ ಬಳಿಕ ಬಿಡುಗಡೆಗೆಯಾಗುತ್ತಿರುವ ಮೊದಲ ಸಿನಿಮಾ. ಹಾಗೇ ಅಭಿಷೇಕ್ ಅಂಬರೀಶ್ ವೃತ್ತಿ ಬದುಕಿನ ಅತ್ಯಂತ ಪ್ರಮುಖ ಸಿನಿಮಾ ಕೂಡ ಹೌದು. ಅಭಿಷೇಕ್‌ಗೆ ಈ ಸಿನಿಮಾ ರಚಿತಾ ರಾಮ್ ಮತ್ತು ಪ್ರಿಯಾಂಕಾ ನಾಯಕಿಯರಾಗಿ ಕಾಣಿಸಿಕೊಂಡಿದ್ದಾರೆ. ಅಲ್ಲದೆ ದುನಿಯಾ ಸೂರಿ ಈ ಸಿನಿಮಾಗೆ ಆಕ್ಷನ್ ಕಟ್ ಹೇಳಿರುವುದರಿಂದ 'ಬ್ಯಾಡ್ ಮ್ಯಾನರ್ಸ್' ಸಿನಿಮಾವನ್ನು ಎದುರು ನೋಡುತ್ತಿದ್ದಾರೆ.


Click it and Unblock the Notifications











